
ಬಹರಂಪುರದ ಅಭ್ಯರ್ಥಿಯ ಹೆಸರನ್ನು ಕಾಂಗ್ರೆಸ್ ಅಧಿಕೃತವಾಗಿ ಘೋಷಿಸಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಆದರೆ, ಅಧೀರ್ ಬಹರಂಪುರದಿಂದ ಕಣಕ್ಕಿಳಿಯುತ್ತಿರುವುದು ಖಚಿತವಾಗಿದೆ. ತಮ್ಮ ಪ್ರತಿಸ್ಪರ್ಧಿ ಅಧೀರ್ ಬಗ್ಗೆ ಕೇಳಿದಾಗ ‘ಈಗ ಏನನ್ನೂ ಹೇಳುವುದಿಲ್ಲ’ ಎಂದು ನಗುತ್ತಲೇ ಉತ್ತರಿಸಿದ ಪಠಾಣ್, ಕಾಲವೇ ನಿರ್ಣಯಿಸಲಿದೆ ಎಂದಿದ್ದಾರೆ

ಕೋಲ್ಕತ್ತಾ ಮಾರ್ಚ್ 21 : ಮಾಜಿ ಕ್ರಿಕೆಟಿಗ ಮತ್ತು ಬಹರಂಪುರದ (Berhampore) ತೃಣಮೂಲ ಅಭ್ಯರ್ಥಿ ಯೂಸುಫ್ ಪಠಾಣ್ (Yusuf Pathan) ಚುನಾವಣಾ ಪ್ರಚಾರ ಶುರು ಮಾಡಿದ್ದಾರೆ. ಕೊಲ್ಕತ್ತಾದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಬಂದ ಪಠಾಣ್ ಬಹರಂಪುರದಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌದರಿ (Adhir Ranjan Chowdhury) ವಿರುದ್ಧ ಉತ್ತಮ ಸ್ಪರ್ಧೆ ನೀಡುವ ವಿಶ್ವಾಸವಿದೆ ಎಂದರು. ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಬಹರಂಪುರ ಕ್ಷೇತ್ರದ “ಬ್ರೆಟ್ ಲೀ”, ಹಾಲಿ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಅವರಿಗೆ “ಉತ್ತಮ ಹೋರಾಟ ನೀಡಲು ಪ್ರಯತ್ನಿಸುತ್ತೇನೆ” ಎಂದು ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್ ಬಹರಂಪುರರದಿಂದ ಪಠಾಣ್ ಅವರನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ರಂಜನ್ ವಿರುದ್ಧ ಕಣಕ್ಕಿಳಿಸಿದೆ. ಚೌಧರಿ ಅವರು 1999 ರಿಂದ ಇಲ್ಲಿ ಸಂಸದರಾಗಿದ್ದಾರೆ. ಪಶ್ಚಿಮ ಬಂಗಾಳವು ಏಪ್ರಿಲ್ 19 ರಂದು ಪ್ರಾರಂಭವಾಗುವ ಮತ್ತು ಜೂನ್ 1 ರಂದು ಕೊನೆಗೊಳ್ಳಲಿರುವ ರಾಷ್ಟ್ರೀಯ ಚುನಾವಣೆಯ ಎಲ್ಲಾ ಏಳು ಹಂತಗಳಲ್ಲಿ 42 ಸದಸ್ಯರನ್ನು ಆಯ್ಕೆ ಮಾಡಲು ಮತ ಚಲಾಯಿಸಲಿದೆ.

ಕೋಲ್ಕತ್ತಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಠಾಣ್, “ನಾಳೆ ನನ್ನ ಮೊದಲ ದಿನ ಪ್ರಚಾರ. ಪ್ರತಿ ಇನ್ನಿಂಗ್ಸ್‌ನ ಮೊದಲು ಯಾವಾಗಲೂ ಉತ್ಸಾಹ ಇರುತ್ತದೆ, ಅದೇ ರೀತಿಯಲ್ಲಿ, ಈ ಇನ್ನಿಂಗ್ಸ್‌ಗಾಗಿ ನಾನು ತುಂಬಾ ಉತ್ಸುಕನಾಗಿದ್ದೇನೆ” ಎಂದು ಹೇಳಿದರು. ಅವರು ಚುನಾವಣೆಯ ತನಕ ನಗರದಲ್ಲಿ ಉಳಿಯಲು ಹೋಗುತ್ತೀರಾ ಎಂದು ಕೇಳಿದಾಗ, ಮಾಜಿ ಕ್ರಿಕೆಟಿಗ ಅವರು ಕೋಲ್ಕತ್ತಾದಲ್ಲಿ ಇರುವುದಾಗಿ ಖಚಿತಪಡಿಸಿದ್ದು ಇದು ನನ್ನ “ಎರಡನೇ ಮನೆ” ಎಂದಿದ್ದಾರೆ.
“ನಾನು ಬಹಳ ಸಮಯದ ನಂತರ ಕೋಲ್ಕತ್ತಾಗೆ ಮರಳಿದ್ದೇನೆ. ಇದು ನನ್ನ ಎರಡನೇ ಮನೆ. ನಾನು ಇಲ್ಲಿಯೇ ವಾಸಿಸುತ್ತೇನೆ. ನಾನು ಏಳು ವರ್ಷಗಳ ಕಾಲ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಗಾಗಿ ಆಡಿದಾಗ ನಗರವು ನನ್ನ ಮನೆಯಾಯಿತು ಎಂದಿದ್ದಾರೆ.

ಬೌನ್ಸರ್ ಅನ್ನು ನಿಭಾಯಿಸಬಲ್ಲರೇ ಅಧೀರ್ ಚೌಧರಿ?
2019 ರಲ್ಲಿ, ತೃಣಮೂಲ ಅಧೀರ್ ಅವರ ಒಂದು ಕಾಲದ ಶಿಷ್ಯೆ ಅಪುರ್ಬಾ ಸರ್ಕಾರ್ ಅಲಿಯಾಸ್ ಡೇವಿಡ್ ಅವರನ್ನು ಬಹರಂಪುರದಲ್ಲಿ ಕಣಕ್ಕಿಳಿಸಿತು. ಗುರು-ಶಿಷ್ಯ ಇಬ್ಬರೂ 5 ಲಕ್ಷಕ್ಕೂ ಹೆಚ್ಚು ಮತ ಪಡೆದಿದ್ದಾರೆ. ಚೌಧರಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು. ಮಾಜಿ ಕೇಂದ್ರ ಸಚಿವ. ಬಹರಂಪುರ ಇವರ ತವರು. 1999 ರಿಂದ ಮುರ್ಷಿದಾಬಾದ್ ಲೋಕಸಭಾ ಕ್ಷೇತ್ರದ ಸಂಸದ. ಅಧೀರ್ ಚೌಧರಿ ಲೋಕಸಭೆ ಚುನಾವಣೆಯಲ್ಲಿ ಕಠಿಣ ಸವಾಲನ್ನು ಎದುರಿಸಬೇಕಾಗಬಹುದು.ಅವರಿಗೆ ಈ ಚುನಾವಣೆ ಅಷ್ಟು ಸುಲಭವಲ್ಲ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