
ಮಂಗಳೂರು :ಶಾಸಕ ವೇದವ್ಯಾಸ ಕಾಮತ್ ಹಾಗೂ ಅವರ ಕಾರ್ಯಕರ್ತರು ನಗರದ ನಗರದ ಉರ್ವ ಚಿಲಿಂಬಿ ಸಾಯಿ ಬಾಬಾ ಮಂದಿರದ ಬಳಿ ಕಾರ್ಯಕರ್ತರ ತಂಡವು ಪ್ರಚಾರ ನಡೆಸುತ್ತಿತ್ತು.ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ಎತ್ತಿದ್ದಾರೆ. ಪ್ರಚಾರದ ವಿಚಾರವಾಗಿ ಆರಂಭವಾದ ವಾಗ್ವಾದವು, ಹೊಯ್ ಕೈ ನಡೆಸುವ ಹಂತಕ್ಕೆ ತಲುಪಿತು.

ಮಂಗಳೂರು ನಗರದ ಚಿಲಿಂಬಿಯ ಸಾಯಿ ಮಂದಿರದ ಭಕ್ತರು ಸೇರಿದ್ದರು. ಈ ವೇಳೆ ಬಿಜೆಪಿಗರು ಇಲ್ಲೇ ಚುನಾವಣೆ ಪ್ರಚಾರಕ್ಕೆ ಮುಂದಾಗಿದ್ದರು. ಮಂದಿರದ ಬಳಿ ಪ್ರಚಾರ ನಡೆಸುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದಾಗ ವಾಗ್ವಾದ, ಮಾತಿನ ಚಕಮಕಿ, ನಡೆದಿದೆ

ಶಾಸಕ ವೇದವ್ಯಾಸ ಕಾಮತ್ ಮತ್ತು ಕಾಂಗ್ರೆಸ್ ನಾಯಕ ಮಿಥುನ್ ರೈ ಮಧ್ಯಪ್ರವೇಶಿಸಿ ಆಯಾ ಪಕ್ಷದ ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು
ಈ ಕಾರ್ಯಕರ್ತರ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ಪೊಲೀಸರು ನಿಯಂತ್ರಣಕ್ಕೆ ತಂದಿದ್ದಾರೆ .
