
ಟೆಲ್ ಅವಿವ್: ಕತಾರ್ ಮೂಲದ ಅಲ್ ಜಜೀರಾ (Al Jazeera) ಸುದ್ದಿ ವಾಹಿನಿ ಇಸ್ರೇಲ್‌ನಲ್ಲಿ ನಿಷೇಧವಾಗಲಿದೆ. ಇಸ್ರೇಲ್ ಸಂಸತ್ತು (Israel Parliament) ಅಲ್ ಜಜೀರಾ ಸುದ್ದಿ ವಾಹಿನಿಯನ್ನು ನಿಷೇಧಿಸುವ ಮಸೂದೆಯನ್ನು ಸೋಮವಾರ ಪಾಸ್ ಮಾಡಿದೆ.

ಈ ಮಸೂದೆ ಮಂತ್ರಿಗಳಿಗೆ ಇಸ್ರೇಲ್‌ನಿಂದ ಸುದ್ದಿ ವಾಹಿನಿಯ ಪ್ರಸಾರವನ್ನು ನಿಷೇಧಿಸುವ ಅಧಿಕಾರವನ್ನು ನೀಡುತ್ತದೆ. ಮತಕ್ಕೆ ಹಾಕಿದಾಗ 70 ಮಂದಿ ಸಂಸದರು ಒಪ್ಪಿಗೆ ನೀಡಿದರೆ 10 ಮಸೂದೆಯನ್ನು ವಿರೋಧಿಸಿದ್ದರು. ಮಸೂದೆಯಲ್ಲಿ ರಾಷ್ಟ್ರೀಯ ಭದ್ರತೆಗೆ ಹಾನಿಯುಂಟುಮಾಡುವ ವಿದೇಶಿ ವಾಹಿನಿಗಳ ಪ್ರಸಾರವನ್ನು ನಿಷೇಧಿಸುವ ಅಧಿಕಾರದ ಜೊತೆ ಇಸ್ರೇಲ್‌ನಲ್ಲಿ ಅವರ ಕಚೇರಿ ಮುಚ್ಚಲು ಅನುಮತಿ ನೀಡುತ್ತದೆ

ಮಸೂದೆ ಅಧಿಕೃತವಾಗಿ ಕಾನೂನಾಗಿ ಜಾರಿಗೆ ಬಂದ ಕೂಡಲೇ ಇಸ್ರೇಲ್‌ನಲ್ಲಿ ಅಲ್ ಜಜೀರಾ ನಿಷೇಧಿಸಲು ಕ್ರಮ ತೆಗೆದುಕೊಳ್ಳುವುದಾಗಿ ಪ್ರಧಾನಿ ಕಾರ್ಯಾಲಯ ತಿಳಿಸಿದೆ
