
ಬೆಂಗಳೂರು: ಉತ್ತರ ಕರ್ನಾಟಕದ (North Karnataka) 14 ಲೋಕಸಭಾ ಕ್ಷೇತ್ರಗಳಿಗೆ (Lok Sabha Election) ಮತದಾರರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಂಜೆ 5 ಗಂಟೆಯ ವೇಳೆಗೆ 66.05% ಮತದಾನ ನಡೆದಿದೆ.
ಕ್ಷೇತ್ರಗಳ ಪೈಕಿ ಚಿಕ್ಕೋಡಿಯಲ್ಲಿ (Chikkodi) ಅತಿ ಹೆಚ್ಚು 72.75% ಮತದಾನ ನಡೆದರೆ ಕಲಬುರಗಿಯಲ್ಲಿ (Kalaburagi) 57.20% ಮತದಾನ ನಡೆದಿದೆ.

ಬೆಳಗ್ಗೆ 11 ಗಂಟೆಯವರೆಗೆ ಉತ್ತರ ಕನ್ನಡ (Uttara Kannada) ಮತ್ತು ಶಿವಮೊಗ್ಗದಲ್ಲಿ (Shivamogga) ಭರ್ಜರಿ ಮತದಾನ ನಡೆದಿತ್ತು. ಮಧ್ಯಾಹ್ನ 1 ಗಂಟೆಯ ನಂತರ ಚಿಕ್ಕೋಡಿಯ ಗರಿಷ್ಠ ಪ್ರಮಾಣದಲ್ಲಿ ಮತದಾನ ನಡೆದಿತ್ತು
ಯಾವ ಸಮಯದಲ್ಲಿ ಕರ್ನಾಟಕದಲ್ಲಿ ಎಷ್ಟು ಪ್ರಮಾಣದಲ್ಲಿ ಮತದಾನ?
ಬೆಳಗ್ಗೆ 9 ಗಂಟೆ – 9.45%
ಬೆಳಗ್ಗೆ 11 ಗಂಟೆ – 24.48%
ಮಧ್ಯಾಹ್ನ 1 ಗಂಟೆ – 41.59%
ಮಧ್ಯಾಹ್ನ 3 ಗಂಟೆ – 54.20%
ಸಂಜೆ 5 ಗಂಟೆ – 66.05%

