
ರಾಯಲ್ ಚಾಲೆಂಜರ್ಸ್ ಬೆಂಗಳೂರು ವರ್ಸಸ್ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಇಂದು ಪಂದ್ಯ ನಡೆಯಲಿದೆ. ಈ 2 ತಂಡಗಳ ನಡುವೆ ನಡೆಯೋ ಪಂದ್ಯ ಪ್ರತಿಷ್ಠೆಯ ಕಣವಾಗಿದ್ದು ವಿಶ್ವ ಕ್ರಿಕೆಟ್ ಲೋಕ ಕಣ್ಣು ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ. ಈ ರಣರೋಚಕ ಮ್ಯಾಚ್ಗೆ ಕೌಂಟ್ಡೌನ್ ಶುರುವಾಗಿದ್ದು ಪಂದ್ಯದ ವೇಳೆ ಎಂ.ಎಸ್ ಧೋನಿ, ಕಿಂಗ್ ಕೊಹ್ಲಿ ಬ್ಯಾಟಿಂಗ್ನಲ್ಲಿ ಆರ್ಭಟಿಸಿದರೆ ದಾಖಲೆಗಳನ್ನು ಬರೆಯಲಿದ್ದಾರೆ ಎನ್ನಲಾಗ್ತಿದೆ.

ಆರ್ಸಿಬಿ ಭಾರೀ ಅಂತರದಿಂದ ಗೆದ್ದು ಪ್ಲೇ ಆಫ್ಗೆ ಎಂಟ್ರಿ ಕೊಡೋ ಕನಸು ಕಾಣುತ್ತಿದೆ. ಇದರ ಮಧ್ಯೆ 2 ಟೀಮ್ಗಳ ಸ್ಟಾರ್ ಪ್ಲೇಯರ್ಸ್ ಆದ ವಿರಾಟ್ ಕೊಹ್ಲಿ ಹಾಗೂ ಎಂ.ಎಸ್ ಧೋನಿ ತಮ್ಮ ಬ್ಯಾಟಿಂಗ್ನಿಂದ ದಾಖಲೆಗಳನ್ನು ಬರೆಯಲಿದ್ದಾರೆ. ಚೆನ್ನೈ ವಿರುದ್ಧದ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ಉತ್ತಮವಾಗಿದ್ದು 124.9 ಸ್ಟ್ರೈಕ್ರೇಟ್ನಲ್ಲಿ 37.2 ಆವರೇಜ್ನೊಂದಿಗೆ 1,006 ರನ್ಗಳನ್ನು ಗಳಿಸಿದ್ದಾರೆ. ಯೆಲ್ಲೋ ಆರ್ಮಿ ವಿರುದ್ಧ 73 ರನ್ಗಳ ಗಳಿಸಿರುವುದು ಕೊಹ್ಲಿಯ ವೈಯಕ್ತಿ ಹೆಚ್ಚಿನ ರನ್ ಆಗಿದೆ. 38 ಭರ್ಜರಿ ಸಿಕ್ಸರ್ ಸಿಡಿಸಿದ್ದಾರೆ. ಅಲ್ಲದೇ ಚೆನ್ನೈ ವಿರುದ್ಧ 9 ಹಾಫ್ಸೆಂಚುರಿಗಳನ್ನು ಸಿಡಿಸಿರುವ ವಿರಾಟ್ ಕೊಹ್ಲಿ ಇವತ್ತಿನ ಪಂದ್ಯದಲ್ಲಿ 50 ರನ್ ಬಾರಿಸಿದರೆ 10 ಅರ್ಧಶತಕ ಗಳಿಸಿದಂತೆ ಆಗುತ್ತದೆ. ಇದು ಐಪಿಎಲ್ನಲ್ಲಿ ಒಂದು ತಂಡದ ವಿರುದ್ಧ ಕೊಹ್ಲಿ ವಿಶೇಷ ದಾಖಲೆ ಎನಿಸುತ್ತದೆ


ಇನ್ನು ಆರ್ಸಿಬಿ ವಿರುದ್ಧ ಎಂಎಸ್ ಧೋನಿಯ ಬ್ಯಾಟಿಂಗ್ ಬಲವು ಹೆಚ್ಚಾಗಿದ್ದು ಕೊಹ್ಲಿಗಿಂತ ಹೆಚ್ಚು ಸಿಕ್ಸರ್ಗಳನ್ನು ಸಿಡಿಸಿದ್ದಾರೆ. ಆರ್ಸಿಬಿ ವಿರುದ್ಧ 84 ರನ್ಗಳನ್ನ ಸಿಡಿಸಿರುವುದು ಧೋನಿ ವೈಯಕ್ತಿಕ ಅತ್ಯಧಿಕ ರನ್ ಆಗಿದೆ. ಬೆಂಗಳೂರು ತಂಡದ ವಿರುದ್ಧ ಧೋನಿ ಇಲ್ಲಿವರೆಗೆ 140.7 ಸ್ಟ್ರೈಕ್ರೇಟ್ನಲ್ಲಿ 39.9 ಆವರೇಜ್ನಲ್ಲಿ 839 ರನ್ಗಳನ್ನ ಗಳಿಸಿದ್ದಾರೆ. ಆರ್ಸಿಬಿ ವಿರುದ್ಧ 46 ಸಿಕ್ಸರ್ಗಳನ್ನ ಸಿಡಿಸಿರುವ ಧೋನಿ ಒಟ್ಟು 4 ಹಾಫ್ಸೆಂಚುರಿ ಬಾರಿಸಿದ್ದಾರೆ. ಇವತ್ತಿನ ಪಂದ್ಯದಲ್ಲಿ 4 ಸಿಕ್ಸರ್ ಸಿಡಿಸಿದರೆ ಧೋನಿ ಒಟ್ಟು ಆರ್ಸಿಬಿ ವಿರುದ್ಧ 50 ಸಿಕ್ಸರ್ ಬಾರಿಸಿದಂತೆ ಆಗುತ್ತದೆ
