
ತ್ರಿಶ್ಶೂರ್‌ಗೆ ಕೇಂದ್ರ ಸಚಿವ ಸ್ಥಾನ, ಮೋದಿ ಗ್ಯಾರಂಟಿ ಎಂಬ ಘೋಷಣೆಯೊಂದಿಗೆ 65 ವರ್ಷದ ನಟ, ಸುರೇಶ್ ಗೋಪಿ ತ್ರಿಶ್ಶೂರ್ನಲ್ಲಿ ಮತಯಾಚನೆ ಮಾಡಿದ್ದರು.2016ರಲ್ಲಿ ಬಿಜೆಪಿಯು ಸುರೇಶ್ ಗೋಪಿ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿತ್ತು. ಇಲ್ಲಿವರೆಗೆ ಬಿಜೆಪಿಗೆ ಕೇರಳದಲ್ಲಿ ಒಂದೇ ಒಂದು ಸೀಟು ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಸುರೇಶ್ ಗೋಪಿ ಇಲ್ಲಿ ಗೆಲ್ಲುವ ಮೂಲಕ ಖಾತೆ ತೆರೆಯುವ ಸಾಧ್ಯತೆ ಇದೆ

ತಿರುವನಂತಪುರಂ ಜೂನ್ 04: ಕೇರಳದಲ್ಲಿ (Kerala) ಈ ಬಾರಿ ಖಾತೆ ತೆರೆಯುತ್ತೇವೆ ಎಂದು ಬಿಜೆಪಿ (BJP) ಭಾರೀ ಆತ್ಮವಿಶ್ವಾಸದಿಂದ ಹೇಳಿಕೊಂಡಿತ್ತು. ಬಹುತೇಕ ಎಕ್ಸಿಟ್ ಪೋಲ್ಗಳು ಕೇರಳದಲ್ಲಿ ಬಿಜೆಪಿಗೆ 1-2 ಸ್ಥಾನ ಸಿಗಬಹುದು ಎಂದು ಭವಿಷ್ಯ ನುಡಿದಿದ್ದವು. ಇದೀಗ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದಂತೆ ಕೇರಳದಲ್ಲಿ ಕಮಲ ಅರಳುವ ಸೂಚನೆಗಳು ಬಂದಿವೆ. ತ್ರಿಶ್ಶೂರ್ ಮತ್ತು ತಿರುವನಂತಪುರಂ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ತ್ರಿಶ್ಶೂರಿನಲ್ಲಿ ಪ್ರಚಾರ ನಡೆಸುವಾಗ ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ, ಈ ತ್ರಿಶ್ಶೂರ್ ಞಾನ್ ಇಂಙ್ ಎಡುಕ್ಕುವಾ, ಈ ತ್ರಿಶ್ಶೂರ್ ಎನಿಕ್ ತರಣಂ ( ನಾನು ಈ ತ್ರಿಶ್ಶೂರ್ನ್ನು ತೆಗೆದುಕೊಳ್ಳುತ್ತೇನೆ, ನೀವು ನನಗೆ ಈ ತ್ರಿಶ್ಶೂರ್ ಕೊಡಬೇಕು) ಎಂದು ಹೇಳಿದ್ದರು. ಸಿನಿಮಾ ನಟರೂ ಆಗಿರುವ ಸುರೇಶ್ ಗೋಪಿ, ಸಿನಿಮಾ ಸ್ಟೈಲ್ ನಲ್ಲಿ ಈ ಡೈಲಾಗ್ ಹೇಳಿದ್ದು ಭಾರೀ ಸಂಚಲನ ಸೃಷ್ಟಿಸಿತ್ತು. ಆದರೆ ಈ ಬಾರಿ ಸುರೇಶ್ ಗೋಪಿ ಪರ ಬಿಜೆಪಿ ಭರ್ಜರಿ ಪ್ರಚಾರ ಮಾಡಿದ್ದರ ಫಲ ಇಲ್ಲಿ ಕಾಣಿಸತೊಡಗಿದೆ.

ಈ ಸುದ್ದಿ ಪ್ರಕಟವಾಗುವ ಹೊತ್ತಿಗೆ ಸುರೇಶ್ ಗೋಪಿ 69183 ಮತಗಳ ಮುನ್ನಡೆ ಸಾಧಿಸಿದ್ದಾರೆ. ಅದೇ ವೇಳೆ ಎರಡನೇ ಸ್ಥಾನದಲ್ಲಿ ಎಲ್ಡಿಎಫ್ನ ಸುನಿಲ್ ಕುಮಾರ್, ಮೂರನೇ ಸ್ಥಾನದಲ್ಲಿ ಯುಡಿಎಫ್ ನ ಮುರಳೀಧರನ್ ಇದ್ದಾರೆ.

ತ್ರಿಶ್ಶೂರ್‌ಗೆ ಕೇಂದ್ರ ಸಚಿವ ಸ್ಥಾನ, ಮೋದಿ ಗ್ಯಾರಂಟಿ ಎಂಬ ಘೋಷಣೆಯೊಂದಿಗೆ 65 ವರ್ಷದ ನಟ ತ್ರಿಶೂರ್‌ನಲ್ಲಿ ಮತಯಾಚನೆ ಮಾಡಿದ್ದರು.2016ರಲ್ಲಿ ಬಿಜೆಪಿಯು ಸುರೇಶ್ ಗೋಪಿ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿತ್ತು. ಆರ್‌ಎಸ್‌ಎಸ್ ಸದಸ್ಯರಾಗಿ ನಾಮನಿರ್ದೇಶನಗೊಂಡ ತಿಂಗಳ ನಂತರ 2016 ರ ಅಕ್ಟೋಬರ್‌ನಲ್ಲಿ ಸುರೇಶ್ ಗೋಪಿ ಬಿಜೆಪಿ ಸೇರಿದ್ದರು. ಅಂದಿನಿಂದ ಗೋಪಿ ಕೇರಳದ ಬಿಜೆಪಿಯ ಸ್ಟಾರ್ ಪ್ರಚಾರಕರಲ್ಲಿ ಒಬ್ಬರಾಗಿದ್ದರು. 2019ರಲ್ಲಿ ತ್ರಿಶ್ಶೂರ್ ನಿಂದ ಸ್ಪರ್ಧಿಸಿದ್ದರೂ ಗೆಲ್ಲಲಿಲ್ಲ
