
ಬೆಳ್ತಂಗಡಿ: ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶದ ದಿನ ಎಸ್ಡಿಪಿಐ ವಿಜಯೋತ್ಸವ ರ‍್ಯಾಲಿಯಲ್ಲಿ ಪಾಕಿಸ್ತಾನ ಝಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆಂದು ವೈರಲ್ ಆದ ವಿಡಿಯೋ ಇದೀಗ ತಿರುವು ಪಡೆದದಿದ್ದು, ಬಿಜೆಪಿ ಕಾರ್ಯಕರ್ತರೇ ಪಾಕಿಸ್ತಾನ ಪರ ಘೋಷಣೆಯನ್ನು ಕೂಗಿದ್ದಾರೆ ಎಂದು ಹೇಳಲಾಗುತ್ತಿದೆ.
ನೂತನ್ ನಿಶ್ ಎಂಬ ಯೂಟ್ಯೂಬ್ ಖಾತೆಯಲ್ಲಿ ಸುಮಾರು ಮೂರು ನಿಮಿಷದ ವೀಡಿಯೋ ಒಂದನ್ನು ಅಪ್‌ಲೋಡ್ ಮಾಡಲಾಗಿದ್ದು, ಅದರಲ್ಲಿ ಬಿಜೆಪಿ, ಸಂಘಪರಿವಾರದ ಕಾರ್ಯಕರ್ತರು ವಿಜಯೋತ್ಸವ ಮಾಡುತ್ತಿದ್ದಾರೆ. ಈ ವೇಳೆ ಪಾಕಿಸ್ತಾನ್ ಮುರ್ದಾಬಾದ್ ಎಂಬ ಘೋಷಣೆಗಳೂ ಅದರಲ್ಲಿ ಕೇಳಿಸುತ್ತಿದೆ. ಒಟ್ಟಿನಲ್ಲಿ ಅದು ಝಿಂದಾಬಾದ್ ಇಲ್ಲ ಮುರ್ದಾಬಾದ್ ಎಂದು ಕೂಗಿದ್ದೋ ಎಂಬುದು ಅಸ್ಪಷ್ಟವಾಗಿದೆ.
‘ತಿರುಚಿದ ವೀಡಿಯೋದ ಆಧಾರದಲ್ಲಿ ಮುಸ್ಲಿಂ ಯುವಕರನ್ನು ಬಂಧಿಸಿ ಅವರನ್ನು ಹಿಂಸಿಸಲಾಗಿದೆ. ಈಗ ನೈಜ ಪಾಕಿಸ್ತಾನ ಪ್ರೇಮಿ ಸಂಘಿಗಳ ಮುಖವಾಡ ಕಳಿಚಿದೆ. ಸಂಘಪರಿವಾದ ಈ ಗೂಂಡಾಗಳನ್ನು ಬಂಧಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕರ್ತವ್ಯ ನಿಷ್ಠೆ ತೋರುವಿರಾ’ ಎಂದು ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಪ್ರಶ್ನಿಸಿದ್ದಾರೆ.
