Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ ಗೆದ್ರೆ ರಾಜಕೀಯ ಬಿಡುವೆ: ಶಾಸಕ ಕೆವೈ ನಂಜೇಗೌಡ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    ಸೌಜನ್ಯ ಮಾವ ವಿಠಲ್‌ಗೌಡ ತೋರಿಸಿದ ಬಂಗ್ಲೆಗುಡ್ಡೆ ಕಾಡಿನಲ್ಲಿ 5 ಅಸ್ಥಿಪಂಜರ ಮೂಳೆ ಪತ್ತೆ!

    ಸೌಜನ್ಯ ಮಾವ ವಿಠಲ್‌ಗೌಡ ತೋರಿಸಿದ ಬಂಗ್ಲೆಗುಡ್ಡೆ ಕಾಡಿನಲ್ಲಿ 5 ಅಸ್ಥಿಪಂಜರ ಮೂಳೆ ಪತ್ತೆ!

    ಯುವತಿ ದೇಹದ ಮೇಲಿನ ಕಪ್ಪು ಚುಕ್ಕೆ ಗುರುತಿಸಿದ AI.. ಫೋಟೋ ಅಪ್​ಲೋಡ್​ ಮಾಡುವಾಗ ಹುಷಾರ್​!

    ವಿಜಯಪುರ| SBI ಬ್ಯಾಂಕ್‌ ದರೋಡೆ – ಪಿಸ್ತೂಲ್‌ ತೋರಿಸಿ 8 ಕೋಟಿ ನಗದು, 50 ಕೆಜಿ ಚಿನ್ನದೊಂದಿಗೆ ಪರಾರಿ

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು – ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶ

    ಸ್ವಾತಂತ್ರ್ಯೋತ್ಸವ ಪ್ರಯುಕ್ತ SDPI ಯಿಂದ ಬಿಸಿ ರೋಡ್ ನಲ್ಲಿ ತಿರಂಗಾ ರ್‍ಯಾಲಿ ಹಾಗೂ ಸಾರ್ವಜನಿಕ ಸಭೆ

    ಬಿಜೆಪಿ ಮಾಡಿದ 40% ಕಮಿಷನ್ ಹಗರಣ ಮತ್ತು ಕೋವಿಡ್ ಹಗರಣದ ವಿರುದ್ಧ ಕ್ರಮಕ್ಕೆ ಮುಂದಾಗದ ಕಾಂಗ್ರೆಸ್‌ ಸರಕಾರ ಹೊಂದಾಣಿಕೆ ರಾಜಕಾರಣ ಮಾಡುತ್ತಿದೆ – ಎಸ್‌ಡಿಪಿಐ:

    15 ವರ್ಷಕ್ಕಿಂತ ಹಳೇ ಸರ್ಕಾರಿ ವಾಹನಗಳನ್ನ ಗುಜರಿಗೆ ಹಾಕಿ: ಸರ್ಕಾರ ಆದೇಶ

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಸುದ್ದಿ ರಾಜ್ಯ

ವಯನಾಡ್ ದುರಂತ: 215 ಮೃತದೇಹ ಪತ್ತೆ, 206 ಮಂದಿ ನಾಪತ್ತೆ; ಮೃತರಲ್ಲಿ 30 ಮಕ್ಕಳು

editor tv by editor tv
August 3, 2024
in ರಾಜ್ಯ
0
ವಯನಾಡ್ ದುರಂತ: 215 ಮೃತದೇಹ ಪತ್ತೆ, 206 ಮಂದಿ ನಾಪತ್ತೆ; ಮೃತರಲ್ಲಿ 30 ಮಕ್ಕಳು
1.9k
VIEWS
Share on FacebookShare on TwitterShare on Whatsapp

ಒಟ್ಟು 215 ಮೃತದೇಹಗಳು ಪತ್ತೆಯಾಗಿವೆ. 87 ಮಹಿಳೆಯರು ಮತ್ತು 98 ಪುರುಷರು ಇದ್ದಾರೆ. ದುರಂತದಲ್ಲಿ 30 ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. 148 ಮೃತ ದೇಹಗಳನ್ನು ಹಸ್ತಾಂತರಿಸಲಾಗಿದೆ.  206 ಮಂದಿ ನಾಪತ್ತೆಯಾಗಿದ್ದಾರೆ. 81 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 206 ಜನರನ್ನು ಬಿಡುಗಡೆ ಮಾಡಿ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ವಯನಾಡಿನಲ್ಲಿ 93 ಶಿಬಿರಗಳಲ್ಲಿ 10,042 ಜನರಿದ್ದಾರೆ ಎಂದು ಕೇರಳ ಸಿಎಂ ಹೇಳಿದ್ದಾರೆ.

