ಚಿಕ್ಕಮಗಳೂರು: ಭದ್ರಾ ನದಿಯ ಬ್ಯಾಕ್ ವಾಟರ್ನಲ್ಲಿ ತೆಪ್ಪವೊಂದು ಮುಳುಗಿದ ಪರಿಣಾಮ ಮೂರು ಜನ ಸಾವನ್ನಪ್ಪಿದ್ದಾರೆ. ಎನ್.ಆರ್ ಪುರ ತಾಲೂಕಿನ ಬೈರಾಪುರ ಗ್ರಾಮದ ಬಳಿಯ ಭದ್ರಾ ನದಿಯ ಬ್ಯಾಕ್ ವಾಟರ್ನಲ್ಲಿ ಈ ಘಟನೆ ನಡೆದಿದೆ.

ಶಿವಮೊಗ್ಗದ ವಿದ್ಯಾನಗರ ಮೂಲದ ಆದೀಲ್, ಸಾಜೀದ್ ಹಾಗೂ ಅಫ್ದಾ ಖಾನ್ ಮೃತ ದುರ್ದೈವಿಗಳು. ಇವರೆಲ್ಲ ಸೇರಿ ತೆಪ್ಪದಲ್ಲಿ ಭದ್ರಾ ನದಿಯ ನೀರಿನಲ್ಲಿ ಹೋಗುತ್ತಿದ್ದರು. ಈ ವೇಳೆ ತೆಪ್ಪ ಇದ್ದಕ್ಕೆ ಇದ್ದಂತೆ ಮುಳುಗಿ ಹೋಗಿದೆ. ಇದರಿಂದ ತೆಪ್ಪದಲ್ಲಿದ್ದ ಮೂವರು ನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಆಗಮಿಸಿದ ಬಳಿಕ ವನ್ಯಜೀವಿ ಇಲಾಖೆ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದಾರೆ. ನೀರಿನಲ್ಲಿ ಮುಳುಗಿ ಸಾವನ್ನಪ್ಪಿದವರ ಮೃತದೇಹ ಸಿಗದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದ್ದಾರೆ. ಎನ್.ಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ

