
Prashant Kishor:ಚುನಾವಣಾ ಫಲಿತಾಂಶದ ಬಳಿಕ ಮೊದಲ ಮಾಧ್ಯಮ ಸಂದರ್ಶನ ನೀಡಿರುವ ಪ್ರಶಾಂತ್ ಕಿಶೋರ್, ಹೌದು, ನಾನು ಮತ್ತು ನನ್ನಂತಹ ಸಮೀಕ್ಷೆಗಾರರು ಈ ಬಾರಿ ಚುನಾವಣೆಯನ್ನು ತಪ್ಪಾಗಿ ಗ್ರಹಿಸಿದ್ದೇವೆ. ಈ ಬಗ್ಗೆ ನಮ್ಮಿಂದಾಗಿರುವ ತಪ್ಪು ಲೆಕ್ಕಾಚಾರವನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಜೂನ್ 4 ರಂದು ಲೋಕಸಭಾ ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸುವ ಮೊದಲು, ಪ್ರಶಾಂತ್ ಕಿಶೋರ್ ಬಿಜೆಪಿ ತನ್ನ 2019 ರ ಚುನಾವಣಾ ಸಾಧನೆಯನ್ನು ಪುನರಾವರ್ತಿಸುತ್ತದೆ ಮತ್ತು ಸುಮಾರು 300 ಸ್ಥಾನಗಳನ್ನು ಪಡೆಯುತ್ತದೆ ಎಂದು ಭವಿಷ್ಯ ನುಡಿದಿದ್ದರು.

ನವದೆಹಲಿ: ಈ ಬಾರಿ ಲೋಕಸಭಾ ಚುನಾವಣಾ ಫಲಿತಾಂಶ(Election Results 2024) ಎಲ್ಲಾ ಎಕ್ಸಿಟ್ ಪೋಲ್(Exit poll) ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಈ ಬಾರಿ 370 ಸ್ಥಾನಗಳನ್ನು ಖಚಿತವಾಗಿ ಪಡೆದೇ ಪಡೆಯುತ್ತದೆ ಎಂದು ಭವಿಷ್ಯ ನುಡಿದಿದ್ದ ಅದೆಷ್ಟೋ ರಾಜಕೀಯ ವಿಶ್ಲೇಷಕರ ಮಾತು ಸುಳ್ಳಾಗಿದೆ. ಅದರಲ್ಲಿ ರಾಜಕೀಯ ಚಾಣಕ್ಯ, ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಭವಿಷ್ಯವಾಣಿಯೂ ಈಬಾರಿ ಸುಳ್ಳಾಗಿದೆ. ಫಲಿತಾಂಶ ಪ್ರಕಟಗೊಂಡು ನಾಲ್ಕು ದಿನಗಳ ಕಾಲ ಯಾವ ಪ್ರತಿಕ್ರಿಯೆ ನೀಡದೇ ಸುಮ್ಮನಿದ್ದ ಪ್ರಶಾಂತ್ ಕಿಶೋರ್(Prashant Kishor) ಇದೀಗ ಈ ಬಗ್ಗೆ ಮೌನ ಮುರಿದಿದ್ದಾರೆ. ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ನೀಡಿರುವ ಭವಿಷ್ಯವಾಣಿ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ

ಚುನಾವಣಾ ಫಲಿತಾಂಶದ ಬಳಿಕ ಮೊದಲ ಮಾಧ್ಯಮ ಸಂದರ್ಶನ ನೀಡಿರುವ ಪ್ರಶಾಂತ್ ಕಿಶೋರ್, ಹೌದು, ನಾನು ಮತ್ತು ನನ್ನಂತಹ ಸಮೀಕ್ಷೆಗಾರರು ಈ ಬಾರಿ ಚುನಾವಣೆಯನ್ನು ತಪ್ಪಾಗಿ ಗ್ರಹಿಸಿದ್ದೇವೆ. ಈ ಬಗ್ಗೆ ನಮ್ಮಿಂದಾಗಿರುವ ತಪ್ಪು ಲೆಕ್ಕಾಚಾರವನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಜೂನ್ 4 ರಂದು ಲೋಕಸಭಾ ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸುವ ಮೊದಲು, ಪ್ರಶಾಂತ್ ಕಿಶೋರ್ ಬಿಜೆಪಿ ತನ್ನ 2019 ರ ಚುನಾವಣಾ ಸಾಧನೆಯನ್ನು ಪುನರಾವರ್ತಿಸುತ್ತದೆ ಮತ್ತು ಸುಮಾರು 300 ಸ್ಥಾನಗಳನ್ನು ಪಡೆಯುತ್ತದೆ ಎಂದು ಭವಿಷ್ಯ ನುಡಿದಿದ್ದ.

ಆದರೆ ಬಿಜೆಪಿ ಈ ಬಾರಿ ಕೇವಲ 240 ಲೋಕಸಭಾ ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದರಿಂದ ಅವರ ಭವಿಷ್ಯವಾಣಿ ಸುಳ್ಳಾಗಿದೆ. ದೇಶದ ಮುಂದಿನ ಚುನಾವಣೆಗಳಲ್ಲಿ ನೀವು ಅಂಕಿಅಂಶಗಳನ್ನು ಭವಿಷ್ಯ ನುಡಿಯುವುದನ್ನು ಮುಂದುವರಿಸುತ್ತೀರಾ ಎಂದು ಕೇಳಿದಾಗ, ಪ್ರಶಾಂತ್ ಕಿಶೋರ್, “ಇಲ್ಲ, ನಾನು ಇನ್ನು ಮುಂದೆ ಯಾವ ಚುನಾವಣೆಯಲ್ಲೂ ಸ್ಥಾನಗಳ ಲೆಕ್ಕಾಚಾರವಾಗಲೀ ಭವಿಷ್ಯವನ್ನಾಗಲಿ ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ

ಪ್ರಶಾಂತ್ ಕಿಶೋರ್ ಏನು ಹೇಳಿದ್ದರು?
ಕಿಶೋರ್, ಸಂದರ್ಶನವೊಂದರಲ್ಲಿ, ಆಡಳಿತಾರೂಢ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಯಾವುದೇ ಗಮನಾರ್ಹ ಅತೃಪ್ತಿ ಇಲ್ಲದ ಕಾರಣ ಬಿಜೆಪಿ ಆರಾಮವಾಗಿ ಬಹುಮತದ ಅಂಕವನ್ನು ದಾಟುತ್ತದೆ ಎಂದು ಹೇಳಿದ್ದರು. “ನಿರಾಶೆಗಳು, ಈಡೇರದ ಆಕಾಂಕ್ಷೆಗಳು ಇರಬಹುದು. ಆದರೆ ವ್ಯಾಪಕ ಕೋಪದ ಬಗ್ಗೆ ಯಾವುದೇ ಸುಳಿವು ಇಲ್ಲ” ಎಂದು ಪ್ರಶಾಂತ್ ಕಿಶೋರ್ ಹೇಳಿದ್ದರು. “ಬಿಜೆಪಿ ತನ್ನ ಮಹತ್ವಾಕಾಂಕ್ಷೆಯ 370 ಸ್ಥಾನ ಗುರಿಯನ್ನು ಸಾಧಿಸಲು ಸಾಧ್ಯವಾಗದಿರಬಹುದು” ಎಂದು ಸುಳಿವು ನೀಡಿದ್ದರು