ತಿರುವನಂತಪುರಂ ಆಗಸ್ಟ್ 03:ವಯನಾಡಿನ (Wayanad landslide) ಮುಂಡಕೈ ಮತ್ತು ಚೂರಲ್​​​ಮಲ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತದಲ್ಲಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಹೇಳಿದ್ದಾರೆ. ಚಾಲಿಯಾರ್ ನದಿಯಿಂದ (Chaliyar River)ದೇಹದ ಭಾಗಗಳನ್ನು ಗುರುತಿಸುವುದು ತುಂಬಾ ಕಷ್ಟ. ಆದರೆ, ರಕ್ಷಣಾ ಕಾರ್ಯಕರ್ತರು ಭರವಸೆ ಕಳೆದುಕೊಳ್ಳದೆ ಜೀವ ಉಳಿಸಲು ಯತ್ನಿಸುತ್ತಿದ್ದಾರೆ ಎಂದು ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಹೇಳಿದ್ದಾರೆ.

ದುರಂತದ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತದಲ್ಲಿದೆ. ಮೊದಲ ಹಂತದಲ್ಲಿ ಹಲವೆಡೆ ಸಿಲುಕಿರುವವರನ್ನು ಪತ್ತೆ ಹಚ್ಚಿ ರಕ್ಷಿಸುವ ಪ್ರಯತ್ನ ನಡೆದಿದೆ. ಜೀವದ ಕುರುಹುಗಳಾದರೂ ಇದ್ದರೆ, ರಕ್ಷಣಾ ಕಾರ್ಯಕರ್ತರು ಅವರನ್ನು ಹುಡುಕಿ, ಕಾಪಾಡಲು ಪ್ರಯತ್ನಿಸಿದರು, ತಮ್ಮ ಪ್ರಾಣವನ್ನೇ ಪಣಕ್ಕಿಟ್ಟರು. ನಿಲಂಬೂರ್ ಪ್ರದೇಶದಲ್ಲಿ ಪತ್ತೆಯಾದ ಮೃತ ದೇಹಗಳು ಮತ್ತು ದೇಹದ ಭಾಗಗಳನ್ನು ಗುರುತಿಸುವುದು ತುಂಬಾ ಕಷ್ಟಕರವಾಗಿದೆ.

ಒಟ್ಟು 215 ಮೃತದೇಹಗಳು ಪತ್ತೆಯಾಗಿವೆ. 87 ಮಹಿಳೆಯರು ಮತ್ತು 98 ಪುರುಷರು ಇದ್ದಾರೆ. ದುರಂತದಲ್ಲಿ 30 ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. 148 ಮೃತ ದೇಹಗಳನ್ನು ಹಸ್ತಾಂತರಿಸಲಾಗಿದೆ.  206 ಮಂದಿ ನಾಪತ್ತೆಯಾಗಿದ್ದಾರೆ. 81 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 206 ಜನರನ್ನು ಬಿಡುಗಡೆ ಮಾಡಿ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ವಯನಾಡಿನಲ್ಲಿ 93 ಶಿಬಿರಗಳಲ್ಲಿ 10,042 ಜನರಿದ್ದಾರೆ. ಚೂರಲ್​​ಮಲದಲ್ಲಿ 10 ಶಿಬಿರಗಳಲ್ಲಿ 1707 ಜನರು ಆಶ್ರಯ ಪಡೆದಿದ್ದಾರೆ ಎಂದು ಸಿಎಂ ಹೇಳಿದ್ದಾರೆ.

ಸಾಮೂಹಿಕ ಅಂತ್ಯಕ್ರಿಯೆ

ಶನಿವಾರ ಬೆಳಗ್ಗೆ 11 ಗಂಟೆಯ ನಂತರ ಇಲ್ಲಿ ಸ್ವಲ್ಪಮಟ್ಟಿಗೆ ತುಂತುರು ಮಳೆಯಾಗಿದೆ. ಕೇರಳದ ವಯನಾಡ್ ಜಿಲ್ಲೆಯ ಮುಟ್ಟಿಲ್ ಪಂಚಾಯತ್‌ನಲ್ಲಿರುವ ಸಾರ್ವಜನಿಕ ಸ್ಮಶಾನಕ್ಕಿರುವ ಕಿರಿದಾದ ಮಾರ್ಗವು ಕಲ್ವರ್ಟ್ ಬಳಿ ಮುಖ್ಯ ರಸ್ತೆಯಿಂದ ದೂರವಿದೆ. ಇದು ಮಳೆಯಲ್ಲಿ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ಇಲ್ಲೊಂದು ಕಾಫಿತೋಟ,ಸಣ್ಣದೊಂದು ದೇವಸ್ಥಾನ ಅಲ್ಲಿಂದ ಸ್ವಲ್ಪ ಮುಂದೆ ಹೋದರೆ ಸ್ಮಶಾನವಿದೆ. ಅಲ್ಲಿ ಸುಮಾರು 100 ಪುರುಷರು ಶವ ಹೂಳಲು ಗುಂಡಿ ಅಗೆಯುತ್ತಿದ್ದಾರೆ.

ಮಂಗಳವಾರದ (ಜುಲೈ 30) ಭೂಕುಸಿತದಲ್ಲಿ ಚೂರಲ್‌ಮಲ, ಮುಂಡಕೈ, ಅಟ್ಟಮಲ ಮತ್ತು ಇತರ ಪ್ರದೇಶಗಳ ನೆರೆಹೊರೆಗಳಲ್ಲಿ ಕಂಡುಬಂದ ದೇಹದ ಭಾಗಗಳಿಗೆ ಸಾಮೂಹಿಕ ಅಂತ್ಯಕ್ರಿಯೆ ಇಲ್ಲಿ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯ ಶವಾಗಾರಗಳು ಮತ್ತು ಆಸ್ಪತ್ರೆಗಳಲ್ಲಿ ಅಂತಹ ಅವಶೇಷಗಳ ರಾಶಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಗುರುತಿಸಲಾಗದಷ್ಟು ವಿರೂಪಗೊಂಡ ದೇಹದ ಭಾಗಗಳನ್ನು ಗೌರವಯುತವಾಗಿ ವಿಲೇವಾರಿ ಮಾಡುವ ನಿರ್ಧಾರವನ್ನು ಅವರು ತೆಗೆದುಕೊಳ್ಳುವಂತೆ ಒತ್ತಾಯಿಸಲಾಯಿತು.

ಜಂಟಿ ನಿರ್ದೇಶಕರು ಗುರುವಾರ ತಡರಾತ್ರಿ ಆನ್‌ಲೈನ್ ಸಭೆ ಕರೆದಿದ್ದಾರೆ ಎಂದು ಮುಟ್ಟಿಲ್ ಪಂಚಾಯಿತಿ ಉಪಾಧ್ಯಕ್ಷ ಅಶರಫ್ ಮತ್ತು ಸ್ಥಳೀಯ ಪಾಲಿಕೆ ಅಧ್ಯಕ್ಷೆ ಶ್ರೀದೇವಿ ಬಾಬು ತಿಳಿಸಿದ್ದಾರೆ.

“ಚಾಲಿಯಾರ್ ನದಿಯಿಂದ 73 ದೇಹದ ಭಾಗಗಳನ್ನು ಪಡೆಯಲಾಗಿದೆ. ಇವು ಭೂಕುಸಿತದ ಸ್ಥಳಗಳಿಂದ ಕೊಚ್ಚಿಹೋಗಿದ್ದಾಗಿರಬಹುದು. ಆದ್ದರಿಂದ ಅವುಗಳನ್ನು ಸರಿಯಾಗಿ ವಿಲೇವಾರಿ ಮಾಡುವುದು ಮುಖ್ಯವಾಗಿತ್ತು. ಪ್ರತಿ ಸ್ಥಳೀಯ ಸಂಸ್ಥೆಗಳು ಆಯಾ ಸಾರ್ವಜನಿಕ ಸ್ಮಶಾನದಲ್ಲಿ ಸಮಾಧಿ ತೋಡಲು ಸೂಚಿಸಲಾಗಿದೆ. ನಮಗೆ 20 ಸಮಾಧಿಗಳನ್ನು ಅಗೆಯಲು ಹೇಳಲಾಯಿತು, ಆದರೆ ಹೆಚ್ಚಿನ ದೇಹಗಳನ್ನು ಇರಿಸಲು ನಮಗೆ ಸಾಕಷ್ಟು ಸ್ಥಳವಿದೆ ಎಂದು ನಾವು ಉನ್ನತ ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದು ಅಶರಫ್ ಹೇಳಿದರು.

ನಮಗೆ, ಇವರು ಮನುಷ್ಯರು, ಜಾತಿ ಮತ್ತು ಧರ್ಮದ ಹಂಗು ಇಲ್ಲ. ಅವರು ನಮ್ಮ ಜನರು ನಾವು ಅವರಿಗೆ ಗೌರವವನ್ನು ನೀಡಬೇಕು. ಇದೊಂದು ಊಹೆಗೂ ನಿಲುಕದ ದುರಂತ,” ಎಂದು ಆಶರಫ್ ಹೇಳಿದ್ದಾರೆ

Previous Post

ದಕ್ಷಿಣ ಕನ್ನಡ: ನೆರೆಪೀಡಿತ ಪ್ರದೇಶಗಳಿಗೆ ಸಚಿವ ದಿನೇಶ್ ಗುಂಡೂರಾವ್ ಭೇಟಿ; ಹಾನಿಯಾದ ಮನೆಗಳಿಗೆ ಪರಿಹಾರ ಘೋಷಣೆ

Next Post

ವಯನಾಡು ಸಂತ್ರಸ್ತರಿಗೆ ಕರ್ನಾಟಕದಿಂದ 100 ಮನೆ ನಿರ್ಮಾಣ: ಸಿದ್ದರಾಮಯ್ಯ ಘೋಷಣೆ

Next Post
ವಯನಾಡು ಸಂತ್ರಸ್ತರಿಗೆ ಕರ್ನಾಟಕದಿಂದ 100 ಮನೆ ನಿರ್ಮಾಣ: ಸಿದ್ದರಾಮಯ್ಯ ಘೋಷಣೆ

ವಯನಾಡು ಸಂತ್ರಸ್ತರಿಗೆ ಕರ್ನಾಟಕದಿಂದ 100 ಮನೆ ನಿರ್ಮಾಣ: ಸಿದ್ದರಾಮಯ್ಯ ಘೋಷಣೆ

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.