
ಕೆಲವರು ಮತ ನೀಡ್ತಾರೆ, ಇನ್ನು ಕೆಲವರು ಕಪಾಳಮೋಕ್ಷ ಮಾಡುತ್ತಾರೆ. ಅಸಲಿಗೆ ಏನಾಯಿತೋ ಗೊತ್ತಿಲ್ಲ.ಅಮ್ಮ ಕೂಡ ಕುಳಿತಿದ್ದರು ಎಂದು ಕಾನ್ ಸ್ಟೇಬಲ್ ಹೇಳಿದ್ದರೆ ನಿಜ. ರೈತರ ಆಂದೋಲನದಲ್ಲಿ ಅವರ ತಾಯಿ ಭಾಗವಹಿಸಿದ್ದು, ಯಾರಾದರೂ ಅವರ ಬಗ್ಗೆ ಮಾತನಾಡಿದರೆ ಕೋಪ ಬರದೇ ಇರುತ್ತದೆಯೇ ಎಂದ ಸಂಜಯ್ ರಾವತ್.

ದೆಹಲಿ ಜೂನ್ 07: ಗುರುವಾರ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಮಹಿಳಾ ಸಿಐಎಸ್‌ಎಫ್ ಕಾನ್ಸ್‌ಟೇಬಲ್ ನಟಿ, ರಾಜಕಾರಣಿ ಕಂಗನಾ ಗೆ (Kangana Ranaut) ಕಪಾಳಮೋಕ್ಷ ಮಾಡಿದ ಪ್ರಕರಣ ಬಗ್ಗೆ ಶಿವಸೇನಾ (UBT) ಸಂಸದ ಸಂಜಯ್ ರಾವತ್ (Sanjay Raut) ಪ್ರತಿಕ್ರಿಯಿಸಿದ್ದಾರೆ. ಕೆಲವರು ಮತ ನೀಡ್ತಾರೆ, ಇನ್ನು ಕೆಲವರು ಕಪಾಳಮೋಕ್ಷ ಮಾಡುತ್ತಾರೆ. ಅಸಲಿಗೆ ಏನಾಯಿತೋ ಗೊತ್ತಿಲ್ಲ.ಅಮ್ಮ ಕೂಡ ಕುಳಿತಿದ್ದರು ಎಂದು ಕಾನ್ ಸ್ಟೇಬಲ್ ಹೇಳಿದ್ದರೆ ನಿಜ. ರೈತರ ಆಂದೋಲನದಲ್ಲಿ ಅವರ ತಾಯಿ ಭಾಗವಹಿಸಿದ್ದು, ಯಾರಾದರೂ ಅವರ ಬಗ್ಗೆ ಮಾತನಾಡಿದರೆ ಕೋಪ ಬರದೇ ಇರುತ್ತದೆಯೇ ಎಂದು ಮಾಧ್ಯಮಗಳೊಂದಿಗೆ ಮಾತನಾಡಿದ ರಾವತ್ ಹೇಳಿದ್ದಾರೆ.

.
ರೈತರು ₹ 100 ಪಡೆದು ಅಲ್ಲಿ ಕುಳಿತಿದ್ದಾರೆ ಎಂದು ಕಂಗನಾ ಹೇಳಿದ್ದಾರೆ. ಅವರಿಗೆ ಅಷ್ಟೇ ದುಡ್ಡು ಕೊಟ್ಟರೆ ಅವರು ಅಲ್ಲಿಗೆ ಹೋಗಿ ಕುಳಿತುಕೊಳ್ಳುತ್ತಾರೆಯೇ? ಆಕೆ ಈ ರೀತಿ ಹೇಳಿಕೆ ನೀಡಿದಾಗ ನನ್ನ ತಾಯಿ ಅಲ್ಲಿ ಕುಳಿತು ಪ್ರತಿಭಟಿಸುತ್ತಿದ್ದರು” ಎಂದು ಘಟನೆಯ ನಂತರ ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಕೌರ್ ಮಾತನಾಡಿರುವ ವಿಡಿಯೊ ವೈರಲ್ ಆಗಿದೆ. ಕುಲ್ವಿಂದರ್ ಕೌರ್ ವಿರುದ್ಧ ಸಿಐಎಸ್‌ಎಫ್ ಕ್ರಮ ಕೈಗೊಂಡಿದ್ದು ಆಕೆಯನ್ನು ಅಮಾನತುಗೊಳಿಸಿದೆ. ಪ್ರಕರಣ ಬಗ್ಗೆ ತನಿಖೆ ನಡೆಯುತ್ತಿದೆ.


