ವಾಷಿಂಗ್ಟನ್: ಲೈಂಗಿಕ ಸಂಬಂಧ ಬಗ್ಗೆ ಬಾಯಿ ಬಿಡದಂತೆ ನೀಲಿ ಚಿತ್ರ ತಾರೆಯೊಬ್ಬರಿಗೆ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಣ ನೀಡಿದ್ದಕ್ಕೆ ಸಂಬಂಧಿಸಿ ಕೋರ್ಟ್ ಜ.10ಕ್ಕೆ ತೀರ್ಪು ನೀಡಲಿದೆ.

ಜ.20ರಂದು ಅಧಿಕಾರ ವಹಿಸಿಕೊಳ್ಳುವ ಮೊದಲೇ ತೀರ್ಪು ಪ್ರಕಟ ವಾಗಲಿರುವುದು ಮಹತ್ವ ಪಡೆದಿದೆ. ಟ್ರಂಪ್‌ಗೆ ಜೈಲು ಅಥವಾ ದಂಡ ವಿಧಿಸುವ ಸಾಧ್ಯತೆಗಳಿಲ್ಲ ಎಂದು ಜಡ್ಜ್ ಜುವಾನ್ ಮರ್ಚನ್ ಹೇಳಿದ್ದಾರೆ.ಅಮೆರಿಕದ ಇತಿಹಾಸದಲ್ಲಿ ಮಾಜಿ ಅಥವಾ ಹಾಲಿ ಅಧ್ಯಕ್ಷರೊಬ್ಬರು ಕ್ರಿಮಿನಲ್ ಕೇಸ್‌ಗೆ ಸಂಬಂಧಿಸಿ ಶಿಕ್ಷೆಗೊಳಗಾದ, ದೋಷಾ ರೋಪಣೆ ಎದುರಿಸಿದ ಉದಾಹರ ಣೆ ಗಳಿಲ್ಲ.
