
ಮಂಗಳೂರು, ಜೂನ್ 12: ಬಿಜೆಪಿ ವಿಜಯೋತ್ಸವ ವೇಳೆ ಪ್ರಚೋದನಕಾರಿ ಘೋಷಣೆ ಯಿಂದಾಗಿ ಇಬ್ಬರಿಗೆ ಚೂರಿ ಇರಿತ ಪ್ರಕರಣಕ್ಕೆ (stabbing case) ಸಂಬಂಧಿಸಿದಂತೆ ಮತ್ತೆ 7 ಜನರನ್ನು ಕೊಣಾಜೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇಮ್ರಾನ್, ಇರ್ಷಾದ್, ಶರ್ವಾನ್, ತಾಜುದ್ದೀನ್, ಮುಬಾರಕ್, ಅಶ್ರಫ್, ತಲ್ಲತ್ ಬಂಧಿತರು. ಆ ಮೂಲಕ ಚೂರಿ ಇರಿತ ಪ್ರಕರಣದಲ್ಲಿ ಇದುವರೆಗೆ 13 ಮಂದಿಯನ್ನು ಬಂಧಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಿಯಾರ್ ಪ್ರದೇಶದಲ್ಲಿ ಜೂನ್ 9ರಂದು ಬಿಜೆಪಿ ಯ ಕಾರ್ಯಕರ್ತರ ಕೋಮು ಭಾವನೆ ಕೆರಳಿಸುವ ಘೋಷಣೆ ಯಿಂದಾಗಿ ಇಬ್ಬರಿಗೆ ಚೂರಿ ಇರಿತವಾಗಿತ್ತು.

