
ಲೋಕಸಭೆ ಚುನಾವಣೆ ಕಾದಾಟ ಈಗಷ್ಟೆ ರಂಗೇರುತ್ತಿದೆ.. ರಾಜ್ಯದ ಮೊದಲ ಹಂತದಲ್ಲಿ ನಾಮಪತ್ರ ಸಲ್ಲಿಕೆಗಳ ಭರಾಟೆ ಶುರುವಾಗ್ತಿದೆ.. ಈ ವೇಳೆ ಘಟಾನುಘಟಿ ನಾಯಕರುಗಳ ಮೂಲಕ ರೋಡ್ ಶೋ, ಸಭೆ-ಸಮಾರಂಭ ನಡೆಸಿ, ಅವರಿಂದ್ಲೇ ನಾಮಪತ್ರ ಸಲ್ಲಿಸುವ ಯೋಜನೆಗಳು ಸಿದ್ದಗೊಂಡಿವೆ.. ರಾಜ್ಯದಲ್ಲಿ ಇವತ್ತೇ ಎಲೆಕ್ಷನ್ ಕಾವು ಬಿಸಿಲಿಗೆ ಸೆಡ್ಡು ಹೊಡೆಯಲಿದೆ..

ಕರ್ನಾಟಕದ ರಣಕಾಳಗ ಇಂದಿನಿಂದ ಚಾಲನೆ ಸಿಗ್ತಿದೆ.. ಮತಯುದ್ಧದ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗ್ತಿದೆ.. ರಾಜ್ಯದಲ್ಲಿ ಎರಡು ಮತ್ತು ಮೂರನೇ ಹಂತದಲ್ಲಿ ಮತದಾನ ನಡೆಯುತ್ತಿದ್ದು, 2ನೇ ಹಂತದ ಚುನಾವಣಾ ಪ್ರಕ್ರಿಯೆಗೆ ಇವತ್ತು ಅಧಿಸೂಚನೆ ಪ್ರಕಟವಾಗಲಿದೆ.. ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಇಂದಿನಿಂದಲೇ ನಾಮಪತ್ರ ಸಲ್ಲಿಕೆ ಭರಾಟೆ ಆರಂಭವಾಗಲಿದೆ

ಏಪ್ರಿಲ್ 26ರಂದು ಮತದಾನ, ಜೂನ್ 4ರಂದು ಫಲಿತಾಂಶ
ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಶುರುವಾಗ್ತಿದ್ದು ಏಪ್ರಿಲ್ 4ರ ವರೆಗೂ ನಾಮಪತ್ರ ಸಲ್ಲಿಸಬಹುದಾಗಿದೆ.. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ ಮೂರು ಗಂಟೆವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ.. ಸಾಮಾನ್ಯ ವರ್ಗದ ಅಭ್ಯರ್ಥಿಗಳು 25,000 ರೂ. ಠೇವಣಿ ಇಡಬೇಕಾಗಿದ್ದು, ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 12,500 ರೂ. ಠೇವಣಿ ನಿಗದಿ ಆಗಿದೆ.. ಏಪ್ರಿಲ್ 6ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಏಪ್ರಿಲ್ 8 ನಾಮಪತ್ರ ವಾಪಸ್ ತೆಗೆದುಕೊಳ್ಳಲು ಕೊನೆಯ ದಿನವಾಗಿದೆ.. ಏಪ್ರಿಲ್ 26ರಂದು ಮತದಾನ ನಡೆಯಲಿದ್ದು, ಜೂನ್ 4ರಂದು

ನಾಮಪತ್ರ ಸಲ್ಲಿಕೆ ಮೊದಲ ದಿನ ಬ್ರದರ್ ನಾಮಿನೇಷನ್
ಬೆಂಗಳೂರು ಗ್ರಾಮಾಂತರ ಈ ಬಾರಿ ಇಡೀ ರಾಜ್ಯದಲ್ಲೇ ಹೈವೋಲ್ಟೇಜ್ ಕ್ಷೇತ್ರ.. ಗೌಡ್ರು-ಡಿಕೆಶಿ ಕುಟುಂಬದ ನಡುವೆ ಸಂಗ್ರಾಮಕ್ಕೆ ವೇದಿಕೆ ಆಗ್ತಿದೆ.. ಗೌಡ್ರ ಕುಟುಂಬಕ್ಕೆ ಬಿಜೆಪಿಯ ಬಲ ಸೇರಿದೆ.. ಹೀಗಾಗಿ ಎರಡು ಪಕ್ಷಗಳು ಅನ್ನೋದಕ್ಕಿಂತ 2 ಕುಟುಂಬಗಳ ಮದಗಜ ಕಾಳಗಕ್ಕೆ ಸಾಕ್ಷಿ ಬರೆಯಲಿದೆ.. ಇವತ್ತೇ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಉಮೇದುವಾರಿಕೆ ಸಲ್ಲಿಸಲಿದ್ದಾರೆ.. ಆದ್ರೆ, ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಕೊನೆ ದಿನ ಅಂದ್ರೆ ಏಪ್ರಿಲ್ 4ರಂದು ನಾಮಪತ್ರ ಸಲ್ಲಿಕೆ ಮಾಡ್ಲಿದ್ದಾರೆ.

ಇವತ್ತು ಇಡೀ ಕಾಂಗ್ರೆಸ್ ದಂಡೇ ರಾಮನಗರಕ್ಕೆ ಲಗ್ಗೆ ಹಾಕಲಿದೆ.. ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಹಲವರು ಸಾಥ್ ನೀಡ್ತಿದ್ದಾರೆ.. ಬೆಳಗ್ಗೆ ನಗರದಲ್ಲಿ ಱಲಿ, ರೋಡ್ ಶೋ ಮೂಲಕ ಶಕ್ತಿ ಪ್ರದರ್ಶನ ನಡೆಯಲಿದೆ.. ಬಳಿಕ ಬಹಿರಂಗ ಸಭೆ ಆಯೋಜನೆ ಆಗಿದೆ..
