ಕರ್ನಾಟಕದ ಕರಾವಳಿ ಜಿಲ್ಲೆಗಳು ಹಾಗೂ ಮಳೆನಾಡಿನಲ್ಲಿ ಧೋ ಎಂದು ಮಳೆ ಸುರಿಯುತ್ತಲೇ ಇದೆ. ಇದರ ಪ್ರಮಾಣ ಜುಲೈ 19ರವರೆಗೂ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ರೆಡ್ ಅಲರ್ಟ್ ಘೋಷಿಸಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಮಳೆಯಾಗಲಿದೆ.

ಕರ್ನಾಟಕದಲ್ಲಿ ಕಳೆದ 15ದಿನಗಳಿಂದ ಮಳೆಯ ಪ್ರಮಾಣ ಹೆಚ್ಚಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ಬಳ್ಳಾರಿ, ಹಾಸನ, ಕೊಡಗು, ಮೈಸೂರಿನಲ್ಲಿ ಕೂಡ ಮಳೆಯಾಗಲಿದೆ.

ಕ್ಯಾಸಲ್ರಾಕ್, ಆಗುಂಬೆ, ಕುಮಟಾ, ಗೇರುಸೊಪ್ಪ, ಕದ್ರಾ, ಹೊನ್ನಾವರದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಕಾರವಾರ, ಶಿರಾಲಿ, ಗೋಕರ್ಣ, ಮಂಕಿ, ಸಿದ್ದಾಪುರ, ಕಮ್ಮರಡಿ, ನಾಪೊಕ್ಲು, ಜೋಯಿಡಾ, ಕುಂದಾಪುರ, ಸೋಮವಾರಪೇಟೆ, ಕೊಪ್ಪದಲ್ಲಿ ಮಳೆಯಾಗಿದೆ.

ಕೋಟ, ಲೋಂಡಾ, ಜಯಪುರ, ಧರ್ಮಸ್ಥಳ, ಯಲ್ಲಾಪುರ, ಭಾಗಮಂಡಲ, ಹುಂಚದಕಟ್ಟೆ, ಕಳಸ, ಸುಳ್ಯ, ಬನವಾಸಿ, ಕಿರವತ್ತಿ, ಹಳಿಯಾಳ, ಬೆಳ್ತಂಗಡಿ, ಮುಂಡಗೋಡು, ಕುಷ್ಟಗಿ, ಹಾರಂಗಿ, ಎನ್ಆರ್ಪುರ, ತ್ಯಾಗರ್ತಿ, ಬಾಳೆಹೊನ್ನೂರು, ಕಾರ್ಕಳ, ಉಪ್ಪಿನಂಗಡಿ, ಬೆಳಗಾವಿ, ಕೊಟ್ಟಿಗೆಹಾರ, ಮುಲ್ಕಿ, ಪುತ್ತೂರು, ಬಾದಾಮಿ, ಸಂಕೇಶ್ವರ, ಮುದಗಲ್, ರಾಣೆಬೆನ್ನೂರು, ಯಡವಾಡ, ಧಾರವಾಡ, ತರೀಕೆರೆ, ಕುಶಾಲನಗರ, ಸರಗೂರು, ಬಂಡೀಪುರ, ದೊಡ್ಡಬಳ್ಳಾಪುರದಲ್ಲಿ ಮಳೆಯಾಗಿದೆ.