ಮಂಗಳೂರು : ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಶಾಸಕ ಭರತ್ ಶೆಟ್ಟಿ ಮಂಗಳೂರು ತಾಲೂಕಿನ ಅಡ್ಡೂರು ಪ್ರದೇಶ ವನ್ನು ಮಿನಿ ಪಾಕಿಸ್ತಾನವೆಂದು ಕರೆದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭಾರತದ ಭೂ ಭಾಗವನ್ನು ವಿರೋಧಿ ರಾಷ್ಟ್ರಕ್ಕೆ ಹೋಲಿಸಿ ದೇಶ ದ್ರೋಹದ ಹೇಳಿಕೆ ನೀಡಿರುವಂಥದ್ದು ತೀವ್ರ ಆಕ್ರೋಶಕ್ಕೆ ಕಾರಣ ವಾಗಿದೆ.

ಅಡ್ಡೂರು ಸೇತುವೆ ಘನ ವಾಹನ ನಿಷೇದ ವಿಷಯದಲ್ಲಿ ಮಾತಾಡುತ್ತಾ ಹೇಳಿಕೆ ನೀಡಿದ ಭರತ್ ಶೆಟ್ಟಿ ಅಲ್ಲಿ ಸೇತುವೆ ಸರಿಪಡಿಸುವ ಅಥವಾ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ಅಧಿಕಪ್ರಸಂಗತನ ಮಾಡಿದ್ದು, ಅಡ್ಡೂರು ನಾಗರಿಕರನ್ನು ಪಾಕಿಸ್ತಾನ ಕ್ಕೆ ಹೋಲಿಸಿದ್ದು ಆಕ್ರೋಶ ಕ್ಕೆ ಕಾರಣವಾಗಿದೆ. ತಕ್ಷಣವೇ ಪೊಲೀಸ್ ಇಲಾಖೆ ಶಾಸಕನ ಮೇಲೆ ಸುಮೊಟೊ ಕೇಸು ದಾಖಲಿಸಿ ದೇಶ ದ್ರೋಹದ ಕೇಸು ದಾಖಲಿಸ ಬೇಕೆಂಬುದು ಜನರ ಆಗ್ರಹ ವಾಗಿದೆ. ಶಾಸಕ ಸ್ಥಾನದಿಂದ ಅನರ್ಹ ಗೊಳಿಸಬೇಕೆಂದು ಸ್ಪೀಕರ್ ರವರಿಗೆ ನಾಗರಿಕರು ಮನವಿ ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ


