Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಕಾಂಗ್ರೆಸ್​ ಮತದಾರರೇ ಟಾರ್ಗೆಟ್, ಕರ್ನಾಟಕದ ಆಳಂದ ಕ್ಷೇತ್ರದಲ್ಲೂ ಮತಗಳ್ಳತನ, 6000 ಮತದಾರರ ಹೆಸರು ಡಿಲೀಟ್: ರಾಹುಲ್ ಆರೋಪ

    ಧರ್ಮಸ್ಥಳ ಕೇಸ್​​ ತನಿಖೆಗೆ ಅನಿರೀಕ್ಷಿತ ಟ್ವಿಸ್ಟ್.. ನಿಜವಾಯ್ತಾ ಸೌಜನ್ಯ ಮಾವ ವಿಠಲ್ ಹೇಳಿದ್ದು..?

    ಬೆಂಗಳೂರು: ಹದಿನೇಳು ವರ್ಷದ ಬಾಲಕಿ ಸೇರಿ 8 ಮಹಿಳೆಯರ ಮೇಲೆ ಅತ್ಯಾಚಾರ; ಯೋಗ ಗುರು ಬಂಧನ

    ಬೆಂಗಳೂರು: ಹದಿನೇಳು ವರ್ಷದ ಬಾಲಕಿ ಸೇರಿ 8 ಮಹಿಳೆಯರ ಮೇಲೆ ಅತ್ಯಾಚಾರ; ಯೋಗ ಗುರು ಬಂಧನ

    ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ ಗೆದ್ರೆ ರಾಜಕೀಯ ಬಿಡುವೆ: ಶಾಸಕ ಕೆವೈ ನಂಜೇಗೌಡ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    ಸೌಜನ್ಯ ಮಾವ ವಿಠಲ್‌ಗೌಡ ತೋರಿಸಿದ ಬಂಗ್ಲೆಗುಡ್ಡೆ ಕಾಡಿನಲ್ಲಿ 5 ಅಸ್ಥಿಪಂಜರ ಮೂಳೆ ಪತ್ತೆ!

    ಸೌಜನ್ಯ ಮಾವ ವಿಠಲ್‌ಗೌಡ ತೋರಿಸಿದ ಬಂಗ್ಲೆಗುಡ್ಡೆ ಕಾಡಿನಲ್ಲಿ 5 ಅಸ್ಥಿಪಂಜರ ಮೂಳೆ ಪತ್ತೆ!

    ಯುವತಿ ದೇಹದ ಮೇಲಿನ ಕಪ್ಪು ಚುಕ್ಕೆ ಗುರುತಿಸಿದ AI.. ಫೋಟೋ ಅಪ್​ಲೋಡ್​ ಮಾಡುವಾಗ ಹುಷಾರ್​!

    ವಿಜಯಪುರ| SBI ಬ್ಯಾಂಕ್‌ ದರೋಡೆ – ಪಿಸ್ತೂಲ್‌ ತೋರಿಸಿ 8 ಕೋಟಿ ನಗದು, 50 ಕೆಜಿ ಚಿನ್ನದೊಂದಿಗೆ ಪರಾರಿ

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಚುನಾವಣೆ

ಯಾವೊಬ್ಬ ಅಭ್ಯರ್ಥಿ ಕೂಡ ಇಷ್ಟವಿಲ್ಲದಲ್ಲಿ ಮತದಾರರು ನೋಟಾಗೆ ಮತ ಚಲಾಯಿಸಬಹುದಾಗಿದೆ

editor tv by editor tv
April 8, 2024
in ಚುನಾವಣೆ
0
ಯಾವೊಬ್ಬ ಅಭ್ಯರ್ಥಿ ಕೂಡ ಇಷ್ಟವಿಲ್ಲದಲ್ಲಿ ಮತದಾರರು ನೋಟಾಗೆ ಮತ ಚಲಾಯಿಸಬಹುದಾಗಿದೆ
1.9k
VIEWS
Share on FacebookShare on TwitterShare on Whatsapp

