
ಉಪ್ಪಿನಂಗಡಿ: ರವಿವಾರ ಮೃತಪಟ್ಟ ಹೇಮಾವತಿ (37) ಪ್ರಕರಣವನ್ನು ಕೊಲೆ ಎಂದು ತೀರ್ಮಾನಿಸಿರುವ ಪೊಲೀಸರು, ಈ ಸಂಬಂಧ ಅಪ್ರಾಪ್ತ ವಯಸ್ಕನನ್ನು ಬಂಧಿಸಿದ್ದಾರೆ.

ಹೇಮಾವತಿ ಅವರ ಮನೆಯಲ್ಲಿ ರಾತ್ರಿ ತಂಗಿದ್ದ ಅಕ್ಕನ ಮಗ, 10ನೇ ತರಗತಿ ವಿದ್ಯಾರ್ಥಿಯೇ ಆರೋಪಿ. ಬಾಲಕನು ಚಿಕ್ಕಮ್ಮನ ಜತೆ ಅನುಚಿತವಾಗಿ ವರ್ತಿಸಿದ್ದು, ಆಗ ಪ್ರತಿರೋಧ ಒಡ್ಡಿದ ಕಾರಣ ಹೇಮಾವತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ.

ಹೌದು, ಸಾಮಾನ್ಯವಾಗಿ ಅಕ್ಕ-ತಂಗಿ ಬಾಂಧವ್ಯದ ಹಿನ್ನೆಲೆಯಲ್ಲಿ ಅಕ್ಕನ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಮಗನನ್ನು ಹೇಮಾವತಿ ಮನೆಯಲ್ಲಿ ಇರಿಸಿಕೊಂಡಿದ್ದಾಳೆ. ಆದರೆ, ಅಕ್ಕನ ಮಗ ಓದುವ ಬಾಲಕನಾಗಿದ್ದರಿಂದ ಆತ ತನ್ನ ಮೇಲೆ ಕಣ್ಣು ಹಾಕಿದ್ದಾನೆ ಎಂಬ ಅರಿವೂ ಆಕೆಗಿರಲಿಲ್ಲ. ಸಾಮಾನ್ಯ ದಿನಗಳಂತೆ ಹೇಮಾವತಿ ಊಟ ಮುಗಿಸಿ ಪ್ರತ್ಯೇಕ ಕೋಣೆಯಲ್ಲಿ ಮಲಗಿದ್ದಾರೆ. ತಡರಾತ್ರಿ ಆಗುತ್ತಿದ್ದಂತೆ ಬಾಲಕ ಚಿಕ್ಕಮ್ಮನ ಮೇಲೆ ಅತ್ಯಾಚಾರ ಮಾಡಲು ಮುಂದಾಗಿದ್ದಾನೆ. ಈ ವೇಳೆ ಆತನ ಅತ್ಯಚಾರ ಯತ್ನಕ್ಕೆ ವಿರೋಧಿಸಿ ಕೆನ್ನೆಗೆ ಒಂದು ಬಾರಿಸಿ ಕಳಿಸಿದ್ದಾಳೆ. ಜೊತೆಗೆ, ಹುಡುಗ ಬುದ್ಧಿಯಿಂದ ಹೀಗೆ ಮಾಡುತ್ತಿದ್ದಾನೆ ಎಂದು ಅರಿತು ಮನೆಯ ಇತರೆ ಸದಸ್ಯರನ್ನು ಎಬ್ಬಿಸದೇ ಸುಮ್ಮನೆ ಮಲಗಿದ್ದಾರೆ

ಆದರೆ, ಬೆಳಗಾದರೆ ತನ್ನ ಬಗ್ಗೆ ಚಿಕ್ಕಮ್ಮ ಎಲ್ಲರೆದುರು ಅತ್ಯಾಚಾರ ಯತ್ನದ ಬಗ್ಗೆ ಹೇಳಿ ಮರ್ಯಾದೆ ಕಳೆಯುತ್ತಾಳೆ ಎಂದು ಹೆದರಿಕೊಂಡು ರಾತ್ರಿ ಮಲಗಿದ್ದ ಚಿಕ್ಕಮ್ಮನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬೆಳಗ್ಗೆ ಎಷ್ಟೇ ಹೊತ್ತಾದರೂ ಹೇಮಾವತಿ ಹಾಸಿಗೆಯಿಂದ ಎದ್ದೇಳದ ಹಿನ್ನೆಲೆಯಲ್ಲಿ ಮನೆಯವರು ಎಬ್ಬಿಸಲು ಮುಂದಾಗಿದ್ದಾರೆ. ಆಗ ಹಾಸಿಗೆಯಲ್ಲಿಯೇ ಸಾವನ್ನಪ್ಪಿರುವುದು ಖಚಿತವಾಗಿದೆ. ಆಗ ಬಾಲಕ ಚಿಕ್ಕಮ್ಮ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ಮನೆಯವರನ್ನು ನಂಬಿಸಿ ಅಂತ್ಯಕ್ರಿಯೆ ಮಾಡುವಂತೆ ಸಲಹೆ ನೀಡಿದ್ದಾನೆ.

ಹಾಸಿಗೆಯಲ್ಲೇ ಸಾವನ್ನಪ್ಪಿದ್ದ ಹೇಮಾವತಿ: ಈ ದುರ್ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಬಿಳಿಯೂರು ಬಳಿ ನಡೆದಿದೆ. ಕೊಲೆಯಾದ ಮಹಿಳೆ ಹೇಮಾವತಿ(37) ಆಗಿದ್ದಾಳೆ. ಜೂ.16ರಂದು ಬಿಳಿಯೂರಿನ ಮನೆಯಲ್ಲಿ ಹೇಮಾವತಿ ಅಕ್ಕನ ಮನೆಯಲ್ಲಿಯೇ ಮೃತದೇಹವಾಗಿ ಪತ್ತೆಯಾಗಿದ್ದಾಳೆ. ಇನ್ನು ಪೊಲೀಸರಿಗೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ಇದಾದ ನಂತರ ಪೊಲೀಸರು ಮಹಿಳೆ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮರಣೋತ್ತರ ಪರೀಕ್ಷೆಗೆ ಶವ ರವಾನಿಸಿದ್ದಾರೆ.
ಮರಣೋತ್ತರ ಪರೀಕ್ಷೆ ವೇಳೆ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಇದನ್ನು ಆಧರಿಸಿ ಕೊಲೆಯ ಘಟನೆಯನ್ನು ಬೇಧಿಸಿದಾಗ ಮನೆಯಲ್ಲಿದ್ದ ಅಕ್ಕನ ಮಗನೇ ಅತ್ಯಚಾರಕ್ಕೆ ಯತ್ನಿಸಿ ವಿರೋಧಿಸಿದಾಗ ಕೊಲೆ ಮಾಡಿದ್ದಾನೆ ಎಂಬುದು ತಿಳಿದುಬಂದಿದೆ. ಈ ಘಟನೆಯ ಕುರಿತು ಕೊಲೆ ಮಾಡಿದ 10ನೇ ತರಗತಿ ಅಭ್ಯಾಸ ಮಾಡುತ್ತಿದ್ದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಮೃತ ಹೇಮಾವತಿ ಅವರ ಗಂಡ ವಿಠಲ ಪೈ ಅವರ ದೂರಿನಡಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಯತ್ನ ಮತ್ತು ಕೊಲೆ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ.