
ಆರೋಗ್ಯ ಇಲಾಖೆಯು ಕೋವಿಡ್ ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿ ನರೇಂದ್ರ ಮೋದಿಯವರ ಫೋಟೊವನ್ನು ಕೈಬಿಟ್ಟಿದೆ. ಈ ಹಿಂದೆ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿಯವರ ಫೋಟೊವನ್ನು ಹಾಕಲಾಗಿತ್ತು. ಭಾರತವು ಕೊರೊನಾ ಸೋಂಕನ್ನು ಹಿಮ್ಮೆಟ್ಟಿಸುತ್ತದೆ ಎಂದು ಬರೆಯಲಾಗಿತ್ತು. ಆದರೆ ಈಗ ಪ್ರಧಾನಿ ಮೋದಿ ಹೆಸರನ್ನು ಕೈಬಿಡಲಾಗಿದೆ ಎಂದು ದಿ ಹಿಂದೂ ವರದಿ ಮಾಡಿದೆ.

ಕೋವಿಡ್ ಲಸಿಕೆ ಪ್ರಮಾಣ ಪತ್ರ(Covid Vaccine Certificate)ದಿಂದ ಪ್ರಧಾನಿ ನರೇಂದ್ರ ಮೋದಿ i(Narendra Modi)ಯವರ ಫೋಟೊವನ್ನು ತೆಗೆದುಹಾಕಲಾಗಿದ್ದು, ಹಲವು ಅನುಮಾನಗಳು ಮೂಡಿವೆ. ಈ ಹಿಂದೆ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿಯವರ ಫೋಟೊವನ್ನು ಹಾಕಲಾಗಿತ್ತು. ಭಾರತವು ಕೊರೊನಾ ಸೋಂಕನ್ನು ಹಿಮ್ಮೆಟ್ಟಿಸುತ್ತದೆ ಎಂದು ಬರೆಯಲಾಗಿತ್ತು. ಆದರೆ ಈಗ ಪ್ರಧಾನಿ ಮೋದಿ ಹೆಸರನ್ನು ಕೈಬಿಡಲಾಗಿದೆ ಎಂದು ದಿ ಹಿಂದೂ ವರದಿ ಮಾಡಿದೆ.

ಇದೀಗ ಕೊರೊನಾ ಲಸಿಕೆ ತಯಾರಕ ಬ್ರಿಟಿಷ್ ಕಂಪನಿ ಅಸ್ಟ್ರಾಜೆನೆಕಾ ವಿರುದ್ಧ ಕೆಲವು ಅನುಮಾಣಗಳು ಹುಟ್ಟಿಕೊಂಡಿವೆ, ಈ ಲಸಿಕೆಯು ರಕ್ತಹೆಪ್ಪುಗಟ್ಟುವಿಕೆಯಂತಹ ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಹೇಳಲಾಗಿದ್ದು, ಕೆಲವೊಂದು ವಿಚಾರಗಳನ್ನು ಸಂಸ್ಥೆ ಕೂಡ ಒಪ್ಪಿಕೊಂಡಿದೆ.

ಅಸ್ಟ್ರಾಜೆನೆಕಾ ಸಂಸ್ಥೆ ವಿರುದ್ಧ ಹಲವು ಮಂದಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿನ ಕೆಲವು ಬಳಕೆದಾರರು ಗಮನಾರ್ಹ ಬದಲಾವಣೆಯನ್ನು ಗಮನಿಸಿದ್ದಾರೆ: ಭಾರತದಲ್ಲಿ ನೀಡಲಾದ ಕೋವಿಡ್ -19 ಲಸಿಕೆ ಪ್ರಮಾಣಪತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಇಲ್ಲದಿರುವುದು ತಿಳಿದುಬಂದಿದೆ. ಜತೆಗೆ ಫೋಟೊ ಬದಲಿಗೆ ಕ್ಯೂ ಆರ್ ಕೋಡ್ ಮಾತ್ರವೇ ಇದೆ.

ಆರೋಗ್ಯ ಇಲಾಖೆ ಹೇಳುವುದೇನು? ಆದಾಗ್ಯೂ , ಲೋಕಸಭೆ ಚುನಾವಣೆಗೆ ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಯಲ್ಲಿರುವ ಕಾರಣ ಲಸಿಕೆ ಪ್ರಮಾಣಪತ್ರದಿಂದ ಚಿತ್ರವನ್ನು ತೆಗೆದುಹಾಕಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧಿಕಾರಿಗಳು ದಿ ಪ್ರಿಂಟ್ಗೆ ತಿಳಿಸಿದ್ದಾರೆ