ಬೋಳಿಯಾರ್ : ಸೆ16 ಗೌಸಿಯಾ ಜುಮಾ ಮಸೀದಿ ಹಯಾತುಲ್ ಇಸ್ಲಾಂ ಮದರಸ ಕುಕ್ಕೋಟು ಇದರ ವತಿಯಿಂದ ಪ್ರವಾದಿ ಸ.ಅ ರವರ ಜನ್ಮ ದಿನಾಚರಣೆಯ ಅಂಗವಾಗಿ ಈದ್ ಮಿಲಾದ್ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಆಚರಿಲಾಯಿತು.

ಮಸೀದಿ ಅಧ್ಯಕ್ಷರಾದ ಅಬೂಬಕ್ಕರ್ ಕೋಟೆ ಧ್ವಜಾರೋಹಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಖತೀಬ್ ಆಹ್ಮದ್ ನಾಸೀರ್ ಅಝ್ಹಾರಿ ನೇತೃತ್ವದಲ್ಲಿ ಮೌಲೂದ್ ಹಾಗೂ ಸಾಮೂಹಿಕ ದುವಾ ನಡೆಯಿತು.

ಮಿಲಾದ್ ಜಾಥಾಕ್ಕೆ ಮಸೀದಿ ಅಧ್ಯಕ್ಷರಾದ ಅಬೂಬಕ್ಕರ್ ಕೋಟೆರವರು ಮಿಲಾದ್ ಕಮಿಟಿ ಅಧ್ಯಕ್ಷರಾದ ಅಬೂಬಕ್ಕರ್ ಸಿದ್ದೀಕ್ ಕುಕ್ಕೋಟು ರವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು ಜಾಥವು ಕುಕ್ಕೋಟುನಿಂದ ಹೊರಟು ಜಾರದಗಡ್ಡೆ ದರ್ಗಾಶರೀಫ್ ನಲ್ಲಿ ಕೂಟು ಝಿಯಾರತ್ ಮಾಡಿ ಬೋಳಿಯಾರ್ ಕ್ರಾಸ್ ಮೈದಾನದಲ್ಲಿ ಮಾದರಸ ಮಕ್ಕಳ ಆಕರ್ಷಕವಾದ ದಪ್ಪು ಮತ್ತು ಫ್ಲವರ್ ಶೋ ಮಾಡುವುದರ ಮೂಲಕ ಕೊನೆಗೊಂಡಿತು.
ನಂತರ ಮಸೀದಿಯಲ್ಲಿ ಮಂಕೂಸ್ ಮೌಲೂದ್ ಪಾರಾಯಣ ಮಾಡಿ ಸಾಮೂಹಿಕ ದುವಾ ನಡೆಸಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು

ಕಾರ್ಯಕ್ರಮದಲ್ಲಿ ಮಸೀದಿ ಉಪಾಧ್ಯಕ್ಷರಾದ ಬಿ.ಎಂ. ಇಸ್ಮಾಯಿಲ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಓಕೆ, ಜೊತೆ ಕಾರ್ಯದರ್ಶಿ ಬಿ. ಶರೀಫ್, ಇಸ್ಮಾಯಿಲ್ ಮಲ್ಲಿಗೆ ಮನೆ ಹಾಗೂ ಮಿಲಾದ್ ಸಮಿತಿ ಗೌವಾಧ್ಯಕ್ಷರದ ಅಬ್ದುಲ್ ರಝಾಕ್, ಮದರಸ ಉಸ್ತುವಾರಿ ಯೂಸೂಫ್ ng kukkotu ಸಹಿತ ಜಮಾತ್ ಸಮಿತಿ, ಮಿಲಾದ್ ಸಮಿತಿ ಪದಾಧಿಕಾರಿಗಳು, ಸದಸ್ಯರು ಉಪ್ಥಿತರಿದ್ದರು
