
ರಷ್ಯಾದ ನೆಲದ ಮಾಸ್ಕೋದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ.. ಸಂಗೀತ ಕಾರ್ಯಕ್ರಮದ ಮೇಲೆ ಭಯೋತ್ಪಾದಕರ ಪಡೆಯ ಗುಂಡಿನ ದಾಳಿಗೆ ಸುಮಾರು 60 ಮಂದಿ ಬಲಿಯಾಗಿದ್ದಾರೆ. ಇನ್ನೂ ದಾಳಿಕೋರರು ಎಸಗಿರುವ ಕೃತ್ಯಗಳ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಸಂಗೀತ ಕಾರ್ಯಕ್ರಮದ ಮೇಲೆ ದಾಳಿ, 60 ಮಂದಿ ಬಲಿ
ರಷ್ಯಾದ ಮಾಸ್ಕೋದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಿದ ಉಗ್ರರು ಗುಂಡಿನ ಸುರಿಮಳೆಯನ್ನೇ ಗೈದಿದ್ದು, ಭಯೋತ್ಪಾದಕರ ಅಟ್ಟಹಾಸಕ್ಕೆ ಇಡೀ ರಷ್ಯಾವೇ ಬೆಚ್ಚಿಬಿದ್ದಿದೆ.


ಮಾಸ್ಕೋದ ಹಾಲ್ ಒಂದರಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು. ಇದರಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಈ ವೇಳೆ ಸ್ಥಳಕ್ಕೆ ಎಂಟ್ರಿಕೊಟ್ಟ ಭಯೋತ್ಪಾದಕರು ಯಾರೂ ಊಹಿಸಲಾರದ ಕೃತ್ಯವೆಸಗಿದ್ದಾರೆ. ನೋಡ ನೋಡ್ತಿದ್ದಂತೆ ನಾಲ್ವರು ಬಂದೂಕುದಾರಿಗಳು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಮನಸೋ ಇಚ್ಛೆ ಗುಂಡಿನ ಸುರಿಮಳೆಗೈದಿದ್ದಾರೆ. ಈ ದಾಳಿಯಲ್ಲಿ ಕನಿಷ್ಠ 60 ಮಂದಿ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

https://twitter.com/shahhasnain77/status/1771350551566995605?ref_src=twsrc%5Etfw%7Ctwcamp%5Etweetembed%7Ctwterm%5E1771350551566995605%7Ctwgr%5Ed1ec4330d3f7973adffa60485e1eb2d32d285832%7Ctwcon%5Es1_c10&ref_url=https%3A%2F%2Fnewsfirstlive.com%2Fmoscow-concert-attack-kremlin-says-40-died-over-100-wounded-deadliest-in-recent-years%2F

ಇತ್ತೀಚಿನ ವರ್ಷಗಳಲ್ಲಿ ರಷ್ಯಾದಲ್ಲಿ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿಯೆಂದು ತಿಳಿದು ಬಂದಿದೆ. ದಾಳಿಕೋರರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಸಂಗೀತ ಕಾರ್ಯಕ್ರಮದ ಸಮಯದಲ್ಲಿ ಹಾಲ್ನ ಪ್ರವೇಶದ್ವಾರದಿಂದ ಗುಂಡಿನ ಸುರಿಮಳೆಗೈದರು. ಇದರಿಂದ ಭಯಭೀತರಾದ ಜನರು ಪಾರಾಗಲು ದಿಕ್ಕಾಪಾಲಾಗಿ ಓಡಿದ್ದಾರೆ. ಘಟನೆಯ ವೀಡಿಯೊಗಳಲ್ಲಿ ಸ್ಫೋಟದ ಶಬ್ದಗಳು ಕೇಳಿಬಂದಿದ್ದು, ದಾಳಿಕೋರರು ಸ್ಫೋಟಕಗಳನ್ನು ಬಳಸಿದ್ದಾರೆ ಎಂದು ವರದಿಯಾಗಿದೆ.

