
ಶಿವಮೊಗ್ಗ: ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದ ಹೈವೋಲ್ಟೇಜ್ ಕ್ಷೇತ್ರವಾದ ಶಿವಮೊಗ್ಗದಲ್ಲಿ (Shivamogga) ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ ರಾಘವೇಂದ್ರ (BY Raghavendra) ಗೆದ್ದು ಬೀಗಿದ್ದಾರೆ.
7,78,721 ಮತಗಳನ್ನು ಪಡೆದುಕೊಂಡಿರುವ ರಾಘವೇಂದ್ರ ಅವರು 2,43,715 ಮತಗಳ ಅಂತರದಿಂದ 4ನೇ ಬಾರಿಗೆ ಗೆಲುವು ಸಾಧಿಸಿ ಗಮನ ಸೆಳೆದಿದ್ದಾರೆ

ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ (Geetha Shivarajkumar) 5,35,006 ಮತಗಳನ್ನ ಪಡೆದುಕೊಂಡು 2,43,715 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲಿ ಇದು ಅವರ 2ನೇ ಸೋಲು ಸಹ ಆಗಿದೆ. ಇನ್ನೂ ಪಕ್ಷೇತರ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ (KS Eshwarappa) ಕೇವಲ 30,050 ಮತಗಳನ್ನ ಪಡೆದು ಠೇವಣಿ ಕಳೆದುಕೊಂಡಿದ್ದಾರೆ.
