Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ ಗೆದ್ರೆ ರಾಜಕೀಯ ಬಿಡುವೆ: ಶಾಸಕ ಕೆವೈ ನಂಜೇಗೌಡ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    ಸೌಜನ್ಯ ಮಾವ ವಿಠಲ್‌ಗೌಡ ತೋರಿಸಿದ ಬಂಗ್ಲೆಗುಡ್ಡೆ ಕಾಡಿನಲ್ಲಿ 5 ಅಸ್ಥಿಪಂಜರ ಮೂಳೆ ಪತ್ತೆ!

    ಸೌಜನ್ಯ ಮಾವ ವಿಠಲ್‌ಗೌಡ ತೋರಿಸಿದ ಬಂಗ್ಲೆಗುಡ್ಡೆ ಕಾಡಿನಲ್ಲಿ 5 ಅಸ್ಥಿಪಂಜರ ಮೂಳೆ ಪತ್ತೆ!

    ಯುವತಿ ದೇಹದ ಮೇಲಿನ ಕಪ್ಪು ಚುಕ್ಕೆ ಗುರುತಿಸಿದ AI.. ಫೋಟೋ ಅಪ್​ಲೋಡ್​ ಮಾಡುವಾಗ ಹುಷಾರ್​!

    ವಿಜಯಪುರ| SBI ಬ್ಯಾಂಕ್‌ ದರೋಡೆ – ಪಿಸ್ತೂಲ್‌ ತೋರಿಸಿ 8 ಕೋಟಿ ನಗದು, 50 ಕೆಜಿ ಚಿನ್ನದೊಂದಿಗೆ ಪರಾರಿ

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು – ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶ

    ಸ್ವಾತಂತ್ರ್ಯೋತ್ಸವ ಪ್ರಯುಕ್ತ SDPI ಯಿಂದ ಬಿಸಿ ರೋಡ್ ನಲ್ಲಿ ತಿರಂಗಾ ರ್‍ಯಾಲಿ ಹಾಗೂ ಸಾರ್ವಜನಿಕ ಸಭೆ

    ಬಿಜೆಪಿ ಮಾಡಿದ 40% ಕಮಿಷನ್ ಹಗರಣ ಮತ್ತು ಕೋವಿಡ್ ಹಗರಣದ ವಿರುದ್ಧ ಕ್ರಮಕ್ಕೆ ಮುಂದಾಗದ ಕಾಂಗ್ರೆಸ್‌ ಸರಕಾರ ಹೊಂದಾಣಿಕೆ ರಾಜಕಾರಣ ಮಾಡುತ್ತಿದೆ – ಎಸ್‌ಡಿಪಿಐ:

    15 ವರ್ಷಕ್ಕಿಂತ ಹಳೇ ಸರ್ಕಾರಿ ವಾಹನಗಳನ್ನ ಗುಜರಿಗೆ ಹಾಕಿ: ಸರ್ಕಾರ ಆದೇಶ

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಸುದ್ದಿ ವಿದೇಶ

ಇಂದು ಅಮೆರಿಕ ಚುನಾವಣೆ: ಯಾರಿಗೆ ಜಯ ಟ್ರಂಪ್‌ಗೋ?, ಭಾರತೀಯ ಮೂಲದ ಕಮಲಾಗೋ?

editor tv by editor tv
November 5, 2024
in ವಿದೇಶ
0
ಇಂದು ಅಮೆರಿಕ ಚುನಾವಣೆ: ಯಾರಿಗೆ ಜಯ ಟ್ರಂಪ್‌ಗೋ?, ಭಾರತೀಯ ಮೂಲದ ಕಮಲಾಗೋ?
1.9k
VIEWS
Share on FacebookShare on TwitterShare on Whatsapp

ಒಂದು ವೇಳೆ ಸಮೀಕ್ಷೆ ತಲೆಕೆಳಗಾಗಿ ಕಮಲಾ ಗೆದ್ದರೆ ಅಧ್ಯಕ್ಷ ಪದವಿ ಪಡೆದ ಮೊದಲ ಭಾರತೀಯೆ ಎಂಬ ಖ್ಯಾತಿ ಪಡೆಯಲಿದ್ದರೆ, ಟ್ರಂಪ್ ಗೆದ್ದರೆ 2ನೇ ಬಾರಿ ಅಧ್ಯಕ್ಷ ಆದ ಸಾಧನೆ ಮಾಡಲಿದ್ದಾರೆ. ಆದರೆ ಇದು ಇವಿಎಂ ಬದಲು ಮತಪತ್ರದ ಮೂಲಕ ನಡೆಯುವ ಚುನಾವಣೆ ಆಗಿರುವ ಕಾರಣ ಅಂತಿಮ ಫಲಿತಾಂಶ ಪ್ರಕಟಕ್ಕೆ ಕೆಲವು ದಿನ ಹಿಡಿಯಬಹುದಾಗಿದೆ

