
ಲೋಕಸಭೆಯ 543 ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ 240 ಸ್ಥಾನಗಳನ್ನು ಪಡೆದುಕೊಂಡು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆ ಬಳಿಕ 99 ಕ್ಷೇತ್ರಗಳಲ್ಲಿ ಗೆಲುವಿನೊಂದಿಗೆ ಕಾಂಗ್ರೆಸ್ ಎರಡನೇ ಅತಿದೊಡ್ಡ ಪಕ್ಷವಾಗಿದೆ. ಈ ಬಾರಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಆದರೆ ಎನ್‌ಡಿಎ ಮೈತ್ರಿಕೂಟವು ಬಹುಮತವನ್ನು ಪಡೆದುಕೊಂಡಿದೆ.

2019ರಲ್ಲಿ ಬಿಜೆಪಿ 303 ಮತ್ತು 2014ರಲ್ಲಿ 282 ಸ್ಥಾನಗಳಲ್ಲಿ ಗೆಲುವು ಗಳಿಸಿದ್ದ ಬಿಜೆಪಿಗೆ 2024 ದೊಡ್ಡ ಹೊಡೆತವನ್ನು ನೀಡಿದೆ. 2019ರಲ್ಲಿ 52 ಸ್ಥಾನಗಳಲ್ಲಿ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 99 ಸ್ಥಾನಗಳನ್ನು ಗೆದ್ದು ಉತ್ತಮ ಸಾಧನೆ ಮಾಡಿದೆ. ‘ಇಂಡಿಯಾ’ ಮೈತ್ರಿಕೂಟದ ಪೈಕಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ 37 ಸ್ಥಾನಗಳಲ್ಲಿ, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ 29 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.

