ಮಂಗಳೂರು: ಮಂಗಳವಾರ ಶವ್ವಾಲ್ ಚಂದ್ರ ದರ್ಶನದ ನಂತರ ಇಂದು (ಬುಧವಾರ) ಈದ್ ಉಲ್ ಫಿತರ್ ಹಬ್ಬದ ಘೋಷಣೆಯಾಗಿತ್ತು.ಕರಾವಳಿಯ ಜಿಲ್ಲೆಗಳಲ್ಲಿ ಮುಸ್ಲಿಂ ಸಮುದಾಯ ಸಂಭ್ರಮದಿಂದ ಈದ್ ಆಚರಿಸುತ್ತಿದ್ದಾರೆ

ಮುಸ್ಲಿಂ ಬಾಂಧವರು ಉಡುಪಿ, ಉ.ಕ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಂಭ್ರಮದ ಈದ್ ಉಲ್ ಫಿತರ್ ಆಚರಣೆ ನಡೆಸಿದರು.

ಈದ್ ನಮಾಝಿನ ನಂತರ ಮಸೀದಿ/ಈದ್ಗಾಗಳಲ್ಲಿ ಖುತ್ಬಾ (ಪ್ರಭಾಷಣ) ನೆರೆವೇರಿತು. ನಂತರ ಹಿರಿಯರು, ಕಿರಿಯರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವ ದೃಶ್ಯಗಳು ಕಂಡು ಬಂತು.




