Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    ಮೋದಿ ಮನೆಯಲ್ಲಿ ಹೀರಾಬೆನ್ ಮಗನಂತೆ ಬೆಳೆದ ಅಬ್ಬಾಸ್ ರಾಮ್ಸಾದಾ ಯಾರು?

    ಮೋದಿ ಮನೆಯಲ್ಲಿ ಹೀರಾಬೆನ್ ಮಗನಂತೆ ಬೆಳೆದ ಅಬ್ಬಾಸ್ ರಾಮ್ಸಾದಾ ಯಾರು?

    ಸುಪ್ರೀಂ ಅಂಗಳಕ್ಕೆ ದಸರಾ ಉದ್ಘಾಟನೆ – ನಾಳೆ ತುರ್ತು ವಿಚಾರಣೆ

    ಕಾಂಗ್ರೆಸ್​ ಮತದಾರರೇ ಟಾರ್ಗೆಟ್, ಕರ್ನಾಟಕದ ಆಳಂದ ಕ್ಷೇತ್ರದಲ್ಲೂ ಮತಗಳ್ಳತನ, 6000 ಮತದಾರರ ಹೆಸರು ಡಿಲೀಟ್: ರಾಹುಲ್ ಆರೋಪ

    ಧರ್ಮಸ್ಥಳ ಕೇಸ್​​ ತನಿಖೆಗೆ ಅನಿರೀಕ್ಷಿತ ಟ್ವಿಸ್ಟ್.. ನಿಜವಾಯ್ತಾ ಸೌಜನ್ಯ ಮಾವ ವಿಠಲ್ ಹೇಳಿದ್ದು..?

    ಬೆಂಗಳೂರು: ಹದಿನೇಳು ವರ್ಷದ ಬಾಲಕಿ ಸೇರಿ 8 ಮಹಿಳೆಯರ ಮೇಲೆ ಅತ್ಯಾಚಾರ; ಯೋಗ ಗುರು ಬಂಧನ

    ಬೆಂಗಳೂರು: ಹದಿನೇಳು ವರ್ಷದ ಬಾಲಕಿ ಸೇರಿ 8 ಮಹಿಳೆಯರ ಮೇಲೆ ಅತ್ಯಾಚಾರ; ಯೋಗ ಗುರು ಬಂಧನ

    ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ ಗೆದ್ರೆ ರಾಜಕೀಯ ಬಿಡುವೆ: ಶಾಸಕ ಕೆವೈ ನಂಜೇಗೌಡ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    ಸೌಜನ್ಯ ಮಾವ ವಿಠಲ್‌ಗೌಡ ತೋರಿಸಿದ ಬಂಗ್ಲೆಗುಡ್ಡೆ ಕಾಡಿನಲ್ಲಿ 5 ಅಸ್ಥಿಪಂಜರ ಮೂಳೆ ಪತ್ತೆ!

    ಸೌಜನ್ಯ ಮಾವ ವಿಠಲ್‌ಗೌಡ ತೋರಿಸಿದ ಬಂಗ್ಲೆಗುಡ್ಡೆ ಕಾಡಿನಲ್ಲಿ 5 ಅಸ್ಥಿಪಂಜರ ಮೂಳೆ ಪತ್ತೆ!

    ಯುವತಿ ದೇಹದ ಮೇಲಿನ ಕಪ್ಪು ಚುಕ್ಕೆ ಗುರುತಿಸಿದ AI.. ಫೋಟೋ ಅಪ್​ಲೋಡ್​ ಮಾಡುವಾಗ ಹುಷಾರ್​!

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಸುದ್ದಿ ರಾಷ್ಟ್ರೀಯ

ಮತ್ತೆ ಪೋಷಕರ ನಿದ್ದೆಗೆಡಿಸಿದ ನೆಸ್ಲೆ ಕಂಪನಿ.. ನಿಮ್ಮ ಮಗುವಿಗೆ Cerelac ನೀಡುವ ಮುನ್ನ ಹುಷಾರ್​..!

editor tv by editor tv
April 18, 2024
in ರಾಷ್ಟ್ರೀಯ
0
ಮತ್ತೆ ಪೋಷಕರ ನಿದ್ದೆಗೆಡಿಸಿದ ನೆಸ್ಲೆ ಕಂಪನಿ.. ನಿಮ್ಮ ಮಗುವಿಗೆ Cerelac ನೀಡುವ ಮುನ್ನ ಹುಷಾರ್​..!
1.9k
VIEWS
Share on FacebookShare on TwitterShare on Whatsapp

