
ಪತಂಜಲಿ ವಿರುದ್ಧ ಕ್ರಮ ಕೈಗೊಳ್ಳದ್ದಕ್ಕೆ ಕೇಂದ್ರದ ವಿರುದ್ಧವೂ ತರಾಟೆ
ನವದೆಹಲಿ: ಯಾವ ರೀತಿ ಜಾಹೀರಾತು (Advertisements) ಪ್ರಕಟಿಸಿದ್ದೀರಿ ಅದೇ ಗಾತ್ರದಲ್ಲಿ ಪತ್ರಿಕೆಯಲ್ಲಿ ಕ್ಷಮೆಯನ್ನು ಕೇಳಬೇಕೆಂದು ಪತಂಜಲಿ (Patanjali) ಸಂಸ್ಥೆಗೆ ಸುಪ್ರೀಂ ಕೋರ್ಟ್ (Supreme Court) ಆದೇಶಿಸಿದೆ. ಅದೇ ರೀತಿಯಾಗಿ ಪತಂಜಲಿ ವಿರುದ್ಧ ಕ್ರಮ ಕೈಗೊಳ್ಳದ್ದಕ್ಕೆ ಕೇಂದ್ರ ಸರ್ಕಾರವನ್ನು (Union Government) ಸುಪ್ರೀಂ ತರಾಟೆಗೆ ತೆಗೆದುಕೊಂಡಿದೆ.
ಯೋಗ ಗುರು ರಾಮದೇವ್ (Baba Ramdev) ಮತ್ತು ಆಚಾರ್ಯ ಬಾಲಕೃಷ್ಣ (Acharya Balkrishna) ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ಇಂದು ನ್ಯಾ.ಹಿಮಾ ಕೊಹ್ಲಿ ಮತ್ತು ನ್ಯಾ. ಅಮಾನುಲ್ಲಾ ಅವರಿದ್ದ ದ್ವಿಸದಸ್ಯ ಪೀಠದಲ್ಲಿ ನಡೆಯಿತು.

ಬಾಬಾ ರಾಮ್‌ದೇವ್ ಪರ ವಾದ ಮಂಡಿಸಿದ ವಕೀಲ ಮುಕುಲ್ ರೋಹಟಗಿ, ಪತ್ರಿಕೆಗಳಲ್ಲಿ ಕ್ಷಮಾಪಣೆ ಪ್ರಕಟವಾಗಿದೆ ಎಂದು ಕೋರ್ಟ್ ಗಮನಕ್ಕೆ ತಂದರು. ಈ ವೇಳೆ ನಿನ್ನೆ ಯಾಕೆ ಕ್ಷಮಾಪಣೆ ಪ್ರಕಟವಾಗಿದೆ ಎಂದು ಪ್ರಶ್ನಿಸಿದ ಪೀಠ ಜಾಹೀರಾತು ಯಾವ ಗಾತ್ರದಲ್ಲಿ ಪ್ರಕಟವಾಗಿದೆಯೇ ಅದೇ ರೀತಿಯಾಗಿ ಕ್ಷಮೆ ಕೇಳಬೇಕೆಂದು ಆದೇಶಿಸಿತು.
ಇಂಡಿಯನ್ ಮೆಡಿಕಲ್ ಅಸೋಷಿಯನ್ (IMA) ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದುವರಿಸಿದ ಪೀಠ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ನೀಡುವ ಇತರ FMCG ಕಂಪನಿಗಳ ವಿರುದ್ಧ ಕ್ರಮ ಕೈಗೊಂಡಿರುವ ಬಗ್ಗೆ ಕೇಂದ್ರವನ್ನು ಈ ವೇಳೆ ಪ್ರಶ್ನಿಸಿತು.

