ದಕ್ಷಿಣ ಕನ್ನಡ ಜಿಲ್ಲೆಯ ಅಡ್ಡೂರು ಕೆಳಗಿನ ಕೆರೆ, ಬೈಲು ಪೇಟೆ ಯಲ್ಲಿ ಮಳೆಯಿಂದಾಗಿ ನೆರೆ ಉಂಟಾದ ಪ್ರದೇಶಗಳಿಗೂ, ಕೈಕಂಬ ಬಂಗ್ಲಗುಡ್ಡೆ ಸೈಟ್ ನಲ್ಲಿ ಗುಡ್ಡೆ ಜರಿದು ಬಿದ್ದ ಪ್ರದೇಶಗಳಿಗೂ ಹಾಗೂ ಉಳಾಯಿಬೆಟ್ಟು, ಕಾಂಜಿಲಕೊಡಿ ಗಳಲ್ಲಿ ಮಳೆಯಿಂದಾಗಿ ಮನೆಗಳಿಹೆ ಹಾನಿ ಉಂಟಾದ ಪ್ರದೇಶಗಳಿಗೆ SKSSF ದ.ಕ ಜಿಲ್ಲೆ ವೆಸ್ಟ್ ಸಮೀತಿಯ ಅಧ್ಯಕ್ಷರಾದ ಸಯ್ಯಿದ್ ಅಮೀರ್ ತಂಙಳ್ ಕಿನ್ಯಾ ಮತ್ತು ಕಾರ್ಯದರ್ಶಿ ಉಸ್ತಾದ್ ಅಬೂಸ್ವಾಲಿಹ್ ಫೈಝಿ ಯವರ ನೇತೃತ್ವದ ತಂಡವು ಭೇಟಿ ನೀಡಲಾಯಿತು.

ಈ ಸಂಧರ್ಭದಲ್ಲಿ SKSSF ದ.ಕ ಜಿಲ್ಲಾ ವೆಸ್ಟ್ ಸಮೀತಿಯ ಉಪಾಧ್ಯಕ್ಷರಾದ ಉಸ್ತಾದ್ ಫಾರೂಕ್ ದಾರಿಮಿ, ಜೊತೆ ಕಾರ್ಯದರ್ಶಿ ಆರೀಫ್ ಕಮ್ಮಾಜೆ, ವಿಖಾಯ ಚೇರ್ಮ್ಯಾನ್ ಇಬ್ರಾಹಿಂ ಕುಕ್ಕಾಟೆ, ಇಬಾದ್ ಚೇರ್ಮ್ಯಾನ್ ಉಸ್ತಾದ್ ಅಲ್ತಾಫ್ ಮುಸ್ಲಿಯಾರ್, SKSSF ಕೈಕಂಬ ವಲಯ ಅಧ್ಯಕ್ಷರಾದ ಉಸ್ತಾದ್ ಜಮಾಲುದ್ದೀನ್ ದಾರಿಮಿ ಹಾಗೂ ವಲಯ ನೇತಾರರು ಉಪಸ್ಥಿತರಿದ್ದರು.



