
ಹೊರರಾಜ್ಯದ ಯುವಕನ ಮೇಲೆ ಮನೆಮಂದಿ ಎಲ್ಲರೂ ಸೇರಿ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ನಿನ್ನೆ(ಮಾ.28) ಮಧ್ಯಾಹ್ನ ಮಂಗಳೂರು(Mangaluru) ಹೊರವಲಯದ ಅರ್ಕುಳದಲ್ಲಿ ನಡೆದಿದೆ. ಬೆಲ್ಟ್, ಚೇರ್ ಸೇರಿದಂತೆ ಸಿಕ್ಕ ಸಿಕ್ಕ ವಸ್ತಗಳಿಂದ ಹೊಡೆದಿದ್ದು, ಜೊತೆ ಇರುವ ಮತ್ತೋರ್ವನ ಮೇಲೂ ಹಲ್ಲೆ ಮಾಡಲಾಗಿದೆ

ದಕ್ಷಿಣ ಕನ್ನಡ, ಮಾ.29: ಹೊರರಾಜ್ಯದ ಯುವಕನ ಮೇಲೆ ಮನೆಮಂದಿ ಎಲ್ಲರೂ ಸೇರಿ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ನಿನ್ನೆ(ಮಾ.28) ಮಧ್ಯಾಹ್ನ ಮಂಗಳೂರು (Mangaluru) ಹೊರವಲಯದ ಅರ್ಕುಳದಲ್ಲಿ ನಡೆದಿದೆ. ಬೆಲ್ಟ್, ಚೇರ್ ಸೇರಿದಂತೆ ಸಿಕ್ಕ ಸಿಕ್ಕ ವಸ್ತಗಳಿಂದ ಹೊಡೆದಿದ್ದು, ಜೊತೆ ಇರುವ ಮತ್ತೋರ್ವನ ಮೇಲೂ ಹಲ್ಲೆ ಮಾಡಲಾಗಿದೆ. ಹಲ್ಲೆ ದೃಶ್ಯ ಅದೇ ಮನೆಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಘಟನೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಬಗ್ಗೆ ಇನ್ನೂ ಪೊಲೀಸ್ ದೂರು ದಾಖಲಾಗಿಲ್ಲ.

