
ಸೂಲಿಬೆಲೆ ವೇದಿಕೆಯಿಂದ ಹೇಳಿದ ಹಾಗೆ ಕಾರ್ಯಕ್ರಮಕ್ಕಾಗಿ ಸ್ಥಳೀಯ ಬಿಜೆಪಿ ನಾಯಕರು ಸಾಯಂಕಾಲ 5 ರಿಂದ 8 ಗಂಟೆಯವರೆಗೆ ಸಮಯ ತೆಗೆದುಕೊಂಡಿದ್ದರು. ಆದರೆ ಸೂಲಿಬೆಲೆ ಮಾತಾಡುವಾಗ ನಿಗದಿತ ಸಮಯ ಮೀರಿತ್ತು. ಹಾಗಾಗಿ ಭಾಷಣ ನಿಲ್ಲಿಸುವಂತೆ ಚುನಾವಣಾಧಿಕಾರಿಗಳು ಆಯೋಜರಿಗೆ ಹೇಳುತ್ತಾರೆ. ಅವರಿಂದ ಸೂಕ್ತ ಪ್ರತಿಕ್ರಿಯೆ ಬಾರದಾದಾಗ ಅಧಿಕಾರಿಯು ವೇದಿಕೆ ಹತ್ತಿ ಸೂಲಿಬೆಲೆ ಅವರಲ್ಲಿಗೆ ಹೋಗಿ ಸಮಯ ಮೀರಿದೆ ಭಾಷಣ ನಿಲ್ಲಿಸುವಂತೆ ಹೇಳುತ್ತಾರೆ.

ಚಾಮರಾಜನಗರ: ಮುಸ್ಲಿಂ ವಿರೋಧಿ, ಬಾಡಿಗೆ ಭಾಷಣಕಾರ ಸೂಲಿಬೆಲೆ (Chakravarthy Sulibele) ನಿನ್ನೆ ರಾತ್ರಿ ಚಾಮರಾಜನಗರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರ (campaign) ಮಾಡುತ್ತಿದ್ದಾಗ ವೇದಿಕೆ ಮೇಲೆ ನಾಟಕೀಯ ಘಟನೆಗಳು ನಡೆದವು. ಸೂಲಿಬೆಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (PM Narendra Modi) ಸಾಧನೆಗಳ ಬಗ್ಗೆ ಮಾತಾಡುತ್ತಿದ್ದಾಗ ಚುನಾವಣಾಧಿಕಾರಿಗಳು ನಿಯಮ ಮೀರಿದಕ್ಕಾಗಿ ಕಾನೂನು ವಿರೋಧಿಸಿದ್ದಕ್ಕಾಗಿ ಆತನ ಮಾತಿಗೆ ತಡೆಯೊಡ್ಡಿದರು. ಸೂಲಿಬೆಲೆಯೇ ವೇದಿಕೆಯಿಂದ ಹೇಳಿದ ಹಾಗೆ ಕಾರ್ಯಕ್ರಮಕ್ಕಾಗಿ ಸ್ಥಳೀಯ ಬಿಜೆಪಿ ನಾಯಕರು ಸಾಯಂಕಾಲ 5 ರಿಂದ 8 ಗಂಟೆಯವರೆಗೆ ಸಮಯ ತೆಗೆದುಕೊಂಡಿದ್ದರು. ಆದರೆ ಸೂಲಿಬೆಲೆ ಮಾತಾಡುವಾಗ ನಿಗದಿತ ಸಮಯ ಮೀರಿತ್ತು. ಹಾಗಾಗಿ ಭಾಷಣ ನಿಲ್ಲಿಸುವಂತೆ ಚುನಾವಣಾಧಿಕಾರಿಗಳು ಆಯೋಜರಿಗೆ ಹೇಳುತ್ತಾರೆ. ಅವರಿಂದ ಸೂಕ್ತ ಪ್ರತಿಕ್ರಿಯೆ ಬಾರದಾದಾಗ ಅಧಿಕಾರಿಯು ವೇದಿಕೆ ಹತ್ತಿ ಸೂಲಿಬೆಲೆ ಅವರಲ್ಲಿಗೆ ಹೋಗಿ ಸಮಯ ಮೀರಿದೆ ಭಾಷಣ ನಿಲ್ಲಿಸುವಂತೆ ಹೇಳುತ್ತಾರೆ.

ಇದರಿಂದ ಕುಪಿತಗೊಳ್ಳುವ ಬಿಜೆಪಿ ಕಾರ್ಯಕರ್ತರು ವೇದಿಕೆ ಹತ್ತಿ ಅಧಿಕಾರಿಯೊಂದಿಗೆ ತಳ್ಳಾಟ ನೂಕಾಟ ನಡೆಸುತ್ತಾರೆ. ಅವರ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ಕಾರ್ಯಕರ್ತರಲ್ಲಿ ಮನವಿ ಮಾಡಿದರೂ ಅವರು ತಳ್ಳಾಟ ಮುಂದುವರಿಸಿ ಅಧಿಕಾರಿಯನ್ನು ವೇದಿಕೆಯಿಂದ ಕೆಳಗಿಳಿಸುತ್ತಾರೆ. ಅಲ್ಲಿಗೆ ಸೂಲಿಬೆಲೆ ಸಹ ತಮ್ಮ ಭಾಷಣ ನಿಲ್ಲಿಸಿಬಿಡುತ್ತಾರೆ.

