
ಬೆಂಗಳೂರು: ಈ ಬಾರಿ ಚುನಾವಣೆಯಲ್ಲಿ ನಾವು ನಿರೀಕ್ಷಿಸಿದ ರೀತಿಯಲ್ಲಿ ಸ್ಥಾನ ಗೆಲ್ಲಲು ಆಗಿಲ್ಲ. ಆದರೇ, ದೇಶದಲ್ಲಿ ಕಾಂಗ್ರೆಸ್ ವೋಟಿಂಗ್ ಪ್ರಮಾಣ ಶೇ3% ಹೆಚ್ಚಾಗಿದೆ. ಯಾರಿಗೂ ಮೆಜಾರಿಟಿ ಸೀಟುಗಳು ಬಂದಿಲ್ಲ, ಮೋದಿ ವರ್ಷಸ್ಸು ಕಡಿಮೆಯಾಗಿದೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಕ ರಾಜ್ಯ, ಮತ್ತು ಎಲ್ಲಾ ಮತದಾರರಿಗೂ ಧನ್ಯವಾದಗಳನ್ನು ತಿಳಿಸಿದರು.

ಲೋಕಸಭೆ ಚುನಾವಣೆ ಫಲಿತಾಂಶ ಇಂದು ಹೊರಹೊಮ್ಮಿದ್ದು ಇದರ ಬೆನ್ನಲ್ಲೇ ನಗರದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಅವರು ಮಾತನಾಡಿದರು. 2019 ರ ಚುನಾವಣೆಗೆ ಹೋಲಿಸಿದ್ರೆ ಬಿಜೆಪಿ-ಜೆಡಿಎಸ್ ಮತಗಳು ಕಡಿಮೆಯಾಗಿದೆ, ಕಾಂಗ್ರೆಸ್ ಮತಗಳು ಹೆಚ್ಚಾಗಿದೆ, ಬಿಜೆಪಿ 5% ರಷ್ಟು ಮತಗಳು ಕಡಿಮೆಯಾಗಿದೆ, ಚುನಾವಣೆಯಲ್ಲಿ ನಾವು ಬಹಳ ಹಿಗ್ಗಿದ್ದೆವು

ದೇಶದಲ್ಲಿ ಕಾಂಗ್ರೆಸ್ ವೋಟಿಂಗ್ ಪ್ರಮಾಣ 3% ಜಾಸ್ತಿಯಾಗಿದೆ. ಸದ್ಯ ಬಿಜೆಪಿ ಅಧಿಕಾರದಲ್ಲಿದ್ದು ಎಲ್ಲರೂ ಮೋದಿ ಮುಖ ನೋಡಿ ವೋಟ್ ಕೊಡಿ ಅಂತಿದ್ರು, 2019 ರಲ್ಲಿ 303 ಸ್ಥಾನ ಗೆದ್ದಿದ್ರು 2014 ರಲ್ಲಿ 282 ಗೆದ್ದಿದ್ರು
ಈ ಸಲ 246 ಸೀಟ್ ಪಡೆದಿದ್ದಾರೆ. ಅತಿದೊಡ್ಡ ಪಕ್ಷ ಆಗಿದೆ ಅಷ್ಟೆ ಯಾವುದೇ ಪಾರ್ಟಿಗೂ ಮೆಜಾರಿಟಿ ಸಂಖ್ಯೆ
272 ಸೀಟು ಬಂದಿಲ್ಲ ಮೋದಿ ಜನಪ್ರಿಯತೆ ಕುಗ್ಗಿದೆ. ಕಾಂಗ್ರೆಸ್ಅಧಿಕಾರಕ್ಕೆ ಬರಲಿದೆ ಎಂದರು.ಇದು ಮೇಲ್ನೋಟಕ್ಕೆ ಗೋಚರಿಸುತ್ತಿದೆ ಎಂದರು.

ಇದೇ ವೇಳೆ ರಾಜ್ಯದ, ದೇಶದ ಎಲ್ಲಾ ಮತದಾರರಿಗೆ ಧನ್ಯವಾದಗಳನ್ನು ತಿಳಿಸಿದ ಅವರು, ರಾಜ್ಯದಲ್ಲಿ ಚುನಾವಣೆ ಸಮಯದಲ್ಲಿ ಮತ್ತು ಮತ ಎಣಿಕೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಆಗಿಲ್ಲ ಅದಕ್ಕೋಸ್ಕರ ಸಂಬಂಧಪಟ್ಟ ಅಧಿಕಾರಿಗಳಿಗೆ ಧನ್ಯವಾದಗಳು ಹೇಳುತ್ತೇನೆ. ಜೊತೆಗೆ ಕರ್ನಾಟದಿಂದ ಗೆದ್ದಿರೋ ಜೆಡಿಎಸ್ ಕಾಂಗ್ರೆಸ್ ,ಬಿಜೆಪಿ ಸಂಸತ್ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೆನೆ ಎಂದು ಅವರು ಹೇಳಿದರು.

ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ-17, ಕಾಂಗ್ರೆಸ್ – 09 ಹಾಗೂ ಜೆಡಿಎಸ್ -02 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಅದರಲ್ಲೂ ಹೈವೋಲ್ಟೇಜ್ ಕ್ಷೇತ್ರವಾಗಿದ್ದ ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ನ ಡಿಕೆ ಸುರೇಶ್ ಹೀನಾಯ ಸೋಲುಂಡಿದ್ದಾರೆ