ಜೂನ್ 28, 2024 ರಂದು ರಾತ್ರಿ, ಮಿಲಿಟರಿ ತರಬೇತಿ ಚಟುವಟಿಕೆ ನಡೆಸುತ್ತಿದ್ದಂತ ನೀರಿನ ಮಟ್ಟದಲ್ಲಿ ಹಠಾತ್ ಹೆಚ್ಚಳದಿಂದಾಗಿ ಪೂರ್ವ ಲಡಾಖ್‌ನ ಸಾಸರ್ ಬ್ರಂಗ್ಸಾ ಬಳಿಯ ಶ್ಯೋಕ್ ನದಿಯಲ್ಲಿ ಸೇನಾ ಟ್ಯಾಂಕ್ ಸಿಲುಕಿಕೊಂಡಿದೆ. ಅಲ್ಲಿಗೆ ರಕ್ಷಣಾ ತಂಡಗಳು ಧಾವಿಸಿದ್ದವು, ಆದಾಗ್ಯೂ, ಹೆಚ್ಚಿನ ಪ್ರವಾಹ ಮತ್ತು ನೀರಿನ ಮಟ್ಟದಿಂದಾಗಿ, ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಲಿಲ್ಲ ಎಂದು ಸೇನಾಪಡೆ ಎಕ್ಸ್‌ನಲ್ಲಿ ಹೇಳಿದೆ.

ದೆಹಲಿ ಜೂನ್ 29: ಶನಿವಾರ ಮುಂಜಾನೆ ಲಡಾಖ್‌ನ ನ್ಯೋಮಾ-ಚುಶುಲ್ ಪ್ರದೇಶದ ನೈಜ ನಿಯಂತ್ರಣ ರೇಖೆ (LAC) ಬಳಿ ಟಿ -72 ಟ್ಯಾಂಕ್‌ನಲ್ಲಿ ನದಿಯನ್ನು ದಾಟುತ್ತಿದ್ದಾಗ ಸೇನೆಯ ಐವರು ಯೋಧರು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ. “ಜೂನ್ 28, 2024 ರಂದು ರಾತ್ರಿ, ಮಿಲಿಟರಿ ತರಬೇತಿ ಚಟುವಟಿಕೆ ನಡೆಸುತ್ತಿದ್ದಂತೆ ನೀರಿನ ಮಟ್ಟದಲ್ಲಿ ಹಠಾತ್ ಹೆಚ್ಚಳದಿಂದಾಗಿ ಪೂರ್ವ ಲಡಾಖ್‌ನ ಸಾಸರ್ ಬ್ರಂಗ್ಸಾ ಬಳಿಯ ಶ್ಯೋಕ್ ನದಿಯಲ್ಲಿ ಸೇನಾ ಟ್ಯಾಂಕ್ ಸಿಲುಕಿಕೊಂಡಿದೆ. ಅಲ್ಲಿಗೆ ರಕ್ಷಣಾ ತಂಡಗಳು ಧಾವಿಸಿದ್ದವು, ಆದಾಗ್ಯೂ, ಹೆಚ್ಚಿನ ಪ್ರವಾಹ ಮತ್ತು ನೀರಿನ ಮಟ್ಟದಿಂದಾಗಿ, ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಲಿಲ್ಲ. ಟ್ಯಾಂಕ್ ನಲ್ಲಿದ್ದ ಸಿಬ್ಬಂದಿ ಪ್ರಾಣ ಕಳೆದುಕೊಂಡರು. ಪೂರ್ವ ಲಡಾಖ್‌ನಲ್ಲಿ ಕಾರ್ಯಾಚರಣೆಯಲ್ಲಿ ನಿಯೋಜನೆಗೊಂಡಾಗ ಐವರು ಕೆಚ್ಚೆದೆಯ ಸಿಬ್ಬಂದಿಯನ್ನು ಕಳೆದುಕೊಂಡ ಭಾರತೀಯ ಸೇನೆಯು ವಿಷಾದಿಸಿದೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ” ಎಂದು ಭಾರತೀಯ ಸೇನೆಯು ಎಕ್ಸ್‌ನಲ್ಲಿ ಹೇಳಿಕೆಯಲ್ಲಿ ತಿಳಿಸಿದೆ.

ಕಳೆದ ವರ್ಷ, ಲೇಹ್ ಜಿಲ್ಲೆಯ ಕಿಯಾರಿ ಬಳಿ ಅವರು ಪ್ರಯಾಣಿಸುತ್ತಿದ್ದ ಸೇನಾ ಟ್ರಕ್ ಆಳವಾದ ಕಮರಿಗೆ ಬಿದ್ದು ಜೆಸಿಒ ಸೇರಿದಂತೆ ಒಂಬತ್ತು ಸೈನಿಕರು ಪ್ರಾಣ ಕಳೆದುಕೊಂಡಿದ್ದರು.

