
ತೆಹ್ರಾನ್: ಹಮಾಸ್ ಮತ್ತು ಇಸ್ರೇಲ್ (Israel) ಯುದ್ಧ ನಡುವೆಯೇ ಇರಾನ್ (Iran) ಸೇನೆಯು ಇಸ್ರೇಲ್ ಮೇಲೆ ನೂರಾರು ಸಂಖ್ಯೆಯಲ್ಲಿ ಡ್ರೋನ್‌ಗಳ ದಾಳಿ ನಡೆಸಿದೆ. ಈ ಬೆಳವಣಿಗೆ ಮತ್ತಷ್ಟು ಭೀತಿ ಹುಟ್ಟುಹಾಕಿದೆ.
ಇರಾನ್‌ನಿಂದ ಇಸ್ರೇಲ್‌ನತ್ತ 100 ಕ್ಕೂ ಹೆಚ್ಚು ಡ್ರೋನ್‌ಗಳು ಹಾರುತ್ತಾ ಧಾವಿಸಿರುವುದು ಕಂಡುಬಂದಿದೆ ಎಂದು ಇಸ್ರೇಲ್ ಮಿಲಿಟರಿ ವರದಿಯಲ್ಲಿ ತಿಳಿಸಿದೆ

ಸಿರಿಯಾದ ಡಮಾಸ್ಕಸ್‌ನಲ್ಲಿರುವ ಇರಾನ್ ರಾಯಭಾರ ಕಚೇರಿ ಮೇಲೆ ಇಸ್ರೇಲ್ ಏ.1 ರಂದು ವೈಮಾನಿಕ ದಾಳಿ ನಡೆಸಿತ್ತು. ಇದರಿಂದ ಇರಾನ್‌ನ ರೆವಲ್ಯೂಷನರಿ ಗಾರ್ಡ್‌ನ ಇಬ್ಬರು ಬ್ರಿಗೇಡಿಯರ್ ಜನರಲ್ ಸೇರಿದಂತೆ 7 ಮಂದಿ ಸೇನಾಧಿಕಾರಿಗಳು ಹತರಾಗಿದ್ದರು.
ಇದಕ್ಕೆ ಪ್ರತೀಕಾರವಾಗಿ ಇರಾನ್ ದಾಳಿ ನಡೆಸಿದೆ ಎನ್ನಲಾಗಿದೆ. ಇಸ್ರೇಲ್ ಈ ವೈಮಾನಿಕ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.

ಇರಾನ್ ದಾಳಿಯ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮುನ್ಸೂಚನೆ ನೀಡಿದ್ದರು. ಇಸ್ರೇಲ್ ರಕ್ಷಣೆಗೆ ಬೇಕಾದ ಅಗತ್ಯ ನೆರವು ಒದಗಿಸುವುದಾಗಿ ತಿಳಿಸಿದ್ದರು.
ಈಗಾಗಲೇ ಇರಾನ್ 200 ಡ್ರೋನ್, ಬ್ಯಾಲಿಸ್ಟಿಕ್ ಮತ್ತು ಕ್ರೂಷಿಯಲ್ ಮಿಸೈಲ್ಗಳನ್ನು ಇಸ್ರೇಲ್ ಮೇಲೆ ಉಡಾಯಿಸಿದೆ. ಇವುಗಳನ್ನು ಗಡಿ ಭಾಗದಲ್ಲೇ ನಮ್ಮ ರಕ್ಷಣಾ ಪಡೆಗಳು ತಡೆ ಹಿಡಿದಿವೆ ಎಂದು ಇಸ್ರೇಲ್ ಹೇಳಿದೆ. ಇದರಿಂದ ನಮಗೆ ಸಣ್ಣ ಪ್ರಮಾಣದಲ್ಲಿ ಹಾನಿಯಾಗಿದೆ ಅಷ್ಟೇ ಎಂದು ಹೇಳಿದೆ.

