ಮಾಜಿ ಶಾಸಕ ಮೊಯಿದ್ದೀನ್ ಬಾವ ಅವರ ತಮ್ಮ ಮುಮ್ತಾಜ್ ಅಲಿ (Mumtaz Ali) ಅವರ ಮೃತದೇಹ ಪತ್ತೆಯಾಗಿದ್ದು, ಆರು ಜನರ ಮೇಲೆ ಎಫ್‌ಐಆರ್ ದಾಖಲಾಗಿದೆ. ಎಫ್‌ಐಆರ್ ದಾಖಲಾದ ಬೆನ್ನಲ್ಲೆ ಮುಮ್ತಾಜ್ ಅಲಿ ಅವರು ಹನಿಟ್ರ್ಯಾಪ್‌ಗೆ (Honeytrap) ಬಲಿಯಾಗಿದ್ರಾ ಎಂಬ ಪ್ರಶ್ನೆ ಎದ್ದಿದೆ

ಮಂಗಳೂರು : ಮಹಿಳೆ ರೆಹಮತ್‌ಳ ಬ್ಲಾಕ್ ಮೇಲ್ ನಿಂದ ಲಕ್ಷ ಲಕ್ಷ ಕಳೆದುಕೊಂಡಿದ್ದ ಮುಮ್ತಾಜ್ ಗೆ ಸತ್ತಾರ್ ಟೀಂ ಬ್ಲ್ಯಾಕ್ ಮೇಲ್ ಮಾಡಿತ್ತು. ಹಲವು ತಿಂಗಳಿಂದ ಮಹಿಳೆಗೆ ಮುಮ್ತಾಜ್ ಅಲಿ ಲಕ್ಷ ಲಕ್ಷ ಹಣವನ್ನು ಸುರಿದಿದ್ದರು. ಆದರೆ ಮತ್ತಷ್ಟು ಹಣಕ್ಕಾಗಿ ಪೀಡಿಸಿದ್ದ ಮಹಿಳೆ ರೆಹಮತ್, ಹಣದ ಜೊತೆಗೆ ಮದುವೆ ಆಗುವಂತೆಯೂ ಟಾರ್ಚರ್ ಕೊಟ್ಟಿದ್ದಳು. ಆದರೆ ಇದಕ್ಕೆ ಒಪ್ಪದೇ ಹಣ ಕೊಡೋದನ್ನೂ ಮುಮ್ತಾಜ್ ನಿಲ್ಲಿಸಿದ್ದರು . ಹೀಗಾಗಿ ರೆಹಮತ್ ರಾಜಕೀಯ ವಿರೋಧಿಗಳನ್ನ ಹುಡುಕಿದ್ದಳು ಈ ವೇಳೆ ರೆಹಮತ್ ಳಿಗೆ ಸಿಕ್ಕವನೇ ಮುಮ್ತಾಜ್ ಕಡುವಿರೋಧಿ ಸತ್ತಾರ್.