ಭಾರತೀಯ ಚುನಾವಣಾ ಆಯೋಗ ಮತದಾರರಿಗೆ ನೋಟಾ ಎಂಬ ಆಯ್ಕೆಯೊಂದನ್ನು ನೀಡಿದೆ. ರಾಜಕೀಯ ಪಕ್ಷಗಳು ಕಣಕ್ಕಿಳಿಸಿದ ಅಥವಾ ಪಕ್ಷೇತರವಾಗಿ ಚುನಾವಣೆ ಸ್ಪರ್ಧಿಸುವ ಯಾವೊಬ್ಬ ಅಭ್ಯರ್ಥಿ ಕೂಡ ಇಷ್ಟವಿಲ್ಲದಲ್ಲಿ ಮತದಾರರು ನೋಟಾಗೆ ಮತ ಚಲಾಯಿಸಬಹುದಾಗಿದೆ. ಇದರ ಪ್ರಯೋಜನವೇನು? ಯಾಕಾಗಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂಬ ಮಾಹಿತಿ ಇಲ್ಲಿದೆ.

ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಏಪ್ರಿಲ್ 19 ರಂದು ನಡೆಯಲಿದೆ. ಮೊದಲ ಹಂತದಲ್ಲಿ 102 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು ಅಭ್ಯರ್ಥಿಗಳ ಘೋಷಣೆ, ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗಳು ಮುಗಿದಿವೆ. ಎಲ್ಲ ರಾಜಕೀಯ ಪಕ್ಷಗಳೂ ಬಿರುಸಿನಿಂದ ಪ್ರಚಾರ ನಡೆಸುತ್ತಿವೆ. ಕರ್ನಾಟಕದಲ್ಲಿ ಎರಡನೇ ಹಂತದಲ್ಲಿ (ಇದು ರಾಜ್ಯದ ಮೊದಲ ಹಂತ) ಮತದಾನ ನಡೆಯಲಿದೆ. ಒಂದು ವೇಳೆ ರಾಜಕೀಯ ಪಕ್ಷಗಳು ಕಣಕ್ಕಿಳಿಸಿರುವ ಅಥವಾ ಪಕ್ಷೇತರ ಸೇರಿದಂತೆ ಯಾವುದೇ ಅಭ್ಯರ್ಥಿಗಳು ಮತದಾರನಿಗೆ ಇಷ್ಟವಾಗದಿದ್ದರೆ ಏನು ಮಾಡಬಹುದು? ಇದಕ್ಕಾಗಿ ಚುನಾವಣಾ ಆಯೋಗ “ನೋಟಾ” (NOTA / NONE OF THE ABOVE) (ಈ ಮೇಲಿನ ಯಾವುದೂ / ಯಾರೂ ಅಲ್ಲ) ಎಂಬ ಆಯ್ಕೆಯನ್ನು ಮತದಾರರಿಗೆ ನೀಡಿದೆ. ಒಂದು ವೇಳೆ ಕಣದಲ್ಲಿರುವ ಎಲ್ಲಾ ಅಭ್ಯರ್ಥಿಗಳಿಗಿಂತ ನೋಟಾಗೆ ಹೆಚ್ಚು ಮತ ಪಡೆದರೆ ಏನಾಗಬಹುದು? ಮಾಹಿತಿ ಇಲ್ಲಿದೆ.

ಸುಪ್ರೀಂ ಕೋರ್ಟ್ ಸೂಚನೆಯಂತೆ 2013ರಲ್ಲಿ ನಡೆದ ಪಂಚ ರಾಜ್ಯ ಚುನಾವಣೆಯಲ್ಲಿ ನೋಟಾ ಆಯ್ಕೆಯನ್ನು ಮತದಾರರಿಗೆ ನೀಡಲಾಯಿತು. ನಂತರ ನಡೆದ ಎಲ್ಲ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಈ ಆಯ್ಕೆ ನೀಡಲಾಗಿದೆ. ವಿದ್ಯುನ್ಮಾನ ಮತ ಯಂತ್ರ ಅಥವಾ ಇವಿಎಂ ನ ಕೊನೆಯಲ್ಲಿ ಈ ಆಯ್ಕೆ ಇರುತ್ತದೆ.

