ಗುರುಪುರ :ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಉತ್ತರ ಕ್ಷೇತ್ರದ ಗುರುಪುರ ಬ್ಲಾಕ್ ಸಮಿತಿಯ ಆಂತರಿಕ ಚುನಾವಣೆಯು ದಿನಾಂಕ 11/08/24 ರಂದು ಅಡ್ಡೂರು ಕಚೇರಿಯಲ್ಲಿ ಬ್ಲಾಕ್ ಅಧ್ಯಕ್ಷರಾದ ಅಶ್ರಫ್ ಕೈಕಂಬ ಅಧ್ಯಕ್ಷತೆಯಲ್ಲಿ ಜರುಗಿತು.

ಕಾರ್ಯದರ್ಶಿ ಇರ್ಷಾದ್ ಅಡ್ಡೂರು ಸರ್ವರಿಗೂ ಸ್ವಾಗತ ಕೋರಿದರು,ಬ್ಲಾಕ್ ಸಮಿತಿಯ ಪೂರ್ಣವದಿಯ ವರದಿಯನ್ನು ರಹೀಮ್ ಅಡ್ಡೂರು, ಇರ್ಫಾನ್ ಗಂಜಿಮಠ ಮಂಡಿಸಿದರು ಚುನಾವಣೆ ಅಧಿಕಾರಿಯಾಗಿ ( R. O) ಸಿದ್ದಿಕ್ ಅಂಗರಗುಂಡಿ ಹಾಗೂ ನಾಸಿರ್ ಉಳಾಯಿಬೆಟ್ಟು ಆಂತರಿಕ ಚುನಾವಣೆ ನಡೆಸಿಕೊಟ್ಟರು,

ಗುರುಪುರ, ಕಂದಾವರ, ಗಂಜಿಮಠ, ಪಡುಪೆರಾರ,ಕುಪ್ಪೆಪದವು ಗ್ರಾಮ ಸಮಿತಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ಬ್ಲಾಕ್ ಸಮಿತಿಯ ಆಂತರಿಕ ಚುನಾವಣೆ ನಡೆಯಿತು, ಗುರುಪುರ ಬ್ಲಾಕ್ ನೂತನ ಅಧ್ಯಕ್ಷರಾಗಿ AK ರಿಯಾಝ್, ಉಪಾಧ್ಯಕ್ಷರಾಗಿ ಅಶ್ರಫ್ ನಡುಗುಡ್ಡೆ, ಕಾರ್ಯದರ್ಶಿಯಾಗಿ ಇರ್ಷಾದ್ ಇರ್ಷಾದ್ ಅಡ್ಡೂರು, ಜೊತೆ ಕಾರ್ಯದರ್ಶಿಯಾಗಿ ರೆಹಮಾನ್ ಎಡಪದವು, ಕೋಶಾಧಿಕಾರಿಯಾಗಿ ಝುಬೈರ್ ಮಳಲಿ ಹಾಗೂ ಸಮಿತಿ ಸದಸ್ಯರಾಗಿ ಸಾಬಿಕ್ ಕೈಕಂಬ ಹಾಗೂ ಶರಫುದ್ದಿನ್ ಕೊಳಂಬೆ ಆಯ್ಕೆಯಾದರು ನೂತನ ಅಧ್ಯಕ್ಷರಾಗಿ ಆಯ್ಕೆಯಾದ AK ರಿಯಾಝ್ ರವರು ನಾಯಕರನ್ನು ಉದ್ದೇಶಿಸಿ ಮಾತನಾಡಿದರು
ಕಾರ್ಯದರ್ಶಿ ಇರ್ಷಾದ್ ಅಡ್ಡೂರು ವಂದಿಸಿದರು