ಸತ್ತಾರ್ ಗೆ ಕರೆ ಮಾಡಿ ಮುಮ್ತಾಜ್ ಜೊತೆಗಿನ ಸಂಬಂಧ ರೆಹಮತ್ ಬಿಚ್ಚಿಟ್ಟಿದ್ದಾಳೆ . ಈ ವೇಳೆ ರೆಹಮತ್ ಕಾಲ್ ರೆಕಾರ್ಡ್ ಅನ್ನು ಸತ್ತಾರ್ ಮಾಡಿಕೊಂಡಿದ್ದ. ಕಾಲ್ ರೆಕಾರ್ಡ್ ಹಿಡಿದು ಮತ್ತೆ ಮೂವರನ್ನು ಸೇರಿಸಿ ಮುಮ್ತಾಜ್ ರ ಹನಿಟ್ರ್ಯಾಪ್ ಆಡಿಯೋ ಮುಂದಿಟ್ಟು ಮುಮ್ತಾಜ್ ಗೆ ನಿರಂತರ ಬ್ಲಾಕ್ ಮೇಲ್ ಮಾಡಲಾಗಿದೆ. ಎರಡು ಕೋಟಿ ಕೊಡದೇ ಇದ್ದರೆ ಆಡಿಯೋ ವೈರಲ್ ಮಾಡ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಕೊನೆಗೆ 25 ಲಕ್ಷ ಕೊಟ್ಟರೂ ಮತ್ತೆ ಮತ್ತೆ ನಿರಂತರ ಬೆದರಿಕೆ ಹಾಕಿದ್ದು, ಹಣ ಕೊಡಲು ಒಪ್ಪದೇ ಇದ್ದಾಗ ಕುಟುಂಬಸ್ಥರಿಗೆ ವಿಷಯವನ್ನು ಮಹಿಳೆ ತಿಳಿಸಿದ್ದಾರೆ. ಕೊನೆಗೆ ಮರ್ಯಾದೆ ಹೋಯ್ತು ಅಂತ ಮುಮ್ತಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದೂರಿನಲ್ಲಿ ಏನಿತ್ತು?
ಸಹೋದರ ಮುಮ್ತಾಜ್ ಆಲಿ ಸಮಾಜದ ಗೌರವಾನ್ವಿತ ವ್ಯಕ್ತಿಯಾಗಿದ್ದಾರೆ. ಅವರ ಗೌರವ ಹಾಳು ಮಾಡಲು ಮಹಿಳೆಯ ಬಳಸಿಕೊಂಡು ಷಡ್ಯಂತ್ರ ಮಾಡಿದ್ದಾರೆ. ರೆಹಮತ್ ಅಕ್ರಮ ಸಂಬಂಧ ಇದೆ ಎಂದು ಸುಳ್ಳು ಪ್ರಚಾರದ ಬೆದರಿಕೆ ಹಾಕಿದ್ದಾರೆ. 2024ರ ಜುಲೈನಿಂದ ಈವರೆಗೆ 50 ಲಕ್ಷ ರೂ. ವಸೂಲಿ ಮಾಡಿದ್ದಾರೆ. 25 ಲಕ್ಷ ರೂ. ಹಣವನ್ನು ಚೆಕ್ ಮೂಲಕವೂ ಮಹಿಳೆ ಹಣ ಪಡೆದಿದ್ದಾಳೆ

ಸತ್ತಾರ್ ಎಂಬಾತ ಮುಮ್ತಾಜ್ ಆಲಿಯ ರಾಜಕೀಯ ವಿರೋಧಿಯಾಗಿದ್ದಾನೆ. ಜೀವ ಬೆದರಿಕೆ ಜೊತೆಗೆ ಮುಮ್ತಾಜ್ ಅಲಿ ಕುಟುಂಬಕ್ಕೂ ಬೆದರಿಸಿದ್ದರು. ಹೀಗಾಗಿಯೇ ನಾನು ಅಲ್ಲಾಹುನ ಕಡೆಗೆ ಹೋಗುತ್ತಿದ್ದೇನೆ ಎಂದು ಆಡಿಯೋ ಮೆಸೇಜ್ ಹಾಕಿ ಸಹೋದರ ಮುಮ್ತಾಜ್ ಆಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು.
ದೂರು ನೀಡಿದ ಬೆನ್ನಲ್ಲೆ ಮಹಿಳೆ ರೆಹಮತ್ ಜೊತೆ ಅಬ್ದುಲ್ ಸತ್ತಾರ್, ಶಫಿ, ಮುಸ್ತಾಫ, ಶೋಯೆಬ್ ಹಾಗೂ ಸಿರಾಜ್ ವಿರುದ್ಧ ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಎಫ್‌ಐಆರ್ ದಾಖಲಾಗಿದ್ದ ಆರು ಜನರ ಪೈಕಿ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಹಿಳೆ ನಾಪತ್ತೆಯಾಗಿದ್ದು, ಕೇರಳದಲ್ಲಿ ಆಕೆಯ ಲೊಕೇಷನ್ ಪತ್ತೆಯಾಗಿದೆ. ಅಲ್ಲಿಗೆ ತೆರಳಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾಳೆ. ಮುಮ್ತಾಜ್ ಅಲಿ ನಾಪತ್ತೆ ಹಿಂದೆ ಆಕೆಯ ಕೈವಾಡ ಇದೆ ಎನ್ನುವುದು ತಿಳಿದುಬಂದಿದ್ದು, ತನಿಖೆ ನಡೆಯುತ್ತಿದೆ.