ಲೋಕಸಭೆ ಚುನಾವಣೆ 2024: ಪಕ್ಷಾವಾರು ಗಳಿಸಿದ ಸ್ಥಾನಗಳು
ಬಿಜೆಪಿ-240 ಸ್ಥಾನಗಳು, ಕಾಂಗ್ರೆಸ್- 99 ಸ್ಥಾನಗಳು, ಸಮಾಜವಾದಿ ಪಕ್ಷ (ಎಸ್‌ಪಿ)- 37 ಸ್ಥಾನಗಳು, ಟಿಎಂಸಿ: 29 ಸ್ಥಾನಗಳು, ಡಿಎಂಕೆ: 22 ಸ್ಥಾನಗಳು, ತೆಲುಗು ದೇಶಂ: 16 ಸ್ಥಾನಗಳು, ಜೆಡಿಯು: 12 ಸ್ಥಾನಗಳು, ಶಿವಸೇನಾ (ಉದ್ಧವ್ ಬಾಳಾಸಾಹೇಬ್ ಠಾಕ್ರೆ): 9 ಸ್ಥಾನಗಳು, ಎನ್‌ಸಿಪಿ (ಶರದ್ ಪವಾರ್): 8 ಸ್ಥಾನಗಳು, ಶಿವಸೇನಾ (ಎಸ್‌ಎಚ್‌ಎಸ್): 7 ಸ್ಥಾನಗಳು, ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್): 5 ಸ್ಥಾನಗಳು, ವೈಎಸ್‌ಆರ್‌ಸಿಪಿ: 4 ಸ್ಥಾನಗಳು, ಆರ್‌ಜೆಡಿ: 4 ಸ್ಥಾನಗಳು, ಸಿಪಿಐ(ಎಂ): 4 ಸ್ಥಾನಗಳು, ಐಯುಎಂಎಲ್: 3 ಸ್ಥಾನಗಳು, ಎಎಪಿ: 3 ಸ್ಥಾನಗಳು, ಜೆಎಂಎಂ: 3 ಸ್ಥಾನಗಳು, ಜನಸೇನಾ ಪಕ್ಷ-2 ಸ್ಥಾನಗಳು, ಸಿಪಿಐ(ಎಂಎಲ್)(ಎಲ್) -2 ಸ್ಥಾನಗಳು, ಜೆಡಿಎಸ್-2ಸ್ಥಾನಗಳು, ವಿಸಿಕೆ-2ಸ್ಥಾನಗಳು, ಸಿಪಿಐ-2 ಸ್ಥಾನಗಳು, ಆರ್‌ಎಲ್‌ಡಿ-2 ಸ್ಥಾನಗಳು, ಜಮ್ಮು-ಕಾಶ್ಮೀರ ನ್ಯಾಷನಲ್ ಕಾನ್ಪರೆನ್ಸ್-2 ಸ್ಥಾನಗಳನ್ನು ಪಡೆದುಕೊಂಡಿದೆ.
Dravida Munnetra Kazhagam – DMK | 22 | 0 | 22 |
Telugu Desam – TDP | 16 | 0 | 16 |
Janata Dal (United) – JD(U) | 12 | 0 | 12 |
Shiv Sena (Uddhav Balasaheb Thackrey) – SHSUBT | 9 | 0 | 9 |
Nationalist Congress Party – Sharadchandra Pawar – NCPSP | 8 | 0 | 8 |
Shiv Sena – SHS | 7 | 0 | 7 |
Lok Janshakti Party(Ram Vilas) – LJPRV | 5 | 0 | 5 |
Yuvajana Sramika Rythu Congress Party – YSRCP | 4 | 0 | 4 |
Rashtriya Janata Dal – RJD | 4 | 0 | 4 |
Communist Party of India (Marxist) – CPI(M) | 4 | 0 | 4 |
Indian Union Muslim League – IUML | 3 | 0 | 3 |
Aam Aadmi Party – AAAP | 3 | 0 | 3 |
Jharkhand Mukti Morcha – JMM | 3 | 0 | 3 |
Janasena Party – JnP | 2 | 0 | 2 |
Communist Party of India (Marxist-Leninist) (Liberation) – CPI(ML)(L) | 2 | 0 | 2 |
Janata Dal (Secular) – JD(S) | 2 | 0 | 2 |
Viduthalai Chiruthaigal Katchi – VCK | 2 | 0 | 2 |
Communist Party of India – CPI | 2 | 0 | 2 |
Rashtriya Lok Dal – RLD | 2 | 0 | 2 |
Jammu & Kashmir National Conference – JKN | 2 | 0 | 2 |
United People’s Party, Liberal – UPPL | 1 | 0 | 1 |
Asom Gana Parishad – AGP | 1 | 0 | 1 |
Hindustani Awam Morcha (Secular) – HAMS | 1 | 0 | 1 |
Kerala Congress – KEC | 1 | 0 | 1 |
Revolutionary Socialist Party – RSP | 1 | 0 | 1 |
Nationalist Congress Party – NCP | 1 | 0 | 1 |
Voice of the People Party – VOTPP | 1 | 0 | 1 |
Zoram People’s Movement – ZPM | 1 | 0 | 1 |
Shiromani Akali Dal – SAD | 1 | 0 | 1 |
Rashtriya Loktantrik Party – RLTP | 1 | 0 | 1 |
Bharat Adivasi Party – BHRTADVSIP | 1 | 0 | 1 |
Sikkim Krantikari Morcha – SKM | 1 | 0 | 1 |
Marumalarchi Dravida Munnetra Kazhagam – MDMK | 1 | 0 | 1 |
Aazad Samaj Party (Kanshi Ram) – ASPKR | 1 | 0 | 1 |
Apna Dal (Soneylal) – ADAL | 1 | 0 | 1 |
AJSU Party – AJSUP | 1 | 0 | 1 |
All India Majlis-E-Ittehadul Muslimeen – AIMIM | 1 | 0 | 1 |
Independent – IND | 7 | 0 | 7 |

ಪಕ್ಷಗಳ ಮತ ಹಂಚಿಕೆ ಪ್ರಮಾಣ
ಲೋಕಸಭೆ ಚುನಾವಣೆ ಫಲಿತಾಂಶಗಳಲ್ಲಿ ಒಟ್ಟಾರೆ ಮತ ಹಂಚಿಕೆಯನ್ನು ನೋಡಿದಾಗ ಬಿಜೆಪಿ ಅತಿ ಹೆಚ್ಚು ಎಂದರೆ 36.56% ಮತವನ್ನು ಪಡೆದುಕೊಂಡಿದೆ. ಎರಡನೇ ಸ್ಥಾನದಲ್ಲಿ ಕಾಂಗ್ರೆಸ್ ಇದ್ದು 21.19% ಮತವನ್ನು ಪಡೆದುಕೊಂಡಿದೆ. ಸಮಾಜವಾದಿ ಪಕ್ಷ 4.58% ಮತವನ್ನು ಮತ್ತು ತೃಣಮೂಲ ಕಾಂಗ್ರೆಸ್ 4.37% ಮತವನ್ನು ಪಡೆದುಕೊಂಡಿದೆ