ಪತಂಜಲಿ ವಿರುದ್ಧ ಕ್ರಮ ಕೈಗೊಳ್ಳುವ ಬದಲು 1945 ರ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ನಿಯಮಗಳ 170ನೇ ನಿಯಮದ ಅಡಿಯಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಆಯುಷ್ ಸಚಿವಾಲಯವು 2023 ರಲ್ಲಿ ಎಲ್ಲಾ ರಾಜ್ಯ ಸರ್ಕಾರಗಳಿಗೆ ಪತ್ರವನ್ನು ಕಳುಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿತು.

ಅಧಿಕಾರಿಗಳು ಆದಾಯವನ್ನು ನೋಡುವಲ್ಲಿ ನಿರತರಾಗಿದ್ದಂತೆ ತೋರುತ್ತಿದೆ ಎಂದು ನ್ಯಾ. ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಒಂದು ಸುದ್ದಿಟಿವಿಯಲ್ಲಿ ಆಂಕರ್ ಪತಂಜಲಿ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಏನಾಯಿತು ಎಂಬುದರ ಕುರಿತು ಓದುತ್ತಿದ್ದಾರೆ. ಇದೆ ಅವಧಿಯಲ್ಲಿ ಜಾಹೀರಾತು ಪತಂಜಲಿ ಕೂಡಾ ಚಾಲನೆಯಲ್ಲಿದೆ ಎಂತಹ ಪರಿಸ್ಥಿತಿ ಎಂದು ನ್ಯಾ. ಅಮಾನುಲ್ಲಾ ಟೀಕಿಸಿದರು.

ಪತಂಜಲಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಸರ್ಕಾರ ಹೇಗೆ ಪತ್ರ ಬರೆಯಿತು ಎಂಬುದನ್ನು ವಿವರಿಸಬೇಕು ಎಂದು ಹೇಳಿದ ಪೀಠ, ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಆಕ್ಟ್ ಮತ್ತು ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯಿದೆಯಂತಹ ಕಾನೂನುಗಳ ಅನುಷ್ಠಾನವನ್ನು ಸೂಕ್ಷ್ಮವಾಗಿ ಗಮನಿಸುವುದಾಗಿ ಕೋರ್ಟ್ ತಿಳಿಸಿತು.

ತಪ್ಪುದಾರಿಗೆಳೆಯುವ ಜಾಹೀರಾತುಗಳಿಂದ ಪ್ರಭಾವಿತರಾಗಿ ಔಷಧಗಳನ್ನು ಸೇವಿಸುವ ಶಿಶುಗಳು ಮತ್ತು ಮಕ್ಕಳು ಮತ್ತು ವೃದ್ಧರ ಆರೋಗ್ಯದ ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ. ನಾವು ನಿರ್ದಿಷ್ಟವಾಗಿ ಒಬ್ಬರ ಮೇಲೆ ಅರೋಪಿಸುತ್ತಿಲ್ಲ, ಗ್ರಾಹಕರು/ಸಾರ್ವಜನಿಕರನ್ನು ಹೇಗೆ ದಾರಿ ತಪ್ಪಿಸಲಾಗುತ್ತಿದೆ ಎಂಬುದರ ಕುರಿತು ಹೆಚ್ಚಿನ ಹಿತಾಸಕ್ತಿಯಾಗಿದೆ ಎಂದು ಎಂದು ನ್ಯಾಯಾಲಯ ಹೇಳಿತು. ಅಲ್ಲದೇ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯವನ್ನು ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಸೇರಿಸಲು ನ್ಯಾಯಾಲಯ ನಿರ್ಧರಿಸಿದೆ.

ಪ್ರಕರಣದ ಅರ್ಜಿ ವಿಚಾರಣೆಯನ್ನು ಏ.30ಕ್ಕೆ ಮುಂದೂಡಿದ ಪೀಠ ಅಂದು ನ್ಯಾಯಾಲಯಕ್ಕೆ ಪತಂಜಲಿ ಸಂಸ್ಥಾಪಕರಾದ ರಾಮ್‌ದೇವ್ ಮತ್ತು ಬಾಲಕೃಷ್ಣ ಹಾಜರಾಗಬೇಕೆಂದು ಸೂಚಿಸಿದೆ