ನೋಟಾ ಮಹತ್ವವೇನು?

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಎಂಬುದು ಬಹಳ ಮುಖ್ಯವಾದ ಅಂಶ. ಒಂದು ವೇಳೆ ಕಣದಲ್ಲಿರುವ ಯಾವ ಅಭ್ಯರ್ಥಿಗಳು ಕೂಡ ಮತದಾರರಿಗೆ ಇಷ್ಟವಿಲ್ಲದಿದ್ದರೆ ಅವರು ಮತದಾನ ಪ್ರಕ್ರಿಯೆಯಿಂದ ದೂರವಿರಬಾರದು ಎಂಬ ಕಾರಣಕ್ಕಾಗಿ ನೋಟಾ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಯಾವ ಅಭ್ಯರ್ಥಿ ಕೂಡ ಇಷ್ಟವಿಲ್ಲದವರು ಈ ಆಯ್ಕೆಗೆ ಮತ ನೀಡಬಹುದಾಗಿದೆ.

ರಾಜಕೀಯ ಪಕ್ಷಗಳು ಕಣಕ್ಕಿಳಿಸಿರುವ ಅಭ್ಯರ್ಥಿಗಳ ಬಗ್ಗೆ ಜನರಿಗೆ ತಮ್ಮ ಅಸಮಾಧಾನವನ್ನು ತೋಡಿಕೊಳ್ಳಲು ಇದೊಂದು ಉತ್ತಮ ಆಯ್ಕೆಯಾಗಿದೆ. ಯಾಕೆ ಅನ್ನು ಬಳಸಿಕೊಳ್ಳುವುದರ ಮೂಲಕ ತಮ್ಮ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಯಾವೊಬ್ಬ ಅಭ್ಯರ್ಥಿ ಕೂಡ ಸಮರ್ಥನಲ್ಲ ಎಂಬ ಸಂದೇಶವನ್ನು ಆ ಪಕ್ಷಗಳಿಗೆ ಮತದಾರ ನೀಡಬಹುದಾಗಿದೆ.

ಅಭ್ಯರ್ಥಿಗಳಿಗಿಂತ ಹೆಚ್ಚು ಮತ ನೋಟಾ ಪಡೆದರೆ?

ನೋಟಾ ಆಯ್ಕೆಯಲ್ಲಿ ಕೂಡ ಕಾಲಕಾಲಕ್ಕೆ ಬದಲಾವಣೆಗಳಾಗಿವೆ. ಆರಂಭದಲ್ಲಿ ನೋಟಾಗೆ ನೀಡುವ ಮತವನ್ನು ಅಕ್ರಮ ಮತಗಳೆಂದು ಪರಿಗಣಿಸಲಾಗುತ್ತಿತ್ತು. ನಂತರದಲ್ಲಿ ನೋಟಾಗೆ ಗರಿಷ್ಠ ಮತ ಚಲಾವಣೆಯಾದರೆ ಅದಕ್ಕಿಂತ ಕಡಿಮೆ ಮತ ಪಡೆದ, ಅಂದರೆ ಎರಡನೇ ಸ್ಥಾನದಲ್ಲಿರುವ ಅಭ್ಯರ್ಥಿಯನ್ನು ವಿಜೇತ ಎಂದು ಘೋಷಿಸಲಾಗುತ್ತಿತ್ತು. 2018 ರಲ್ಲಿ ದೇಶದಲ್ಲಿ ಮೊದಲ ಬಾರಿಗೆ ನೋಟಾಗೆ ಸಹ ಅಭ್ಯರ್ಥಿಗೆ ಸಮನಾದ ಸ್ಥಾನಮಾನವನ್ನು ನೀಡಲಾಯಿತು. 2018 ರ ಡಿಸೆಂಬರ್‌ನಲ್ಲಿ ಹರಿಯಾಣದ ಐದು ಜಿಲ್ಲೆಗಳಲ್ಲಿ ನಡೆದ ಮುನ್ಸಿಪಲ್ ಚುನಾವಣೆಯಲ್ಲಿ ನೋಟಾ ಅತಿ ಹೆಚ್ಚು ಮತಗಳನ್ನು ಪಡೆದಿತ್ತು. ಅಂತಹ ಪರಿಸ್ಥಿತಿಯಲ್ಲಿ, ಎಲ್ಲಾ ಅಭ್ಯರ್ಥಿಗಳನ್ನು ಅನರ್ಹರು ಎಂದು ಘೋಷಿಸಲಾಯಿತು. ಇದಾದ ಬಳಿಕ ಚುನಾವಣಾ ಆಯೋಗ ಮರು ಚುನಾವಣೆ ನಡೆಸಲು ನಿರ್ಧರಿಸಿತ್ತು.

