ನಾಗರಿಕರಿಂದ ಬಾರಿ ಆಕ್ರೋಶ, ಶಾಸಕನನ್ನು ಬಂಧಿಸಿ ನ್ಯಾಯ ಒದಗಿಸುವಂತೆ ಸರಕಾರ ಕ್ಕೆ ಒತ್ತಾಯ

ಮಂಗಳೂರು :ಇತ್ತೀಚಿಗೆ ಶಾಸಕ ಭರತ್ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಅಡ್ಡೂರು ಪ್ರದೇಶ ವನ್ನು ಮಿನಿ ಪಾಕಿಸ್ತಾನ ಎಂದು ದೇಶ ವಿರೋಧಿ ಹೇಳಿಕೆ ನೀಡುವ ಮೂಲಕ ವಿವಾದ ಎಬ್ಬಿಸಿದ್ದರು, ಇದರ ವಿರುದ್ದ ಇಂದು ಅಡ್ಡೂರಿನಲ್ಲಿ ಶಾಸಕನ ವಿರುದ್ದ ಬಾರಿ ಜನಸ್ತೋಮದೊಂದಿಗೆ ಬೃಹತ್ ಪ್ರತಿಭಟನೆ ನಡೆಯಿತು, ಪ್ರಭಟನೆಯಲ್ಲಿ ಊರಿನ ಎಲ್ಲಾ ಧರ್ಮದ ಸಂಘಟನೆ ಗಳು ಒಗ್ಗಟ್ಟು ಪ್ರದರ್ಶಿಸಿದರು.ಹಾಗೂ ಶಾಸಕರನ್ನು ಬಂಧಿಸುವಂತೆ ಸರಕಾರ ಕ್ಕೆ ಒತ್ತಾಯವನ್ನು ಮಾಡಿದರು



ಪ್ರತಿಭಟನೆಯಲ್ಲಿ ಮಾತಾಡಿದ ಅಶ್ರಫ್ ನಡುಗುಡ್ಡೆ, ಸೌಹಾರ್ದತೆ ಯಿಂದ ಇರುವ ಅಡ್ಡೂರಿನ ಜನರಿಗೆ ಶಾಸಕರ ದೇಶ ಪ್ರೇಮದ ಪಾಠ ಅಗತ್ಯವಿಲ್ಲ ಎಂದರು.
ಒಂದು ವೇಳೆ ಶಾಸಕರ ವಿರುದ್ದ FIR ದಾಖಲಿಸಿ ಬಂದಿಸದಿದ್ದಲ್ಲಿ ಮುಂದೆ ಅಡ್ಡೂರಿಂದ ಬಜ್ಪೆ ಠಾಣೆಯವರೆಗೆ ಪಾದಯಾತ್ರೆ ಮಾಡಿ ನ್ಯಾಯಕ್ಕಾಗಿ ಹೋರಾಟ ಮಾಡ್ಲಲಿದ್ದೇವೆ ಎಂದು ಪ್ರತಿಭಟನೆಯಲ್ಲಿ U. P. ಇಬ್ರಾಹಿಂ ಹೇಳಿದರು.
ಪ್ರತಿಭಟನೆ ಯಲ್ಲಿ ಅಡ್ಡೂರು ಬದ್ರಿಯಾ ಜುಮಾ ಮಸೀದಿಯ ಖತೀಬ್ ಸದಕತುಲ್ಲ ಫೈಝಿ ಮಾತನಾಡಿದರು, ಈ ಸಂದರ್ಭದಲ್ಲಿ ಊರಿನ ಎಲ್ಲಾ ಸಂಘಟನೆಯ ನಾಯಕರು ಉಪಸ್ಥಿತರಿದ್ದರು
