
ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್‌ನ ಫೈನಲ್ ಪಂದ್ಯದಲ್ಲಿ ಬಲಿಷ್ಠ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ಮಧ್ಯೆ ಪಂದ್ಯ ನಡೆಯಲಿದೆ. ಐಪಿಎಲ್-2024ರ ಆವೃತ್ತಿಯ ಚಾಂಪಿಯನ್ ಯಾರು ಎಂಬುದು ಇಂದು ಗೊತ್ತಾಗಲಿದೆ.
ಚೆನ್ನೈನ ಚೆಪಾಕ್ ಸ್ಟೇಡಿಯಂ ಈ ರೋಚಕ ಪಂದ್ಯಕ್ಕೆ ಸಜ್ಜಾಗಿದೆ. ಹಾಗಾದ್ರೆ, ಎರಡು ತಂಡಗಳು ಪರಸ್ಪರ ಎಷ್ಟು ಬಾರಿ ಮುಖಾಮುಖಿಯಾಗಿವೆ. ಎರಡು ತಂಡಗಳ ಪ್ಲೇಯಿಂಗ್ ಇಲೆವೆನ್ ಹೇಗಿರಬಹುದು? ಪಿಚ್ ಹೇಗಿದೆ ಎಂಬುದನ್ನ ನೋಡೋಣ ಬನ್ನಿ.

ಈ ಬಾರಿಯ ಐಪಿಎಲ್ ಪಾಯಿಂಟ್ಸ್ ಟೇಬಲ್ನಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದ್ದ ತಂಡಗಳು ಇದೀಗ, ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಅದರಂತೆ ಇಂದು ಹೈದರಾಬಾದ್ ಮತ್ತು ಕೊಲ್ಕತ್ತಾ ನಡುವೆ ನಡೆಯುವ ಅಂತಿಮ ಹಣಾಹಣಿ ನಡೆಯಲಿದ್ದು, ವಿಜೇತರು ಯಾರಂಬುದು ತಿಳಿಯಲಿದೆ.

ಮೇ 21ರಂದು ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಎಸ್ಆರ್ಹೆಚ್ ತಂಡವನ್ನು ಮಣಿಸಿ ಕೆಕೆಆರ್ ಫೈನಲ್ ಪ್ರವೇಶಿಸಿತ್ತು. ಇನ್ನು ಮೇ 22 ರಂದು ನಡೆದ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೋಲುಣಿಸಿ, ರಾಜಸ್ಥಾನ್ ರಾಯಲ್ಸ್ 2ನೇ ಕ್ವಾಲಿಫೈಯರ್ಗೆ ಅರ್ಹತೆ ಪಡೆದುಕೊಂಡಿತ್ತು. ಶುಕ್ರವಾರ ನಡೆದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿ ಸನ್ರೈಸರ್ಸ್ ಹೈದರಾಬಾದ್ ತಂಡವು ಫೈನಲ್ಗೆ ಪ್ರವೇಶಿಸಿದೆ.

SRH vs KKR ಬಲಾಬಲ
- ಒಟ್ಟು ಪಂದ್ಯ : 27
- ಕೊಲ್ಕತ್ತಾ ನೈಟ್ ರೈಡರ್ಸ್ : 18 ಗೆಲುವು
- ಸನ್ ರೈಸರ್ಸ್ ಹೈದ್ರಾಬಾದ್ : 18 ಗೆಲುವು
ಈಡನ್ ಗಾರ್ಡನ್ಸ್ (ಕೊಲ್ಕತ್ತಾ)
- ಒಟ್ಟು ಪಂದ್ಯ : 9
- ಕೊಲ್ಕತ್ತಾ ನೈಟ್ ರೈಡರ್ಸ್ : 6 ಗೆಲುವು
- ಸನ್ ರೈಸರ್ಸ್ ಹೈದ್ರಾಬಾದ್ : 3 ಗೆಲುವು
ರಾಜೀವ್ ಗಾಂಧಿ ಸ್ಟೇಡಿಯಂ (ಹೈದ್ರಾಬಾದ್)
- ಒಟ್ಟು ಪಂದ್ಯ : 7
- ಕೊಲ್ಕತ್ತಾ ನೈಟ್ ರೈಡರ್ಸ್ : 4 ಗೆಲುವು
- ಸನ್ ರೈಸರ್ಸ್ ಹೈದ್ರಾಬಾದ್ : 3 ಗೆಲುವು

ಚೆನ್ನೈ ಪಿಚ್ ಯಾರಿಗೆ ವರ..?
- ಬ್ಯಾಟಿಂಗ್, ಬೌಲಿಂಗ್‌ಗೂ ಪಿಚ್ ಸಹಕಾರಿ
- ಹೆಚ್ಚು ಬ್ಯಾಟರ್‌ಗಳಿಗೆ ಅನುಕೂಲವಾಗಲಿದೆ
- 200ಕ್ಕೂ ಹೆಚ್ಚು ರನ್‌ಗಳಿಸುವ ತಂಡಕ್ಕೆ ಜಯ
- ಮೊದಲು ಬ್ಯಾಟ್ ಮಾಡಿದ ತಂಡಕ್ಕೆ ಹೆಚ್ಚು ಗೆಲುವು

ಸನ್ ರೈಸರ್ಸ್ ಹೈದ್ರಾಬಾದ್
ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಿತೀಶ್ ರೆಡ್ಡಿ, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್ (ವಿ.ಕೀ.), ಅಬ್ದುಲ್ ಸಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನದ್ಕತ್, ಟಿ. ನಟರಾಜನ್
ಕೊಲ್ಕತ್ತಾ ನೈಟ್ ರೈಡರ್ಸ್
ರಹಮಾನುಲ್ಲಾ ಗುರ್ಬಾಜ್ (ವಿ.ಕೀ.), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