ವಾಷಿಂಗ್ಟನ್(ನ.05):  ಅಮೆರಿಕ ಅಧ್ಯಕ್ಷೀಯ ಚುನಾವಣೆ ಇಂದು(ಮಂಗಳವಾರ) ನಡೆಯಲಿದ್ದು, ರಿಪಬ್ಲಿಕನ್ ಪಾರ್ಟಿ ನಾಯಕ ಡೊನಾಲ್ಡ್ ಗೆಲ್ಲುತ್ತಾರಾ ಅಥವಾ ಭಾರತೀಯ ಮೂಲದವರಾದ ಡೆಮಾ ಕ್ರೆಟಿಕ್ ಪಾರ್ಟಿ ಅಭ್ಯರ್ಥಿ ಕಮಲಾ ಹ್ಯಾರಿಸ್ ಗೆಲ್ಲುತ್ತಾರಾ ಎಂಬುದು ನಿರ್ಧಾರವಾಗಲಿದೆ. ಇದರ ನಡುವೆ, ನ.1 ಹಾಗೂ 2ರಂದು ‘ಅಟ್ಲಾಸ್ ಇಂಟೆಲ್’ ಎಂಬ ಸಮೀಕ್ಷಾ ಸಂಸ್ಥೆ ನಡೆಸಿದ ಸಮೀಕ್ಷೆ, ಕೂದಲೆಳೆ ಅಂತರದಲ್ಲಿ ವಿಜಯಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದೆ.

ದೇಶದಲ್ಲಿ ನಿರ್ಣಾಯಕ ಎನ್ನಲಾದ 7 ರಾಜ್ಯಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಟ್ರಂಪ್ ಪರ ಶೇ.49 ಹಾಗೂ ಕಮಲಾ ಪರ ಶೇ.47.2 ಮಂದಿ ಒಲವು ವ್ಯಕ್ತಪಡಿಸಿದ್ದಾರೆ. ಈ ಮೂಲಕ ಶೇ.1.8 ಮತದಿಂದ ಟ್ರಂಪ್ ಮುಂದಿದ್ದಾರೆ. ಒಂದು ವೇಳೆ ಸಮೀಕ್ಷೆ ತಲೆಕೆಳಗಾಗಿ ಕಮಲಾ ಗೆದ್ದರೆ ಅಧ್ಯಕ್ಷ ಪದವಿ ಪಡೆದ ಮೊದಲ ಭಾರತೀಯೆ ಎಂಬ ಖ್ಯಾತಿ ಪಡೆಯಲಿದ್ದರೆ, ಟ್ರಂಪ್ ಗೆದ್ದರೆ 2ನೇ ಬಾರಿ ಅಧ್ಯಕ್ಷ ಆದ ಸಾಧನೆ ಮಾಡಲಿದ್ದಾರೆ. ಆದರೆ ಇದು ಇವಿಎಂ ಬದಲು ಮತಪತ್ರದ ಮೂಲಕ ನಡೆಯುವ ಚುನಾವಣೆ ಆಗಿರುವ ಕಾರಣ ಅಂತಿಮ ಫಲಿತಾಂಶ ಪ್ರಕಟಕ್ಕೆ ಕೆಲವು ದಿನ ಹಿಡಿಯಬಹುದಾಗಿದೆ.

