
ಮಂಗಳೂರು :ಬರಕಾ ಇಂಟರ್ನ್ಯಾಷನಲ್ ಪಿ.ಯು. ಕಾಲೇಜು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ಫಲಿತಾಂಶದೊಂದಿಗೆ ಇಡೀ ಜಿಲ್ಲೆಯಲ್ಲಿ ಒಂದು ಪ್ರತಿಷ್ಠಿತ ಸಂಸ್ಥೆಯಾಗಿ ದಾಪುಗಾಲು ಇಡುತ್ತಾ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ.

2023-24ನೇ ಸಾಲಿನಲ್ಲಿ ಒಟ್ಟು 173 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ ಎಲ್ಲ 173 ವಿದ್ಯಾರ್ಥಿಗಳು ಸಹ ಉತ್ತೀರ್ಣರಾಗಿದ್ದು 100% ಫಲಿತಾಂಶ ಕಾಲೇಜಿಗೆ ದೊರತರೆ, ಇದರಲ್ಲಿ 3 ವಿದ್ಯಾರ್ಥಿಗಳು ಕೆಲವು ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಗಳಿಸುವುದರೊಂದಿಗೆ ಅತ್ಯುತ್ತಮ ಸಾಧನೆಯನ್ನು ತೋರಿದ್ದಾರೆ. ಒಟ್ಟು 52 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ(distinction) ಉತ್ತೀರ್ಣರಾದರೆ, ಉಳಿದ ವಿದ್ಯಾರ್ಥಿಗಳಲ್ಲಿ 110 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗು 11 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಪಡೆದಿರುತ್ತಾರೆ. ಉತ್ತಮ ಸಾಧನೆಯನ್ನು ತೋರಿದ ವಿದ್ಯಾರ್ಥಿಗಳಿಗೆ ಹಾಗು ಶ್ರಮಿಸಿದಂತಹ ಉಪನ್ಯಾಸಕರು, ಸಿಬ್ಬಂದಿ ವರ್ಗ ,ಪ್ರಾಂಶುಪಾಲರಿಗೆ ಸಂಸ್ಥೆಯ ಅಧ್ಯಕ್ಷರಾದ ಮಹಮ್ಮದ್ ಅಶ್ರಫ್ ಬಜ್ಪೆ ಇವರು ಅಭಿನಂದಿಸಿದ್ದಾರೆ.

