
ವಿರೋಧ ಪಕ್ಷದ ನಾಯಕ ಆರ್ ಅಶೋಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಬೇರೆ ನಾಯಕರು ಈಶ್ವರಪ್ಪ ತಮ್ಮ ಕಚೇರಿ ಮತ್ತು ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಫೋಟೋ ಬಳಸುತ್ತಿರುವ ಬಗ್ಗೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ್ದರೂ ಬಂಡಾಯ ನಾಯಕನ ಮೇಲೆ ಅದು ಯಾವ ಪರಿಣಾಮವೂ ಬೀರಿಲ್ಲ

ಶಿವಮೊಗ್ಗ: ರಾಜ್ಯ ಬಿಜೆಪಿ ನಾಯಕರ ವಿರುದ್ಧವೇ ಸೆಡ್ಡು ಹೊಡೆದು ಪಕ್ಷೇತರ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಹಿರಿಯ ನಾಯಕ ಕೆ ಎಸ್. ಈಶ್ವರಪ್ಪ (KS Eshwarappa) ಅದ್ಯಾವ ಜನಬೆಂಬಲ ಸಿಕ್ಕೀತು ಅಂತ ಅಂಡರ್ ಎಸ್ಟಿಮೇಟ್ ಮಾಡಿದವರಿಗೆ ಇಂದು ನಾಮಪತ್ರ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಗೆ (DC office) ಹೋಗಿದ್ದು ಭಾರೀ ಮೆರವಣಿಗೆಯಲ್ಲಿ! ಸಹಸ್ರಾರು ಹಿಂದೂ ಕಾರ್ಯಕರ್ತರು (Hindu activists) ಈಶ್ವರಪ್ಪ ಜೊತೆಗಿದ್ದರು . ರಾಷ್ಟ್ರಭಕ್ತರ ಬಳಗ ಹೆಸರಿನೊಂದಿಗೆ ಈಶ್ವರಪ್ಪ ಸ್ಪರ್ಧೆ ಮಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಆರ್ ಅಶೋಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಬೇರೆ ನಾಯಕರು ಈಶ್ವರಪ್ಪ ತಮ್ಮ ಕಚೇರಿ ಮತ್ತು ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಫೋಟೋ ಬಳಸುತ್ತಿರುವ ಬಗ್ಗೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ್ದರೂ ಬಂಡಾಯ ನಾಯಕನ ಮೇಲೆ ಅದು ಯಾವ ಪರಿಣಾಮವೂ ಬೀರಿಲ್ಲ. ಮೆರವಣಿಗೆಯಲ್ಲಿ ಪ್ರಧಾನಿ ಮೋದಿ ಮತ್ತು ಈಶ್ವರಪ್ಪ ಫೋಟೋಗಳಿರುವ ಬ್ಯಾನರ್ ಗಳನ್ನು ನೋಡಬಹುದು.

