ಮೈಸೂರು: ಸಾಮಾನ್ಯವಾಗಿ ಮೈಸೂರು ನಗರದಲ್ಲಿ ಕೋಮುಗಲಭೆ, ಗುಂಪು ಘರ್ಷಣೆಗಳು ನಡೆಯೋದು ವಿರಳ. ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ನಗರದ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಸುರೇಶ್ ಎಂಬ ಕೋಮುವ್ಯಾದಿ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ ಪೋಸ್ಟೊಂದು ಉದ್ವಿಗ್ನ ಸ್ಥಿತಿಯನ್ನು ಸೋಮವಾರ ರಾತ್ರಿ ನಿರ್ಮಿಸಿತ್ತು. ಪೋಸ್ಟ್ ನೋಡಿ ಕುಪಿತಗೊಂಡ ಯುವಕರು ಸಾವಿರಾರು ಸಂಖ್ಯೆಯಲ್ಲಿ ಉದಯಗಿರಿ ಪೊಲೀಸ್ ಠಾಣೆಯತ್ತ ಬಂದು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರ ಕಾರು ಕಲ್ಲು ತೂರಾಟದಲ್ಲಿ ಜಖಂಗೊಂಡಿದೆ ಮತ್ತು ಬೇರೆ ವಾಹನಗಳ ಮೇಲೂ ದಾಳಿ ನಡೆದಿದೆ

Mysuru Incident: ಅನ್ಯಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್ ಕೇಸ್..ಉದಯಗಿರಿ ಠಾಣೆ ಬಳಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ
: ಅವಹೇಳನಕಾರಿ ಪೋಸ್ಟ್ ಗಲಾಟೆಗೆ ಹೆದರಿ ಅಂಗಡಿ ಮುಂಗಟ್ಟು ಬಂದ್ ಮಾಡಿರೋ ವ್ಯಾಪಾರಸ್ಥರು
ಆರೋಪಿ ಸುರೇಶ್


ಮೈಸೂರು, ಫೆಬ್ರವರಿ 11: ಉದಯಗಿರಿ ಗಲಾಟೆಯಲ್ಲಿ ಏಳು ಜನ ಪೊಲೀಸರಿಗೆ ಗಾಯ ಆಗಿದೆ ಎಂದು ಎಡಿಜಿಪಿ ಆರ್ ಹಿತೇಂದ್ರ ತಿಳಿಸಿದರು. ಉದಯಗಿರಿ ಪೊಲೀಸ್ ಠಾಣೆ ಬಳಿ ಮಾತನಾಡಿದ ಅವರು, ಗಲಾಟೆ ಮಾಡಿದವರ ಬಂಧನಕ್ಕೆ ಸ್ಥಳೀಯ ಪೊಲೀಸರಿಂದ ತಂಡ ರಚನೆ ಮಾಡಲಾಗಿದೆ. ಅವಹೇಳನಕಾರಿ ಪೋಸ್ಟರ್ ಹಾಕಿದ ವಿಚಾರದಲ್ಲಿ ರೋಪಿಯನ್ನು ಬೇಗ ಬಿಟ್ಟು ಬಿಡುತ್ತಾರೆ ಎಂದು ಕೆಲವರು ಗಲಾಟೆ ಮಾಡಿದ್ದಾರೆ. ಪೋಸ್ಟರ್ ವಿಚಾರದಲ್ಲಿ ಕೆಲವು ವಂದತಿ ಹಬ್ಬಿದ್ದಕ್ಕೆ ಗಲಾಟೆಯಾಗಿದೆ. ಗಲಾಟೆಯ ಹಿಂದೆ ಯಾರಿದ್ದಾರೆ? ಯಾವುದಾದರೂ ಸಂಘಟನೆ ಇದೆಯಾ ಎಂದುದು ತನಿಖೆಯಿಂದ ಗೊತ್ತಾಗಲಿದೆ. ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ ಎಂದು ಅವರು ಹೇಳಿದ್ದಾರೆ.

ಆಗಿದ್ದೇನು..?
ದೆಹಲಿಯಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಯುವಕ ಪೋಸ್ಟ್ ಮಾಡಿದ್ದ. ಪೋಸ್ಟ್ ವಿರುದ್ಧ ಸಹಸ್ರಾರು ಜನ ರೊಚ್ಚಿಗೆದ್ದು ಗಲಾಟೆ ಮಾಡಿದ್ದಾರೆ. ಉದಯ ಗಿರಿಯ ಮುಖ್ಯ ರಸ್ತೆಯ ಸಂಘಿ ಕೋಮುವ್ಯಾದಿ ಯುವಕ ನೊಬ್ಬ,ರಾಹುಲ್ ಗಾಂಧಿ, ಅಖಿಲೇಶ್ ಯಾದವ್, ಕೇಜ್ರಿವಾಲ್ ಭಾವಚಿತ್ರ ಹಾಕಿ ಅದರ ಮೇಲೆ ಮುಸ್ಲಿಂ ಧರ್ಮಗುರುಗಳ ಸಾಲುಗಳನ್ನ ಉಲ್ಲೇಖಿಸಿದ್ದ. ಇದ್ರಿಂದ ಗಲಾಟೆ ನಡೆದಿದ್ದು, ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಘಟನೆ ಕುರಿತು ಉದಯಗಿರಿ ಪೊಲೀಸರು ಸುಮೊಟೋ ಕೇಸ್ ದಾಖಲಿಸಿಕೊಂಡು ಯುವಕನನ್ನು ಬಂಧಿಸಿದ್ದಾರೆ
ಬಂಧಿತ ಸುರೇಶ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಹಾಗೂ ಅರವಿಂದ್ ಕೇಜ್ರಿವಾಲ್ ಅವರನ್ನು ಅರೆನಗ್ನ ರೀತಿಯಲ್ಲಿ ಚಿತ್ರಿಸಿ, ಅವರ ತೊಡೆ ಮೇಲೆ ವ್ಯಕ್ತಿಯೊಬ್ಬ ನಮಾಝ್ ಮಾಡುತ್ತಿರುವಂತೆ ತೋರಿಸಲಾಗಿತ್ತು. ಜೊತೆಗೆ ಪ್ರವಾದಿ ಮುಹಮ್ಮದ್ ಅವರ ಕುರಿತು ಅವಹೇಳನಕಾರಿ ಸಾಲುಗಳನ್ನು ಬರೆಯಲಾಗಿತ್ತು ಎಂದು ವರದಿಯಾಗಿದೆ.
ಸುರೇಶ್ ಹಾಕಿದ್ದ ಪೋಸ್ಟರ್ ವೈರಲ್ ಆದ ಬಳಿಕ ಸೋಮವಾರ ರಾತ್ರಿ ಮುಸ್ಲಿಂ ಸಮುದಾಯದ ಮುಖಂಡರು ಉದಯಗಿರಿ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದರು. ಆರೋಪಿ ಸುರೇಶ್ ಬಂಧನಕ್ಕೆ ಒತ್ತಾಯಿಸಿದ್ದರು.