ಓರ್ವ ದಾಳಿ ಕೋರನನ್ನು ಬಂಧಿಸಿದ ರಷ್ಯಾ ಭದ್ರತಾ ಪಡೆಗಳು
ಮಾಸ್ಕೋ ಮೇಯರ್ ಸೆರ್ಗೆಯ್ ಸೊಬಯಾನಿನ್ ದಾಳಿಯನ್ನು ದೊಡ್ಡ ದುರಂತ ಎಂದಿದ್ದು, ದಾಳಿ ನಡೆದ ಸ್ಥಳಕ್ಕೆ 50 ಆಂಬುಲೆನ್ಸ್‌ಗಳನ್ನು ರವಾನಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಭದ್ರತಾ ಪಡೆಗಳನ್ನು ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಉಗ್ರರ ದಾಳಿ ಇಡೀ ಮಾಲ್ ಹೊತ್ತಿ ಉರಿದಿದೆ. ಐವರು ಬಂದೂಕುದಾರಿಗಳು ಬಳಿ ಬಣ್ಣದ ಮಿನಿ ವ್ಯಾನ್ನಲ್ಲಿ ಬಂದಿದ್ದು, ಪರಿಶೀಲನೆ ನಡೆಸಲಾಗ್ತಿದೆ. ಹಾಗೂ ಓರ್ವ ದಾಳಿಕೋರನನ್ನು ರಷ್ಯಾದ ಭದ್ರತಾ ಪಡೆಗಳು ಅರೆಸ್ಟ್ ಮಾಡಿವೆ. ಇನ್ನು ಬೆಂಕಿ ನಂದಿಸಲು 320 ಅಗ್ನಿ ಶಾಮಕ ವಾಹನಗಳು, 3 ಹೆಲಿಕಾಫ್ಟರ್ಗಳನ್ನು ಬಳಸಿಕೊಳ್ಳಲಾಗಿದೆ. ಕನ್ಸರ್ಟ್ ಹಾಲ್ನ ಮೇಲ್ಛಾವಣಿ ಬೆಂಕಿಹಾಹುತಿಯಾಗಿದೆ.
ರಷ್ಯಾ ಅಧ್ಯಕ್ಷ ಪುಟಿನ್ ಕೂಡ, ದಾಳಿಯ ಬಗ್ಗೆ ಕ್ಷಣ ಕ್ಷಣದ ಮಾಹಿತಿಯನ್ನು ಪಡೆದುಕೊಳ್ತಿದ್ದಾರೆ. ಹಾಗೂ ಮಾಸ್ಕೋದ ಏರ್ಪೋರ್ಟ್, ಬಸ್ ಸ್ಟೇಷನ್, ಜನದಟ್ಟಣೆ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಿಲಾಗಿದೆ. ಈ ಭಯೋತ್ಪಾದಕ ದಾಳಿಯನ್ನು ಖಂಡಿರುವ ಅಮೆರಿಕ, ಮಾಸ್ಕೋದಲ್ಲಿರುವ ತನ್ನ ದೇಶದ ಪ್ರಜೆಗಳಿಗೆ ಮುಂದಿನ 48 ಗಂಟೆಗಳ ಕಾಲ ಜನ ಸಂದಣಿ ಸೇರುವ ಜಾಗಗಳಿಗೆ ತೆರಳದಂತೆ ಸೂಚನೆ ನೀಡಿದೆ. ಮತ್ತೊಂದೆಡೆ ಉಕ್ರೇನ್. ಈ ದಾಳಿಗೂ ನಮಗೂ ಸಂಬಂಧ ಇಲ್ಲ ಎಂದು ವಾದ ಮಾಡಿದೆ.
ಸಂಗೀತ ಕಾರ್ಯಕ್ರಮದಲ್ಲಿ ರಕ್ತದೋಕುಳಿ ಹರಿದಿದ್ದು, ಭಯೋತ್ಪಾದಕ ದಾಳಿಗೆ ಇಡೀ ರಷ್ಯಾವೇ ಬೆಚ್ಚಿಬಿದ್ದಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.