ಇರಾನ್, ಇಸ್ರೇಲ್ ಮೇಲೆ ದಾಳಿ ಮಾಡಿದ್ದು ಈ ಭಯಾನಕ ಘಟನೆಯಲ್ಲಿ ಎಷ್ಟು ಸಾವು, ನೋವು ಆಗಿದ್ದಾವೆ ಎಂದು ಇನ್ನು ತಿಳಿದು ಬಂದಿಲ್ಲ. ನಿನ್ನೆಯಿಂದಲೂ ಇರಾನ್, ಇಸ್ರೇಲ್ ಮೇಲೆ ಭಯಾನಕವಾಗಿ ಡ್ರೋನ್, ಬ್ಯಾಲಿಸ್ಟಿಕ್ ಮತ್ತು ಕ್ರೂಷಿಯಲ್ ಮಿಸೈಲ್ಗಳ ಮೂಲಕ ಅಟ್ಯಾಕ್ ಮಾಡುತ್ತಿದೆ.
ಇಸ್ರೇಲ್-ಪ್ಯಾಲೆಸ್ತೈನ್ ನಡುವಿನ ಯುದ್ಧಕ್ಕೆ ಇರಾನ್ ಮತ್ತು ಅಮೆರಿಕ ಎಂಟ್ರಿ
ಇಸ್ರೇಲ್ ಹಾಗೂ ಇರಾನ್ ನಡುವೆ ಯುದ್ಧ ಆರಂಭವಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ, ಕಳೆದ 6 ತಿಂಗಳ ಹಿಂದೆ ಇಸ್ರೇಲ್-ಪ್ಯಾಲೇಸ್ತೈನ್ ನಡುವಿನ ಯುದ್ಧದಲ್ಲಿ ಲಕ್ಷಾಂತರ ಜನರ ಮಾರಣ ಹೋಮ ನಡೆದಿತ್ತು. ಈಗ ಬೂದಿ ಮುಚ್ಚಿದ ಕೆಂಡದಂತಿದ್ದ ಇಸ್ರೇಲ್-ಪ್ಯಾಲೆಸ್ತೈನ್ ನಡುವಿನ ಯುದ್ಧಕ್ಕೆ ಇರಾನ್ ಮತ್ತು ಅಮೆರಿಕ ಎಂಟ್ರಿ ಕೊಟ್ಟಿದ್ದು, ಆತಂಕಕ್ಕೆ ಕಾರಣವಾಗಿದೆ. ಮತ್ತೆ ಮಧ್ಯ ಪ್ರಾಚ್ಯ ದೇಶಗಳಲ್ಲಿ ರಕ್ತದೋಕುಳಿ ಹರಿಯುವ ಸಾಧ್ಯತೆ ಇದೆ.
ಇರಾನ್ ಪಡೆಯಿಂದ ಇಸ್ರೇಲಿ-ಸಂಯೋಜಿತ ಸರಕು ಹಡಗು ವಶ!
ಇಸ್ರೇಲ್ ಹಾಗೂ ಇರಾನ್ ನಡುವೆ ಯಾವುದೇ ಕ್ಷಣದಲ್ಲೂ ಯುದ್ಧ ಆರಂಭಗೊಳ್ಳುವ ಸಾಧ್ಯತೆ ಇದೆ. ಮುಂದಿನ ಕೆಲ ಗಂಟೆಗಲ್ಲಿ ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸುವ ಸಾಧ್ಯತೆಯನ್ನ ಹಲವು ಮೂಲಗಳು ಹೇಳುತ್ತಿದೆ. ಈ ಎಚ್ಚರಿಕೆ ನಡುವೆ ಇರಾನ್ ಈಗಾಗಲೇ ಟಾರ್ಗೆಟ್ ದಾಳಿ ಆರಂಭಿಸಿದೆ. ಇಸ್ರೇಲ್ ಮೂಲದ ಸರಕು ಹಡಗನ್ನು ಯುಎಇ ಸಮುದ್ರ ತೀರದಲ್ಲಿ ಇರಾನ್ ಸೇನೆ ವಶಕ್ಕೆ ಪಡೆದಿದೆ. ಹೆಲಿಕಾಪ್ಟರ್ ಮೂಲಕ ಹಡಗು ಚೇಸ್ ಮಾಡಿದ ಇರಾನ್ ಸೇನೆ ಸೈನಿಕರನ್ನು ಸರಕು ಹಡಗಿನ ಮೇಲೆ ಇಳಿಸಿ ವಶಕ್ಕೆ ಪಡೆದಿದೆ. ಈ ಹಡಗಿನ 25 ಸಿಬ್ಬಂದಿ ಪೈಕಿ 17 ಸಿಬ್ಬಂದಿ ಭಾರತೀಯರು ಅನ್ನೋ ಮಾಹಿತಿ ಲಭ್ಯವಾಗಿದೆ.


