
ಇರಾನ್ ಅಧ್ಯಕ್ಷ ಹಾಗು ವಿದೇಶಾಂಗ ಸಚಿವ ಸಂಚರಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾಗಿರುವುದಾಗಿ ವರದಿಯಾಗಿದೆ. ರಕ್ಷಣಾ ತಂಡದ ಕಾರ್ಯಾಚರಣೆ ಮುಂದುವರಿದಿರುವ ಕುರಿತು ಮಾಹಿತಿಗಳು ಹೊರಬಿದ್ದಿದೆ
ಅಜರ್ಬೈಜಾನ್(ಮೇ.19) ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹಾಗೂ ಇರಾನ್ ವಿದೇಶಾಂಗ ಸಚಿವ ಸಂಚರಿಸುತ್ತಿದ್ದ ಹೆಲಿಕಾಪ್ಟರ್ ಪೂರ್ವ ಅಜರ್ಬೈಜಾನ್ ಜೋಲ್ಪಾ ಪ್ರಾಂತ್ಯದಲ್ಲಿ ಅಫಘಾತಕ್ಕೀಡಾಗಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಲ್ಯಾಂಡಿಂಗ್ ವೇಳೆ ಹೆಲಿಕಾಪ್ಟರ್ ನಿಯಂತ್ರಣ ಕಳೆದುಕೊಂಡು ಅಪಘಾತವಾಗಿದೆ ಎಂದು ವರದಿಯಾಗಿದೆ. ಇರಾನ್ ಸೇನೆ, ಅಧ್ಯಕ್ಷರ ಭದ್ರತಾ ಪಡೆ ಜೊತೆ ರಕ್ಷಣಾ ತಂಡ ಕಾರ್ಯಾಚರಣೆ ಮುಂದುವರಿಸಿದೆ ಅನ್ನೋ ಮಾಹಿತಿಗಳು ಲಭ್ಯವಾಗಿದೆ.

ಇಬ್ರಾಹಿಂ ರೈಸಿ ಹಾಗೂ ವಿದೇಶಾಂಗ ಸಚಿವ ಹೂಸೈನ್್ ಅಮಿರಾಬ್ದೊಲ್ಹೈನ್ ಇಬ್ಬರು ಪೂರ್ವ ಅಜರ್ಬೈಜಾನ್ನಲ್ಲಿ ಕಾರ್ಯಕ್ರಮಕ್ಕಾಗಿ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಪ್ರತಿಕೂಲ ಹವಾಮಾನ, ಲ್ಯಾಂಡಿಂಗ್ ವೇಳೆ ಎದುರಾದ ಮುಸುಕಿನ ವಾತಾವರಣದಿಂದ ಅಪಘಾತವಾಗಿ ಎಂದು ವರದಿಯಾಗಿದೆ. ಹೆಲಿಕಾಪ್ಟರ್ನಲ್ಲಿ ಪ್ರಯಾಣ ಮಾಡುತ್ತಿದ್ದ ಅಧ್ಯಕ್ಷ ಇಬ್ರಾಹಿಂ ಹಾಗೂ ಹೊಸೈನ್ ಕುರಿತು ಮಾಹಿತಿಗಳು ಲಭ್ಯವಾಗಿಲ್ಲ.

ಮಂಜು ಕವಿದ ವಾತಾವರಣದ ಕಾರಣ ಪ್ರಯಾಣ ಅಪಾಯಕ್ಕೆ ಅಹ್ವಾನ ನೀಡಿತ್ತು. ಹೀಗಾಗಿ ಪೈಲೆಟ್ ತುರ್ತು ಲ್ಯಾಂಡಿಂಗ್ ಮಾಡಲು ಮುಂದಾಗಿದ್ದಾರೆ. ಆದರೆ ಲ್ಯಾಂಡಿಂಗ್ ವೇಳೆಯೇ ಹೆಲಿಕಾಪ್ಟರ್ ಅಪಘಾತವಾಗಿದೆ. ಇರಾನ್ ಸುದ್ದಿ ಮಾಧ್ಯಮಗಳು ವರದಿ ಮಾಡಿದೆ. IRNA(ಇರಾನ್ ಅಧಿಕೃತ ನ್ಯೂಸ್ ಎಜೆನ್ಸಿ) ವರದಿ ಪ್ರಕಾರ, ರಕ್ಷಣಾ ತಂಡ ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ ಎಂದು ವರದಿ ಮಾಡಿದೆ. ಸ್ಥಳದಲ್ಲಿ ದಟ್ಟ ಮಂಜು ಕವಿದ ವಾತಾವರಣ ಕಾರಣ ರಕ್ಷಣಾ ಕಾರ್ಯಾಚರಣೆಗೂ ಅಡ್ಡಿಯಾಗಿದೆ .

ಇತ್ತೀಚೆಗಷ್ಟೇ ಭಾರತ, ಇರಾನ್ ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿತ್ತು. ಇದು ವಿಶ್ವಾದ್ಯಂತ ಸಂಚಲನ ಸೃಷ್ಟಿಸಿತ್ತು. ಭಾರತಕ್ಕೆ ವ್ಯೂಹಾತ್ಮಕವಾಗಿ ಅತ್ಯಂತ ಪ್ರಮುಖವಾಗಿರುವ ಚಾಬಹಾರ್ ಬಂದರನ್ನು 10 ವರ್ಷಗಳ ಕಾಲ ನಿರ್ವಹಣೆ ಮಾಡಲು ಭಾರತ ಇರಾನ್ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಈ ಬಂದರಿನಿಂದ ಪಾಕಿಸ್ತಾನ ಬಳಸಿಕೊಳ್ಳದೆ ಕೇಂದ್ರ ಏಷ್ಯಾ ದೇಶಗಳಿಗೆ ಭಾರತ ಸರಕು ಸಾಗಿಸಲು ನೆರವಾಗಲಿದೆ.

ಭಾರತ ಹಾಗೂ ಇರಾನ್ ನಡುವಿನ ಈ ಒಪ್ಪಂದ ಅಮೆರಿಕ ನಿದ್ದೆಗೆಡಿಸಿದೆ. ಈ ಕುರಿತು ಬಹಿರಂಗವಾಗಿ ಅಮೇರಿಕ ಅಸಮಾಧಾನ ತೋಡಿಕೊಂಡಿತ್ತು. ಇಷ್ಟೇ ಅಲ್ಲ ಭಾರತಕ್ಕೆ ಎಚ್ಚರಿಕೆ ನೀಡಿತ್ತು. ಆದರೆ ಭಾರತ ಖಡಕ್ ತಿರುಗೇಟು ನೀಡಿ ಅಮೆರಿಕ ಬಾಯಿ ಮುಚ್ಚಿಸಿತ್ತು. ಸಂಕುಚತ ಮನೋಭಾವದಿಂದ ಒಪ್ಪಂದ ನೋಡಬೇಡಿ, ಎಲ್ಲಾ ಕೇಂದ್ರ ಏಷ್ಯಾ ದೇಶಗಳಿಗೆ ಈ ಒಪ್ಪಂದ ನೆರವಾಗಲಿದೆ ಎಂದಿತ್ತು.