50 ರಾಜ್ಯಗಳಲ್ಲಿ 24 ಕೋಟಿ ಮತದಾರರು ಮತದಾನಕ್ಕೆ ಅರ್ಹರಾಗಿದ್ದು, ಈಗಾಗಲೇ ಇ-ಮೇಲ್ ಮೂಲಕ ಕೋಟ್ಯಂತರ ಜನ ಮತ ಚಲಾಯಿಸಿದ್ದಾರೆ. ಮತದಾನಕ್ಕೆ ಮಂಗಳವಾರ ತೆರೆ ಬೀಳಲಿದೆ. ಇವರು ಆಯ್ಕೆ ಮಾಡುವ 538 ಜನಪ್ರತಿನಿಧಿಗಳು (ಎಲೆಕ್ಟೋರಲ್ ಕಾಲೇಜ್) ಧ್ಯಕ್ಷರ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. 270 ಜನಪ್ರತಿನಿಧಿಗಳ ಬೆಂಬಲ ಪಡೆದವರು ಅಧ್ಯಕ್ಷರಾಗಿ ಆಯ್ಕೆ ಆಗಲಿದ್ದಾರೆ. 50ರಲ್ಲಿ 7 ರಾಜ್ಯಗಳು ಬಹುಪಾಲು ಕ್ಷೇತ್ರಗ ಳನ್ನು ಹೊಂದಿದ್ದು ಅಧ್ಯಕ್ಷರ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಇದರಲ್ಲಿ ಪೆನ್ಸಿಲ್ವೇ ನಿಯಾ ಹಾಗೂ ಬಹಾಯೋದಲ್ಲಿ ಗೆದ್ದವರಿಗೆ ಅಧ್ಯಕ್ಷ ಪಟ್ಟ ಖಚಿತ ಎಂಬ ನಂಬಿಕೆ ಇದೆ. ಏಕೆಂದರೆ ಇದುವರೆಗೂ ಒಂದು ಬಾರಿ ಬಿಟ್ಟರೆ ಉಳಿದೆಲ್ಲ ಚುನಾವಣೆಗಳಲ್ಲೂ ಒಹಾಯೋದಲ್ಲಿ ಮುನ್ನಡೆ ಸಾಧಿಸಿದವರಿಗೇ ಅಧ್ಯಕ್ಷ ಪಟ್ಟ ಸಿಕ್ಕಿದೆ. ಪೆನ್ಸಿಲ್ವೇನಿಯಾದಲ್ಲಿ 1948ರ ನಂತರ ಗೆದ್ದವರೆಲ್ಲ ಅಧ್ಯಕ್ಷರಾಗಿದ್ದಾರೆ. 

ಅಂತಿಮ ಫಲಿತಾಂಶ ವಿಳಂಬ?: 

ಮತದಾನ ಮುಗಿದ 12 ತಾಸಿನೊಳಗೆ ಮುಂದಿನ ಅಧ್ಯಕ್ಷ ರಾರು ಎಂಬುದು ಸ್ಪಷ್ಟವಾಗತೊಡಗುತ್ತದೆ. ಕಳೆದ ಸಲ ಸ್ಪಷ್ಟವಾಗಲು 4 ದಿನ ಹಿಡಿದಿತ್ತು. ಏಕೆಂದರೆ ಆದರೆ ಇದು ಬ್ಯಾಲೆಟ್ ಬಾಕ್ಸ್ ನಲ್ಲಿ ನಡೆಯುವ ಮತದಾನವಾದ ಕಾರಣ ಮತ ಎಣಿಕೆ ಪೂರ್ಣಗೊಂಡು ಅಂತಿಮ ಫಲಿತಾಂಶ ಪ್ರಕಟ ವಾಗಲು ವಾರಗಟ್ಟಲೇ ಸಮಯ ಹಿಡಿಯಬಹುದಾಗಿದೆ. ಅಲ್ಲದೆ, ಮರು ಎಣಿಕೆಗಳೂ ಅನೇಕ ಕಡೆ ನಡೆಯುತ್ತವೆ. ಹೀಗಾಗಿ ಎಣಿಕೆ ಪೂರ್ಣಗೊ ಳಿಸಲು ಡಿ.10ರ ಗಡುವು ವಿಧಿಸಲಾಗಿದೆ. 

ಇನ್ನು ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ 2020ರಲ್ಲಿ ಟ್ರಂಪ್ ಕೋರ್ಟ್‌ಗೆ ಹೋಗಿದ್ದರು. ಈ ಸಲವೂ ಅವರು ಸೋಲು ಅನುಭವಿಸುವ ಸಾಧ್ಯತೆ ಇದ್ದರೆ ಹೀಗೆ ಮಾಡಬಹುದು ಎನ್ನಲಾಗಿದೆ. ಇದೂ ಫಲಿತಾಂಶ ವಿಳಂಬಕ್ಕೆ ಕಾರಣ ಆಗಬಹುದು. ಅಂತಿಮ ಫಲಿತಾಂಶ ಪ್ರಕಟಣೆ ಬಳಿಕ ಆಯ್ಕೆ ಆಗುವ ಅಭ್ಯರ್ಥಿ, ಜನವರಿಯಲ್ಲಿ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

2016ರಲ್ಲಿ ‘ಗೆದ್ದರೂ’ ಸೋತಿದ್ದ ಹಿಲರಿ! 