ಮರು ಚುನಾವಣೆಯಲ್ಲಿಯೂ ನೋಟಾ ಗೆದ್ದರೆ ಏನಾಗಬಹುದು?

ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗದ 2018 ರ ಆದೇಶದಲ್ಲಿ, ನೋಟಾಗೆ ‘ಕಾಲ್ಪನಿಕ ಚುನಾವಣಾ ಅಭ್ಯರ್ಥಿ’ ಸ್ಥಾನಮಾನವನ್ನು ನೀಡಲಾಗಿದೆ. ನೋಟಾ ಎಲ್ಲಕ್ಕಿಂತ ಹೆಚ್ಚು ಮತಗಳನ್ನು ಪಡೆದರೆ ಮತ್ತೆ ಚುನಾವಣೆ ನಡೆಯಲಿದೆ. ಆದರೆ ಚುನಾವಣೆಯ ನಂತರವೂ ಯಾವುದೇ ಅಭ್ಯರ್ಥಿ ನೋಟಾಕ್ಕಿಂತ ಹೆಚ್ಚಿನ ಮತಗಳನ್ನು ಪಡೆಯಲು ಸಾಧ್ಯವಾಗದಿದ್ದರೆ, ಮೂರನೇ ಬಾರಿಗೆ ಚುನಾವಣೆ ನಡೆಯುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನೋಟಾ ನಂತರ ಹೆಚ್ಚು ಮತಗಳನ್ನು ಪಡೆದ ಅಭ್ಯರ್ಥಿಯನ್ನು ವಿಜೇತ ಎಂದು ಘೋಷಿಸಲಾಗುತ್ತದೆ. ಆದೇಶದ ಪ್ರಕಾರ, ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗದ ಈ ನಿಯಮಗಳು ಆ ರಾಜ್ಯದಲ್ಲಿನ ಚುನಾವಣೆಗಳಿಗೆ ಸೀಮಿತವಾಗಿದೆ.

Previous Post

Vote From Home: ಲೋಕಸಭೆ ಚುನಾವಣೆ, ಕರ್ನಾಟಕದಲ್ಲಿ ಮನೆಯಿಂದಲೇ ಮತದಾನ ಮಾಡಲು 12 ಲಕ್ಷ ಮಂದಿಗೆ ಅವಕಾಶ

Next Post

ಲೋಕಸಭಾ ಚುನಾವಣೆ 2024: ವಾರಾಣಸಿಯಲ್ಲಿ ಮೋದಿ ವಿರುದ್ಧ ತೃತೀಯ ಲಿಂಗಿ ಸ್ಪರ್ಧೆ

Next Post
ಲೋಕಸಭಾ ಚುನಾವಣೆ 2024: ವಾರಾಣಸಿಯಲ್ಲಿ ಮೋದಿ ವಿರುದ್ಧ ತೃತೀಯ ಲಿಂಗಿ ಸ್ಪರ್ಧೆ

ಲೋಕಸಭಾ ಚುನಾವಣೆ 2024: ವಾರಾಣಸಿಯಲ್ಲಿ ಮೋದಿ ವಿರುದ್ಧ ತೃತೀಯ ಲಿಂಗಿ ಸ್ಪರ್ಧೆ

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.