ದಕ್ಷಿಣ ಕನ್ನಡ :ಅಡ್ಡೂರು ಪೊಳಲಿ ರಸ್ತೆಯಿಂದ ಬಿಸಿರೋಡ್, ಮಂಗಳೂರು, ಬಜ್ಪೆ ಪ್ರಯಾಣಿಕರು,ಅಡ್ಡೂರು ಸೇತುವೆ ಸಂಚಾರ ಬಂದ್ ಆದೇಶ ಆದ ನಂತರ ಬಸ್ಸು ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ.ದಿನಾಲೂ ಮಂಗಳೂರಿಗೆ ಕೆಲಸಕ್ಕೆ ಹೋಗಿ ಬರುತ್ತಿರುವ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳಿಗೆ ರಾತ್ರಿವೇಳೆ ಬಸ್ಸು ಇಲ್ಲದೆ ಪರದಾಡುವಂತ ಪರಿಸ್ಥಿತಿ ಬಂದಿದೆ. ಖಾಸಗಿ ಬಸ್ಸಿನ ಮಾಲಕರು ರಾತ್ರಿವೇಳೆ ಟ್ರಿಪ್ ಕಟ್ ಮಾಡುವುದರಿಂದಾಗಿ ಅನೇಕರು ಸರಕಾರಿ ಬಸ್ಸಿಗಾಗಿ ಆಗ್ರಹವನ್ನು ವ್ಯಕ್ತ ಪಡಿಸುತ್ತಿದ್ದಾರೆ,ರಾಜ್ಯ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಯವರಿಗೆ ಈಗಾಗಲೇ ಸಮಸ್ಯೆ ಬಗ್ಗೆ ಹೇಳಿದ್ದು, ಖಾಸಗಿ ಸಂಸ್ಥೆ ಯ ಲಾಬಿಗೆ ಬಲಿಯಾಗದೆ ಈ ಭಾಗಕ್ಕೆ ಸರಕಾರಿ ಬಸ್ಸನ್ನು ಆದಷ್ಟು ಶೀಘ್ರದಲ್ಲಿ ಒದಗಿಸಬೇಕೆಂದು ಅಗ್ರಹಿಸಲಾಗಿದೆ ಎಂದು ತಿಳಿದು ಬಂದಿದೆ, ಸರಕಾರಿ ಬಸ್ಸಿನ ಬೇಡಿಕೆಗೆ ಸ್ಪಂದನೆ ಸಿಗದಿದ್ದದ್ದಲ್ಲಿ ಮುಂದೆ ಬೃಹತ್ ಹೋರಾಟಕ್ಕೆ ನಾಗರಿಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಜಿಲ್ಲಾಧಿಕಾರಿ ಗಳು ಕೂಡಾ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ಜನರ ಅಗ್ರಹ ವಾಗಿದೆ.

ಅಡ್ಡೂರಿನ ಸೇತುವೆಯಲ್ಲಿ ಘನ ವಾಹನ ಸಂಚಾರ ಬಂದ್ ಆದೇಶವನ್ನು ಜಿಲ್ಲಾಧಿಕಾರಿ ಗಳು ಹಾಗೂ ಹೆದ್ದಾರಿ ಪ್ರಾಧಿಕಾರ ಇತ್ತೀಚೆಗೆ ನೀಡಿತ್ತು. ಆದರೆ ನಂತರದ ಆ ಪ್ರದೇಶದ ಪ್ರಯಾಣಿಕರ ಬವಣೆ, ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ, ಸೇತುವೆಯನ್ನು ದುರಸ್ತಿ ಪಡಿಸುವುದಾಗಲಿ, ಅಥವಾ ಹೊಸ ಸೇತುವೆ ನಿರ್ಮಿಸುವ ಬಗ್ಗೆಯಾಗಲಿ ಯಾವುದೇ ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ. ಸಮಸ್ಯೆಯನ್ನು ಸೃಷ್ಟಿ ಮಾಡಿ, ಪರಿಹಾರ ನೀಡದಿದ್ದರೆ ಹೇಗೆ ಎಂದು ಈ ಪ್ರದೇಶದ ಜನರ ಪ್ರಶ್ನೆ ಯಾಗಿದೆ.

