ವಯನಾಡು ಭೂಕುಸಿತದಲ್ಲಿ ನೌಫಲ್ ತನ್ನ 11 ಮಂದಿಯನ್ನು ಕಳೆದುಕೊಂಡಿದ್ದಾರೆ. ಪತ್ನಿ ಸಜ್ನಾ ಮತ್ತು 3 ಮಕ್ಕಳು, ತಂದೆ ಕುಂಞಮೊಯ್ತೀನ್, ತಾಯೊ ಆಯೆಷಾ, ಸಹೋದರ ಮನ್ಸೂರ್ ಆತನ ಪತ್ನಿ ಮುಹ್ಸಿನಾ ಮತ್ತು 3 ಮಕ್ಕಳು ನಾಪತ್ತೆಯಾಗಿದ್ದಾರೆ. ಅವರನ್ನು ಕಳೆದುಕೊಂಡ ನೋವಿನಲ್ಲಿ ಕಣ್ಣೀರು ಹಾಕುತ್ತಿದ್ದಾರೆ.

ಓಮನ್ನಲ್ಲಿ ಕೆಲಸ ಮಾಡುತ್ತಿದ್ದ ಕಳತಿಂಕಲ್ ನೌಫಲ್ಗೆ ಭೂಕುಸಿತ ವಿಚಾರವನ್ನು ಆತನ ಕುಟುಂಬಸ್ಥರು ಫೋನ್ ಮಾಡಿ ತಿಳಿಸುತ್ತಾರೆ. ಕೂಡಲೇ ವಿದೇಶದಿಂದ ತಾಯ್ನಾಡಿಗೆ ಓಡಿ ಬರುತ್ತಾರೆ. ಆದರೆ ವಯನಾಡಿಗೆ ಬಂದಾಗ ತನ್ನ ಕುಟುಂಬದ 11 ಮಂದಿ ನಾಪತ್ತೆಯಾಗಿರುವ ವಿಚಾರ ತಿಳಿಯುತ್ತದೆ.

ಭೂಕುಸಿತದಲ್ಲಿ ನೌಫಲ್ ಪೋಷಕರ ಮೃತದೇಹಗಳು, ದೊಡ್ಡ ಮಗಳು ನಫ್ಲಾ ನಸ್ರೀನ್, ಸಹೋದರ ಮನ್ಸೂರ್ ಪತ್ನಿ ಮುಹ್ಸಿನಾ ಮತ್ತು ಐಶಾಮಾನ ಮೃತದೇಹಳು ಮಾತ್ರ ಸಿಕ್ಕಿವೆ. ಉಳಿದವರ ಮೃತದೇಹ ಇನ್ನೂ ಸಿಕ್ಕಿಲ್ಲ. ಪತ್ನಿ ಸಜ್ನಾ, ಇನ್ನಿಬ್ಬರು ಮಕ್ಕಳು, ಸಹೋದರನ ಮೃತದೇಗ ಪತ್ತೆಯಾಗಿಲ್ಲ. ಅತ್ತ ತನ್ನವರೆಲ್ಲರನ್ನು ಕಳೆದುಕೊಂಡು ನೌಫಲ್ ಕಣ್ಣೀರಿನಲ್ಲೇ ದಿನದೂಡಿವಂತಾಗಿದೆ.

ಮೆಪ್ಪಾಡಿಯ ಪರಿಹಾರ ಶಿಬಿರದಲ್ಲಿ ತಂಗುತ್ತಿದ್ದ ನೌಫಲ್ ನಿನ್ನೆ ತನ್ನ ಕುಟುಂಬದವರ ಮನೆ ಸೇರಿದ್ದಾರೆ. ತನ್ನ ಮನೆಯವರ ಮೃತದೇಹ ಸಿಗುತ್ತದೆ ಎಂದು ಕಾಯುತ್ತಿದ್ದ ನೌಫಲ್ ಅತ್ತ ಪತ್ನಿ ಮಕ್ಕಳ ಮೃತದೇಹವನ್ನು ಕೊನೆ ಕ್ಷಣದಲ್ಲಿ ನೋಡಲಾಗದೆ ದುಃಖದಲ್ಲಿದ್ದಾರೆ.


ವಯನಾಡು ಭೂಕುಸಿತದ ಭೀಕರತೆಗೆ ಸುಮಾರು 360ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 200ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಭೀಕರೆ ಮಾತ್ರ ಕೇರಳಿಗರ ಮನದಲ್ಲಿ ಮಾಸದಂತೆ ಘಾಯ ಮಾಡಿ ಹೋಗಿದೆ.