ಆಹಾರ ಮತ್ತು ಪಾನೀಯ ಸಂಸ್ಕರಣಾ ಸಂಘಟಿತ ಕಂಪನಿ, ಜನಪ್ರಿಯ ಸಂಸ್ಥೆ ನೆಸ್ಲೆ (Nestle)ಯ ದ್ವಿಮುಖ ಅನಾವರಣಗೊಂಡಿದೆ. ಕಂಪನಿಯು ಲಾಭದ ಆಸೆಗೆ ಬಿದ್ದು ಶಿಶುಗಳ ಆರೋಗ್ಯದ ಜೊತೆ ಚೆಲ್ಲಾಟವಾಡ್ತಿದೆಯಾ ಎಂಬ ಪ್ರಶ್ನೆ ಶುರುವಾಗಿದೆ. ಅದಕ್ಕೆ ಪುಷ್ಠಿ ಕೊಟ್ಟಿರೋದು Public Eye ನಡೆಸಿದ ತನಿಖಾ ವರದಿ!

ಭಾರತ ಸೇರಿದಂತೆ ಬಡ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹೆಚ್ಚು ಮಾರಾಟವಾಗುತ್ತಿರುವ ನೆಸ್ಲೆಯ ಬೇಬಿ-ಫುಡ್​ ಬ್ರಾಂಡ್​ಗಳಲ್ಲಿ (baby-food brands) ಸಕ್ಕರೆ ಪ್ರಮಾಣ ಹೆಚ್ಚಿರೋದು ದೃಢವಾಗಿದೆ. ಆಘಾತಕಾರಿ ವಿಚಾರ ಏನೆಂದರೆ, ಬಡ ಹಾಗೂ ಅಭಿವೃದ್ಧಿ ರಾಷ್ಟ್ರಗಳಲ್ಲಿ ನೆಸ್ಲೆ ಮಾರಾಟ ಮಾಡುತ್ತಿರುವ ಶಿಶುಗಳ ಫುಡ್​​ನಲ್ಲಿ ಮಾತ್ರ ಸಕ್ಕರೆ ಅಂಶ ಪತ್ತೆಯಾಗಿದೆ. ಆದರೆ ಬ್ರಿಟನ್, ಜರ್ಮನಿ, ಸ್ವಿಟ್ಜರ್ಲೆಂಡ್, ಅಮೆರಿಕ ಸೇರಿಂದಂತೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಮಾರಾಟವಾಗ್ತಿರುವ ಬ್ರ್ಯಾಂಡ್​ಗಳಲ್ಲಿ ಸಕ್ಕರೆ ಇಲ್ಲದೇ ತನ್ನ ಪ್ರಾಡೆಕ್ಟ್​ಗಳನ್ನು ಮಾರಾಟ ಮಾಡುತ್ತಿದೆರೋದು ಬೆಳಕಿಗೆ ಬಂದಿದೆ. ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ಮಾರಾಟ ಆಗುತ್ತಿರುವ ಉತ್ಪನ್ನಗಳಲ್ಲಿ ಹೇರಳವಾಗಿ ಸಕ್ಕರೆ ಬಳಸುತ್ತಿದೆ ಎಂದು ತನಿಖಾ ವರದಿ ತಿಳಿಸಿದೆ.

