
ಮಾಸ್ಕೋ: ಶುಕ್ರವಾರ ರಾತ್ರಿ ಮಾಸ್ಕೋದ ಅತೀ ದೊಡ್ಡ ಒಳಾಂಗಣ ಸಭಾಂಗಣವಾದ ಕ್ರಾಕಸ್ ಸಿಟಿ ಹಾಲ್ನಲ್ಲಿ ನುಗ್ಗಿದ ಶಸ್ತ್ರ ಸಜ್ಜಿತ ಉಗ್ರರ ಗುಂಡಿನ ದಾಳಿಯಿಂದ ಸಾವಿನ ಸಂಖ್ಯೆ 115ಕ್ಕೆ ಏರಿಕೆ ಆಗಿದೆ. 150ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ರಷ್ಯಾದ ತನಿಖಾ ಸಮಿತಿ ಶನಿವಾರ ತಿಳಿಸಿದೆ.

ಈ ಪ್ರಕರಣದಲ್ಲಿ ಭಾಗಿಯಾಗಿರುವ 11 ಜನರನ್ನು ಶನಿವಾರ ಬಂಧಿಸಲಾಗಿದೆ ಎಂದು ಕ್ರೆಮ್ಲಿನ್ ಹೇಳಿದೆ. ಬಂಧಿತರಲ್ಲಿ ನಾಲ್ಕು ಭಯೋತ್ಪಾದಕರು ಸೇರಿದ್ದಾರೆ ಎಂದು ವರದಿಯಾಗಿದೆ. ಸಾವಿನ ಸಂಖ್ಯೆ 200ರ ಗಡಿ ದಾಟುವ ಅಪಾಯವಿದೆ. ಕಾರ್ಯಕ್ರಮ ನಡೆಯುತ್ತಿದ್ದಾಗ ಸಭಾಂಗಣದ ಒಳಗಡೆಯಿದ್ದ ಮಹಿಳೆಯರು ಮತ್ತು ಮಕ್ಕಳು ಎನ್ನದೆ ಕಂಡಕಂಡವರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು ಬಾಂಬುಗಳನ್ನು ಎಸೆದಿದ್ದಾರೆ.
ಶುಕ್ರವಾರ ಶಸ್ತ್ರ ಸಜ್ಜಿತ ದಾಳಿ ಬಳಿಕ ಉಗ್ರರು ಪಾರಾರಿಯಾಗಿದ್ದಾರೆ. ತಕ್ಷಣ ಅಲರ್ಟ್ ಆದ ಪೊಲೀಸರು ಮಾಸ್ಕೋದ ಬ್ರಿಯಾನ್ಸ್ಕ್ ಪ್ರದೇಶದಲ್ಲಿ ರೆನಾಲ್ಟ್ ವಾಹನದಲ್ಲಿ ಪಾರಾರಿಯಾಗುತ್ತಿರುವರನ್ನು ಪತ್ತೆ ಮಾಡಿದ್ದಾರೆ. ಹಾಗೂ ಪೊಲೀಸರು ಇವರನ್ನು ತಡೆಯಲು ಪ್ರಯತ್ನಿಸಿದರು ಸಂಚಾರ ನಿಯಮಗಳನ್ನು ಸೂಚನೆಗಳನ್ನು ಉಲ್ಲಂಘಿಸಿದ್ದಾರೆ ಎಂದು ರಷ್ಯಾದ ಶಾಸಕ ಅಲೆಕ್ಸಾಂಡರ್ ಖಿನ್ಸ್ಟೈನ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ದಾಳಿಕೋರರ ಕಾರನ್ನು ಚೇಸ್ ಮಾಡಿ ಇಬ್ಬರನ್ನು ಬಂಧಿಸಲಾಗಿದೆ. ಇನ್ನಿಬ್ಬರು ಕಾಡಿನಲ್ಲಿ ಪರಾರಿಯಾಗಿದ್ದಾರೆ ಎಂದು ಹೇಳಿದರು. ನಂತರ ಅವರನ್ನೂ ನಂತರ ಬಂಧಿಸಲಾಯಿತು.
ಕಾರಿನಲ್ಲಿ ಪಿಸ್ತೂಲ್, ಅಸಾಲ್ಟ್ ರೈಫಲ್‌ಗಾಗಿ ಮ್ಯಾಗಜೀನ್ ಮತ್ತು ತಜಕಿಸ್ತಾನದ ಪಾಸ್‌ಪೋರ್ಟ್‌ಗಳು ಪತ್ತೆಯಾಗಿವೆ ಎಂದು ಖಿನ್‌ಸ್ಟೈನ್ ಹೇಳಿದ್ದಾರೆ.
ಸುದ್ದಿಸಂಸ್ಥೆ ಎಪಿ ವರದಿ ಮಾಡಿದೆ. ರಷ್ಯಾ ಉಕ್ರೇನ್ ಮೇಲೆ ಯುದ್ಧ ಆರಂಭಿಸಿದ ನಂತರ ಇದೇ ಮೊದಲ ಬಾರಿಗೆ ರಷ್ಯಾದಲ್ಲಿನ ನಡೆದ ದೊಡ್ಡ ದಾಳಿ ಇದಾಗಿದೆ.

ಕ್ರಾಕಸ್ ಸಿಟಿ ಹಾಲ್ ಸುಮಾರು 6 ಸಾವಿರ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸುವ ದೊಡ್ಡ ಸಭಾಂಗಣವಾಗಿದೆ. ಇತ್ತೀಚೆಗಷ್ಟೇ ನಡೆದ ರಷ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ವ್ಲಾದಿಮಿರ್ ಪುಟಿನ್ ಅವರು ಅಧ್ಯಕ್ಷರಾಗಿ ಪುನರಾಯ್ಕೆಯಾದ ಬೆನ್ನಲ್ಲೇ ರಷ್ಯಾದ ಮೇಲೆ ದೊಡ್ಡ ದಾಳಿ ನಡೆದಿದೆ.
