ಸುರತ್ಕಲ್ : ಸೆಪ್ಟೆಂಬರ್ 4, ಸುಮಾರು 25 ವರ್ಷಗಳಿಂದ ಎಚ್.ಪಿ.ಸಿ.ಎಲ್ ಅಡುಗೆ ಅನಿಲ ಜಾಡಿ ತುಂಬಿಸುವ ಘಟಕದಲ್ಲಿ ಸ್ಥಳೀಯ ಕಾರ್ಮಿಕರು ದುಡಿಯುತ್ತಿದ್ದು ಅದರಲ್ಲೂ ಕೆಲವರು ಗಾರ್ಡನ್ ಕೆಲಸ ಮಾಡಿಕೊಂಡಿರುತ್ತಾರೆ. ಈಗ ದಿಲ್ಲಿ ಕಂಪನಿಗೆ ಅದರ ಗುತ್ತಿಗೆ ದೊರಕಿದ್ದು ಅವರು ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಹೊರ ರಾಜ್ಯದಿಂದ ಕಾರ್ಮಿಕರನ್ನು ನಿಯೋಜಿಸಿ ಸ್ಥಳೀಯ ಕಾರ್ಮಿಕರನ್ನು ನಿರ್ಲಕ್ಷಿಸಿದ್ದು ಇದನ್ನು ಎಸ್.ಡಿ.ಪಿ.ಐ ತೀವ್ರವಾಗಿ ವಿರೋಧಿಸುತ್ತದೆ.

ಒಂದು ವೇಳೆ ಸ್ಥಳೀಯ ಕಾರ್ಮಿಕರನ್ನು ನಿರ್ಲಕ್ಷಿಸಿ ಹೊರ ರಾಜ್ಯದ ಕಾರ್ಮಿಕರನ್ನು ನಿಯೋಜಿಸಿದರೆ ಎಲ್ಲಾ ಕಾರ್ಮಿಕರನ್ನು ಒಟ್ಟುಗೂಡಿಸಿ ಪ್ರತಿಭಟನೆ ಮಾಡಲಾಗುವುದೆಂದು ಎಸ್.ಡಿ.ಪಿ.ಐ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷರಾದ ಉಸ್ಮಾನ್ ಗುರುಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