ಸಕ್ಕರೆ ಅಂಶದ ಬಗ್ಗೆ ಮಾಹಿತಿಯೇ ಇಲ್ಲ

ಈ ಮೂಲಕ ವಿಶ್ವದ ಅತಿದೊಡ್ಡ ಗ್ರಾಹಕ ಉತ್ಪನ್ನಗಳ ಕಂಪನಿ, ತನ್ನ ಆಹಾರ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟದಲ್ಲಿ ನಿಯಮ ಉಲ್ಲಂಘಿಸಿದ ಆರೋಪ ಹೊತ್ತಿದೆ. ಶಿಶುಗಳಿಗಾಗಿ ಒದಗಿಸುವ ಸೆರೆಲಾಕ್​​ನಂತಹ ಉತ್ಪನ್ನಗಳಲ್ಲಿ ಸಕ್ಕರೆ ಮತ್ತು ಜೇನುತುಪ್ಪ ಸೇರಿಸಿರುವುದು ಕಂಡುಬಂದಿದೆ. ಭಾರತದಲ್ಲಿ ಮಾರಾಟವಾಗುವ ನೆಸ್ಲೆಯ ಮಕ್ಕಳ ಉತ್ಪನ್ನಗಳ ಪ್ರತಿ ಸೇವೆಯಲ್ಲಿ ಸುಮಾರು 3 ಗ್ರಾಂ ಸಕ್ಕರೆ ಅಂಶ ಇದೆ. ಹೀಗಿದ್ದೂ ಪ್ಯಾಕೆಟ್‌ನಲ್ಲಿ ಸಕ್ಕರೆ ಪ್ರಮಾಣದ ಬಗ್ಗೆ ಕಂಪನಿ ಯಾವುದೇ ಮಾಹಿತಿ ನೀಡಿಲ್ಲ ಎಂದು ವರದಿ ಹೇಳಿದೆ.

ತನಿಖಾ ಸಂಸ್ಥೆಗಳಾದ ಪಬ್ಲಿಕ್ ಐ ಮತ್ತು IBFAN (ಇಂಟರ್‌ನ್ಯಾಷನಲ್ ಬೇಬಿ ಫುಡ್ ಆಕ್ಷನ್ ನೆಟ್‌ವರ್ಕ್) ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾದಲ್ಲಿ ಮಾರಾಟವಾದ ಕಂಪನಿಯ ಉತ್ಪನ್ನಗಳ ಮಾದರಿಗಳನ್ನು ವೈಜ್ಞಾನಿಕ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಬೆಲ್ಜಿಯಂನಲ್ಲಿ ನಡೆದ ಪ್ರಯೋಗಾಲಯದಲ್ಲಿ ಈ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಜರ್ಮನಿ, ಫ್ರಾನ್ಸ್ ಮತ್ತು ಬ್ರಿಟನ್‌ನಲ್ಲಿ ನೆಸ್ಲೆ ಮಾರಾಟ ಮಾಡುವ ಸೆರೆಲಾಕ್​ನಲ್ಲಿ ಸಕ್ಕರೆ ಅಂಶ ಕಂಡುಬಂದಿಲ್ಲ. ಆದರೆ ಇಥಿಯೋಪಿಯಾ ( Ethiopia) ಮತ್ತು ತೈಲ್ಯಾಂಡ್​ನಲ್ಲಿ ಮಾರಾಟವಾಗುವ ಸೆರೆಲಾಕ್​ನ ಒಂದು ಪ್ಯಾಕೇಟ್​ನಲ್ಲಿ ಕ್ರಮವಾಗಿ 5 ಮತ್ತು 6 ಗ್ರಾಂ ಸಕ್ಕರೆ ಪ್ರಮಾಣ ಇದೆ ಎಂದು ವರದಿ ಹೇಳಿದೆ.

ದ್ವಿಮುಖ ಮಾನದಂಡದ ಬಗ್ಗೆ ಆತಂಕ

ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ನಿಗೆಲ್ ರೋಲಿನ್ಸ್ ಪ್ರತಿಕ್ರಿಯಿಸಿ.. ಸ್ವಿಟ್ಜರ್ಲೆಂಡ್‌ನಲ್ಲಿ ನೆಸ್ಲೆ ಉತ್ಪನ್ನಗಳಿಗೆ ಸಕ್ಕರೆ ಸೇರಿಸಿಲ್ಲ ಎಂಬುವುದು ಗೊತ್ತಾಗಿದೆ. ಆದರೆ ಬಡ ರಾಷ್ಟ್ರಗಳಲ್ಲಿ ಸಕ್ಕರೆ ಅಂಶಗಳನ್ನು ಬಳಸಿಕೊಂಡಿದೆ. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಈ ಎರಡು ವಿಚಾರಗಳು ಪ್ರಶ್ನೆಯನ್ನು ಹುಟ್ಟಿಹಾಕಿದೆ ಎಂದು ಅವರು ಹೇಳಿದ್ದಾರೆ. ನೆಸ್ಲೆಯ ಈ ದ್ವಿಮುಖ ಮಾನದಂಡದ ಬಗ್ಗೆ ಆತಂಕ ಎದುರಾಗಿದೆ