ಅಮೆರಿಕದಲ್ಲಿ ಮತದಾರರು ನೇರವಾಗಿ ಅಧ್ಯಕ್ಷರು ಆಯ್ಕೆಮಾಡಲ್ಲ. ಅವರು ಆಯ್ಕೆ ಮಾಡಿದ ಎಲೆಕ್ಟೋರಲ್ ಕಾಲೇಜ್ (ಪ್ರತಿನಿಧಿಗಳು) ಅಧ್ಯಕ್ಷರನ್ನು ಆಯ್ಕೆ ಮಾಡುವುದು ನಿಯಮ. ಈ ನಿಯಮವು ಅಂದಿನ ಡೆಮಾಕ್ರೆಟ್ ಅಭ್ಯರ್ಥಿ ಹಿಲರಿ ಕ್ಲಿಂಟನ್‌ ಗೆ ಮುಳುವಾಗಿದ್ದುಂಟು. 2016ರಲ್ಲಿ ಡೆಮೋಕ್ರಾಟ್ ಹಿಲರಿ ಕ್ಲಿಂಟನ್ ಅವರು, ಟ್ರಂಪ್ ಅವರಿಗಿಂತ ಸುಮಾರು 30 ಲಕ್ಷ ಹೆಚ್ಚು ಮತ ಪಡೆದಿದ್ದರು. ಆದರೆ ಅವರು ಎಲೆಕ್ಟೋರಲ್ ಕಾಲೇಜಲ್ಲಿ ಅವರ ಪರ ಆಯ್ಕೆ ಆಗಿದ್ದು 227 ಪ್ರತಿನಿಧಿಗಳು ಮಾತ್ರ. ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪರ 306 ಪ್ರತಿನಿಧಿಗಳು ಗೆದ್ದಿದ್ದರು. ಹೀಗಾಗಿ ಬಹುಮತದ 270ರ ಅಂಕಿ ದಾಟಿದ್ದ ಟ್ರಂಪ್‌ ಅಧ್ಯಕ್ಷರಾದರು.

50 ರಾಜ್ಯಗಳು, 538 ಜನಪ್ರತಿನಿಧಿಗಳು, 270 ಬಹುಮತಕ್ಕೆ ಬೇಕಾದ ಮತ, 24 ಕೋಟಿ ಮತದಾರರು 

ಒಂದೆರಡು ದಿನದಲ್ಲಿ ಗೆಲುವಿನ ಸುಳಿವು 

* ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬ್ಯಾಲಟ್ ಪೇಪರ್ ಬಳಸಿ ಮತದಾನವಾಗಲಿದೆ . 
* ಇದು ಮುಗಿಯುತ್ತಿದ್ದಂತೆ ಎಣಿಕೆ ಆರಂಭವಾಗಲಿದೆ. ಅಧಿಕೃತ ಫಲಿತಾಂಶ ಸದ್ಯಕ್ಕಿಲ್ಲ .
* ಆದರೆ ಮುಂದಿನ ಅಧ್ಯಕ್ಷ ಯಾರು ಎಂಬ ಸುಳಿವು 1-2 ದಿನದಲ್ಲಿ ಲಭ್ಯ ನಿರೀಕ್ಷೆ 
* ಡಿ.10ಕ್ಕೆ ಎಣಿಕೆ ಅಧಿಕೃತವಾಗಿ ಪೂರ್ಣಗೊಳ್ಳಲಿದೆ. ಆ ಬಳಿಕ ಫಲಿತಾಂಶ ಪ್ರಕಟ

Previous Post

ಪ್ರಪಾತಕ್ಕೆ ಉರುಳಿದ ಪ್ರಯಾಣಿಕರಿಂದ ತುಂಬಿದ್ದ ಬಸ್ – 28 ಜನರ ಸಾವು, ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ

Next Post

ಬಂಟ್ವಾಳ: ದೇವಸ್ಥಾನದ ಬಾಗಿಲು ಮುರಿದು ಚಿನ್ನಾಭರಣ ದೋಚಿ ಪರಾರಿಯಾದ ಖದೀಮರು!

Next Post

ಬಂಟ್ವಾಳ: ದೇವಸ್ಥಾನದ ಬಾಗಿಲು ಮುರಿದು ಚಿನ್ನಾಭರಣ ದೋಚಿ ಪರಾರಿಯಾದ ಖದೀಮರು!

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.