ಪೆನ್‌ಡ್ರೈವ್ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್‌ಐಟಿ)ಕೈ ಹಾಸನ ಜಿಲ್ಲೆಯ ಮಹಿಳೆಯೊಬ್ಬರು ದೂರು ನೀಡಿದ್ದು, ಆದರನ್ವಯ ಪ್ರಜ್ವಲ್ ಹಾಗೂ ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಬೆಂಗಳೂರು(ಜೂ.26): ಲೋಕಸಭಾ ಚುನಾವಣೆ ವೇಳೆ ಸಾರ್ವಜನಿಕ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ದೃಶ್ಯಾವಳಿಗಳು ತುಂಬಿದ ಪೆನ್ ಡ್ರೈವ್ ಹಂಚಿಕೆ ಪ್ರಕರಣ ರೋಚಕ ತಿರುವು ಪಡೆದಿದ್ದು, ಈಗ ಕೇಸಲ್ಲಿ ಪ್ರಜ್ವಲ್‌ರ ರಾಜಕೀಯ ವಿರೋಧಿಯೇ ಆರೋಪಿಯಾಗಿದ್ದಾರೆ.

ಪೆನ್‌ಡ್ರೈವ್ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್‌ಐಟಿ)ಕೈ ಹಾಸನ ಜಿಲ್ಲೆಯ ಮಹಿಳೆಯೊಬ್ಬರು ದೂರು ನೀಡಿದ್ದು, ಆದರನ್ವಯ ಪ್ರಜ್ವಲ್ ಹಾಗೂ ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಜೊತೆಗೆ ಹಾಸನದ ಬಿಜೆಪಿ ಮುಖಂಡ ಶರತ್ ಅಲಿಯಾಸ್ ಕ್ವಾಲಿಟಿ ಬಾರ್‌ಶರತ್ ಮತ್ತು ಕಿರಣ್ ವಿರುದ್ಧ ರಾಜ್ಯ ಅಪರಾಧ ತನಿಖಾ ದಳ (ಸಿಐಡಿ)ದ ಠಾಣೆಯಲ್ಲಿ ಹೊಸ ಎಫ್‌ಐಆರ್ ದಾಖಲಾಗಿದೆ. ದೂರುದಾರ ಮಹಿಳೆಯ ಅಶ್ಲೀಲವಿಡಿಯೋವನ್ನು ಪ್ರಜ್ವಲ್ ಚಿತ್ರೀಕರಿಸಿದ ಆರೋಪವಿದ್ದರೆ, ಆ ವಿಡಿಯೋಗಳು ತುಂಬಿದ್ದ ವೆನ್‌ಡ್ರೈವ್ ಅನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಿದ ಆಪಾದನೆ ಮಾಜಿ ಶಾಸಕ ಪ್ರೀತಂಗೌಡ ಮೇಲೆ FIR ದಾಖಲಾಗಿದೆ.

ಈ ಪ್ರಕರಣ ಸಂಬಂಧ ತನಿಖೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಪ್ರಜ್ವಲ್ ಅವರನ್ನು ಬಾಡಿ ವಾರಂಟ್ ಮೇರೆಗೆ ಎಸ್‌ಐಟಿ ಮಂಗಳವಾರ 4 ದಿನ ವಶಕ್ಕೆ ಪಡೆದಿದೆ. ಇನ್ನುಳಿದ ಪ್ರೀತಂಗೌಡ ಹಾಗೂ ಅವರ ಸಹಚರರಿಗೆ ಬಂಧನ ಭೀತಿ ಎದುರಾಗಿದ್ದು, ಮೂವರ ಪತ್ತೆಗೆ ಎಸ್‌ಐಟಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗಿದೆ. ಪೆನ್ ಡ್ರೈವ್ ಹಂಚಿಕೆ ಸಂಬಂಧ ಹಾಸನ ನಗರದಲ್ಲಿ ಶರತ್ ಹಾಗೂ ಕಿರಣ್ ಮನೆಗಳ ಮೇಲೆ ಕೆಲ ದಿನಗಳ ಹಿಂದೆಯೇ ಎಸ್‌ಐಟಿ ದಾಳಿ ನಡೆಸಿ ಕೆಲ ದಾಖಲೆಗಳನ್ನು ಜಪ್ತಿ ಮಾಡಿತ್ತು. ಅಲ್ಲದೆ ಪ್ರೀತಂಗೌಡರ ಮತ್ತಿಬ್ಬರು ಸಹಚರರು ಪೆನ್‌ಡೈವ್ ಹಂಚಿಕೆಯಲ್ಲಿ ಬಳಸಿದ್ದರು ಎನ್ನಲಾದ ಕಂಪ್ಯೂಟರ್, ಹಾಡ್ ೯ಡಿಸ್ಕ್ ಅನ್ನು ನದಿಗೆ ಎಸೆಯುವಾಗ ಎಸ್ ಐಟಿಗೆ ಬಲೆಗೆ ಬಿದ್ದಿದ್ದರು.ಆ ವೇಳೆ ಆ ಇಬ್ಬರಿಂದ ಅಶ್ಲೀಲ ವಿಡಿಯೋಗಳು ತುಂಬಿದ್ದ ಪೆನ್ ಡ್ರೈವ್ ಸಹ ಜಪ್ತಿಯಾಗಿತ್ತು. ಈಗ ಸಹಚರರ ವಿಚಾರಣೆ ವೇಳೆ ನೀಡಿದಮಾಹಿತಿ ಆಧರಿಸಿಯೇ ಪ್ರೀತಂಗೌಡ ಅವರಿಗೆ ಸಂಕಷ್ಟ ಎದುರಾಗಿದೆ ಎಂದು ತಿಳಿದು ಬಂದಿದೆ.

ಪ್ರಜ್ವಲ್ 4 ದಿನ ಎಸ್‌ಐಟಿ ವಶಕ್ಕೆ: ಪ್ರೀತಮ್ ಗೌಡಗೆ ಬಂಧನದ ಭೀತಿ
ಈ ಪ್ರಕರಣ ಸಂಬಂಧ ತನಿಖೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಪ್ರಜ್ವಲ್‌ರನ್ನು ಬಾಡಿ ವಾರಂಟ್ ಮೇರೆಗೆ ಎಸ್‌ಐಟಿ ಮಂಗಳವಾರ 4 ದಿನ ವಶಕ್ಕೆ ಪಡೆದಿದೆ. ಇನ್ನುಳಿದ ಪ್ರೀತಂಗೌಡ ಹಾಗೂ ಸಹಚರರಿಗೆ ಬಂಧನ ಭೀತಿ ಎದುರಾಗಿ ದ್ದು, ಮೂವರ ಪತ್ತೆಗೆ ಎಸ್‌ಐಟಿ ಕಾರ್ಯಾಚರಣೆ ನಡೆಸಿದೆ ಎನ್ನಲಾಗಿದೆ.