ಮಕ್ಕಳು ಸಕ್ಕರೆಗೆ ಬೇಗ ಒಡ್ಡಿಕೊಳ್ಳುವುದರಿಂದ ಸಕ್ಕರೆ ಆಧಾರಿತ ಉತ್ಪನ್ನಗಳು ಹೆಚ್ಚು ಆಕರ್ಷಿಸುತ್ತವೆ ಎಂದು WHO ಎಚ್ಚರಿಸಿದೆ. ಇದರಿಂದ ಮಕ್ಕಳಲ್ಲಿ ಬೊಜ್ಜು ಮತ್ತು ಇತರ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ. 2022ರಲ್ಲಿ ಶಿಶುಗಳಿಗೆ ಆಹಾರ ಉತ್ಪನ್ನಗಳಲ್ಲಿ ಸಕ್ಕರೆಯನ್ನು ಸೇರಿಸಬಾರದು, ಅದನ್ನು ನಿಷೇಧಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು. ಇದೀಗ ನೆಸ್ಲೆ ನಿಯಮವನ್ನು ಉಲ್ಲಂಘಿಸಿರೋದು ಬೆಳಕಿಗೆಗೆ ಬಂದಿದೆ.

ವರದಿಗೆ ಪ್ರತಿಕ್ರಿಯಿಸಿದ ನೆಸ್ಲೆ ಇಂಡಿಯಾ.. ಕಳೆದ 5 ವರ್ಷಗಳಲ್ಲಿ ಶಿಶು ಧಾನ್ಯಗಳ ಪೋರ್ಟ್‌ಫೋಲಿಯೊದಲ್ಲಿ ಸೇರಿಸಲಾದ ಸಕ್ಕರೆಯ ಪ್ರಮಾಣ ಕಮ್ಮಿ ಮಾಡಿದ್ದೇವೆ. ಶೇಕಡಾ 30 ರಷ್ಟು ಕಡಿಮೆ ಮಾಡಲಾಗಿದೆ. ನಾವು ನಿಯಮದ ಪ್ರಕಾರವೇ ನಡೆದುಕೊಂಡಿದ್ದೇವೆ. ನಮ್ಮ ಪೋರ್ಟ್‌ಫೋಲಿಯೊವನ್ನು ಮತ್ತೊಮ್ಮೆ ಪರಿಶೀಲಿಸಿ ಗುಣಮಟ್ಟ, ಸುರಕ್ಷತೆ ಮತ್ತು ರುಚಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದಿದೆ. ಭಾರತ ಒಂದರಲ್ಲೇ 2022ರಲ್ಲಿ ನೆಸ್ಲೆ 20 ಸಾವಿರ ಕೋಟಿ ಮೌಲ್ಯದ ಸೆರೆಲಾಕ್​​ ಉತ್ಪನ್ನಗಳನ್ನು ಮಾರಾಟ ಮಾಡಿದೆ.

Previous Post

ಕಾಸರಗೋಡು: ಅಣಕು ಮತದಾನದ ವೇಳೆ ಬಿಜೆಪಿ ಚಿಹ್ನೆಯೊಂದಿಗೆ ಹೆಚ್ಚುವರಿ ಸ್ಲಿಪ್ ಮುದ್ರಿಸಿದ ವಿವಿಪ್ಯಾಟ್

Next Post

ದಕ್ಷಿಣ ಕನ್ನಡ : ದೇವಸ್ಥಾನದ ಬಳಿ ಪ್ರಚಾರ :ಶಾಸಕ ಕಾಮತ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮದ್ಯೆ ವಗ್ವಾದ

Next Post
ದಕ್ಷಿಣ ಕನ್ನಡ : ದೇವಸ್ಥಾನದ ಬಳಿ ಪ್ರಚಾರ  :ಶಾಸಕ ಕಾಮತ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮದ್ಯೆ ವಗ್ವಾದ

ದಕ್ಷಿಣ ಕನ್ನಡ : ದೇವಸ್ಥಾನದ ಬಳಿ ಪ್ರಚಾರ :ಶಾಸಕ ಕಾಮತ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮದ್ಯೆ ವಗ್ವಾದ

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.