
ಮಂಗಳೂರು :ದಕ್ಷಿಣಕನ್ನಡ ದಲ್ಲಿ ಬಿಲ್ಲವ,ಬಂಟ ರಾಜಕೀಯ ಉತ್ತುಂಗದಲ್ಲಿರುವ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅತೀ ಹೆಚ್ಚು ಮತದಾರರಿರುವ ಬ್ಯಾರಿ ಸಮುದಾಯಕ್ಕೆ ಅಭ್ಯರ್ಥಿ ಯಾರು ಎಂದು ಚರ್ಚೆ ನಡೆಯುತ್ತಿದೆ. ಮುಸ್ಲಿಂ ಸಮುದಾಯದ ಓಟು ಯಾಕೆ ಒಂದು ಶಕ್ತಿ ಯಾಗಿ ಹೊರಬರಬಾರದು ಎಂದು ಮುಸ್ಲಿಂ ಸಮುದಾಯದ ನಾಯಕರು ಗಂಭೀರ ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿ ಗಳು ಟಿಕೆಟ್ ಘೋಷಣೆ ಯಾದ ನಂತರ ತಮ್ಮ ತಮ್ನ ಜಾತಿ ರಾಜಕಾರಣ ಕ್ಕಾಗಿ ಅವರ ಸಮುದಾಯದ ನಾಯಕರ ಭೇಟಿ ಮಾಡಿ, ದೇವಸ್ಥಾನ ಗಳಿಗೆ ಭೇಟಿ ನೀಡುವ ಪೈಪೋಟಿ ಕಾಣುವಾಗ ಈ ಬಾರಿ ಜಿಲ್ಲೆಯಲ್ಲಿ ಜಾತಿಯಾಧಾರಿತ ಚುನಾವಣೆ ನಡೆಯುವುದು ಖಂಡಿತ ಎನ್ನಲಾಗುತಿದೆ.

ಆದುದರಿಂದ ಮುಸ್ಲಿಂ ಸಮುದಾಯ ದಿಂದ ಒಬ್ಬ ಪ್ರಬಲ ಅಭ್ಯರ್ಥಿ ಸ್ಪರ್ದಿಸುವುದು ಖಚಿತ ಎಂದು ತಿಳಿದು ಬಂದಿದೆ . ಬ್ಯಾರಿ ಸಮುದಾಯದ 5ಲಕ್ಷ ಮತ ಒಗ್ಗೂಡುವುದರಿಂದ ಸಮುದಾಯದ ಅಭಿವೃದ್ಧಿ ಗೆ, ಪ್ರಬಲವಾಗಿ ಹೋರಾಡಲು ಸಾಧ್ಯವಾಗುತ್ತದೆ ಎಂದು ರಾಜಕೀಯ ವಿಶ್ಲೇಷಣೆ ನಡೆಯುತ್ತಿದೆ.


