ಮಂಗಳೂರು: ವಿದ್ಯುತ್ ತಂತಿ ತಗುಲಿ ಇಬ್ಬರು ಆಟೋ ಚಾಲಕರು ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ನಗರದ ರೊಸಾರಿಯೊ ಶಾಲೆಯ ಬಳಿ ನಡೆದಿದೆ.
ಮೃತ ರಿಕ್ಷಾ ಚಾಲಕರನ್ನು ಉಪ್ಪಿನಂಗಡಿಯ ರಾಜು ಮತ್ತು ಸಕಲೇಶಪುರದ ದೇವರಾಜು ಎಂದು ಗುರುತಿಸಲಾಗಿದೆ

ಇವರು ರೊಸಾರಿಯೋ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ ಇಂದು ಬೆಳಿಗ್ಗೆ ರಿಕ್ಷಾ ತೊಳೆಯಲೆಂದು ಓರ್ವ ಚಾಲಕ ಮನೆಯಿಂದ ಹೊರಬಂದ ವೇಳೆ ತುಂಡಾಗಿ ಬಿದ್ದಿರುವ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಾರೆ ಇದನ್ನು ಗಮನಿಸಿದ ಇನ್ನೋರ್ವ ಚಾಲಕ ರಕ್ಷಣೆಗೆ ಧಾವಿಸಿದ್ದು ಈ ವೇಳೆ ಅವರು ಕೂಡ ವಿದ್ಯುತ್ ಆಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.
