ಬೆಳಗಾವಿಯಲ್ಲಿ ಶಿವಸೇನೆ ಪುಂಡರ ವರ್ತನೆ ಹದ್ದು ಮೀರಿದೆ. ಕನ್ನಡ ಮಾತನಾಡಿ ಎಂದಿದ್ದಕ್ಕೆ ಕರ್ನಾಟಕದ ಬಸ್ ಕಂಡಕ್ಟರ್ ಮೇಲೆ ಮರಾಠಿ ಪುಂಡರು ಹಲ್ಲೆ ಮಾಡಿದ್ದಾರೆ. ಇದಾದ ಬಳಿಕ ಕರ್ನಾಟಕದ ಬಸ್ಗಳನ್ನ ತಡೆದು ಹೇಗೆ ದುಂಡಾವರ್ತನೆ ತೋರುತ್ತಿದ್ದಾರೆ. ಬಸ್ ಮುಂಭಾಗ ಜೈ ಮಹಾರಾಷ್ಟ್ರ ಅಂತ ಬರೆದಿದ್ದಲ್ಲದೇ ಡ್ರೈವರ್ಕೆಳಗಿಳಿಸಿ ಹೇಗೆ ರೌಡಿಗಳಂತೆ ಅಟ್ಟಹಾಸ ಮೆರೆದಿಯುತ್ತಿದ್ದಾರೆ. ಇದರ ಬೆನ್ನಲ್ಲೇ ಕನ್ನಡ ಮಾತಾಡಿದ್ದಕ್ಕೆ ಕರವೇ ತಾಲೂಕು ಉಪಾಧ್ಯಕ್ಷನಿಗೆ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ.

ಬೆಳಗಾವಿ, (ಫೆಬ್ರವರಿ 24): ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ಬೆಳಗಾವಿಯಲ್ಲಿ ಮರಾಠಿ ಪುಂಡರು ಕರ್ನಾಟಕ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿರುವ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿಯಲ್ಲಿ ಬೂದಿ ಮುಚ್ಚಿದ ಕೆಂಡಂತಿದೆ. ಇದರ ಬೆನ್ನಲ್ಲೇ ಇದೀಗ ಬೆಳಗಾವಿಯಲ್ಲಿ ಮತ್ತೆ ಮರಾಠಿ ಯುವಕರ ಗೂಂಡಾಗಿರಿ ಮುಂದುವರೆದಿದ್ದು, ಕನ್ನಡ ಮಾತಾಡಿದ್ದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣದ ತಾಲೂಕು ಉಪಾಧ್ಯಕ್ಷನಿಗೆ ಥಳಿಸಿರುವ ಘಟನೆ ನಡೆದಿದೆ. ಖಾನಾಪುರ ತಾಲೂಕು ಕರವೇ ನಾರಾಯಣ ಗೌಡ ಬಣದ ಉಪಾಧ್ಯಕ್ಷ ಜಯವಂತ ನಿಡಗಲ್ಕರ್ ಮೇಲೆ ಹಲ್ಲೆ ಮಾಡಲಾಗಿದೆ.

ಕನ್ನಡ ಮಾತಾಡಿದ್ದಕ್ಕೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿ ಕ್ರಾಸ್ ಬಳಿಯ ಹೊಟೇಲ್ ನಲ್ಲಿ ಗಲಾಟೆ ನಡೆದಿದ್ದು, ಈ ವೇಳೆ ಖಾನಾಪುರ ತಾಲೂಕು ಕರವೇ ನಾರಾಯಣ ಗೌಡ ಬಣದ ಉಪಾಧ್ಯಕ್ಷ ಜಯವಂತ ನಿಡಗಲ್ಕರ್ ಅವರ ಮೇಲೆ ಮಾರಾಠಿ ಯುವರು ರಕ್ತ ಬರುವಂತೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ತಕ್ಷಣವೇ ಗಾಯಗೊಂಡ ಕರವೇ ಮುಖಂಡನನ್ನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದಲ್ಲಿ ಶಿವಸೇನೆ ಪುಂಡರ ಅಟ್ಟಹಾಸ ಜೋರಾಗಿದೆ. ಕರ್ನಾಟಕದ ಬಸ್ಗಳನ್ನೇ ಟಾರ್ಗೆಟ್ ಮಾಡುತ್ತಿರುವ ಶಿವಸೇನೆ ಗೂಂಡಾಗಳು,, ಚಾಲಕರ ಮೇಲೆ ದರ್ಪ ಮೆರೆಯುತ್ತಿದ್ದಾರೆ.. ಇಂದು ಒಂದೇ ದಿನ ಎರಡು ಬಾರಿ ಉದ್ಧಟನ ತೋರಿದ್ದಾರೆ.. ಬೆಳಗ್ಗೆ ಬಸ್ಗಳಿಗೆ ಕಪ್ಪು ಮಸಿ ಬಳಿದು, ಬೋರ್ಡ್ ಒಡೆದು ಹಾಕಿದ್ದ ಪ್ರಕರಣ ಇನ್ನು ಹಸಿ ಹಸಿ ಆಗಿದೆ.. ಹೀಗಿರುವಾಗ ಮಧ್ಯಾಹ್ನದ ಹೊತ್ತಿಗೆ ಸೊಲ್ಲಾಪುರ ಪಟ್ಟಣದಲ್ಲಿ ಶಿವಸೇನೆ ಪುಂಡರು ರಾಜ್ಯದ ಸಾರಿಗೆ ಬಸ್ ಮೇಲೆ ಕೇಸರಿ ಕಲರ್ನಲ್ಲಿ ಜೈ ಮಹಾರಾಷ್ಟ್ರ ಎಂದು ಬರೆದಿದ್ದಾರೆ.

ಜೈ ಮಹಾರಾಷ್ಟ್ರ ಅಂತ ಚಾಲಕನ ಬಾಯಿಯಿಂದ ಕೂಗಿಸಿದಲ್ಲದೇ ಆ ಚಾಲಕ ಹಿರಿಯರು ಅಂತ ನೋಡದೇ ಅವರ ತಲೆಗೆ ಕೇಸರಿ ಹಚ್ಚಿ ವಿಕೃತಿ ಮೆರೆದಿದ್ದಾರೆ.. ಚಾಲಕ ಬೇಡ ಅಂತ ಹೇಳಿದ್ರೂ ಅವರನ್ನೇ ಎಳೆದುಕೊಂಡು ಕೇಸರಿ ಎರಚಿದ್ದಾರೆ.
ಕಂಡಕ್ಟರ್ ಹಾಗೂ ಬಸ್ಗಳ ಮೇಲಿನ ದಾಳಿ ಖಂಡಿಸಿ, ಶಿವಸೇನೆ ಪುಂಡರ ವಿರುದ್ಧ ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ ಮಾಡಲಾಯ್ತು.. ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರಿನಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ರೆ, ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೀಗದಿಗಿಳಿದಿದ್ರು.. ಇಷ್ಟೇ ಅಲ್ಲ ಕನ್ನಡಿಗರ ಮೇಲೆ ಹಲ್ಲೆ ಖಂಡಿಸಿ, ನಾಳೆ ಬೆಳಗಾವಿ ಚಲೋಗೆ ಕರವೇ ಕರೆ ಕೊಟ್ಟಿದೆ.