
ಹೊಸದಿಲ್ಲಿ: ಲೋಕಸಭೆ ಚುನಾವಣೆ ಘೋಷಣೆ ಯಾಗಿ ರುವ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಜಾಹೀರಾತುಗಳನ್ನು ತೆರವು ಮಾಡಬೇಕು. ಈ ಬಗ್ಗೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಚುನಾವಣ ಆಯೋಗ ಬುಧವಾರ ಸೂಚನೆ ನೀಡಿದೆ.
ಈ ಆದೇಶಕ್ಕೆ ಸಂಬಂಧಿಸಿದಂತೆ 24 ಗಂಟೆಗಳ ಒಳಗೆ ಕ್ರಮ ಕೈಗೊಂಡಿರುವ ಬಗ್ಗೆ ವರದಿ ಸಲ್ಲಿಸಬೇಕು ಎಂದೂ ಸೂಚಿಸಿದೆ. ಲೋಕಸಭೆ ಚುನಾವಣೆ ಹಾಗೂ 4 ರಾಜ್ಯಗಳ ವಿಧಾನಸಭೆ ಚುನಾವಣೆಗಳಿಗೆ ಮಾ.16ರಂದು ಅಧಿಸೂಚನೆ ಹೊರಡಿಸಿದ್ದರೂ ಇನ್ನೂ ಕೆಲವು ರಾಜ್ಯಗಳಲ್ಲಿ ರಾಜಕೀಯ ಜಾಹೀರಾತುಗಳನ್ನು ಪ್ರದರ್ಶಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಎಲ್ಲ ರೀತಿಯ ರಾಜಕೀಯ ಜಾಹೀರಾತು, ಗೋಡೆ ಬರಹಗಳು, ಕಟೌಟ್‌ಗಳನ್ನು ತೆಗೆಯಬೇಕು ಎಂದು ಆಯೋಗ ರಾಜ್ಯ ಸರಕಾರಗಳಿಗೆ ಸೂಚನೆ ನೀಡಲಾಗಿದೆ.ಅನಧಿಕೃತ ಜಾಹೀರಾತುಗಳ ಬಗ್ಗೆ ಕಾಂಗ್ರೆಸ್ ಕೂಡ ಚುನಾವಣ ಆಯೋಗದ ಗಮನ ಸೆಳೆದಿತ್ತು. ಹೀಗಾಗಿ ಸರಕಾರ, ಖಾಸಗಿ ವ್ಯಕ್ತಿಗಳು ಹಾಗೂ ಸಾರ್ವಜನಿ ಕರಿಂದ ಪ್ರದರ್ಶಿತ ವಾಗುತ್ತಿರುವ ರಾಜಕೀಯ ಜಾಹೀರಾತುಗಳನ್ನು ತೆರವು ಮಾಡಬೇಕು ಎಂದು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿ ರುವ ಪತ್ರದಲ್ಲಿ ಚುನಾವಣ ಆಯೋಗ ತಿಳಿಸಿದೆ.

ಅನಧಿಕೃತ ಜಾಹೀರಾತುಗಳ ಬಗ್ಗೆ ಕಾಂಗ್ರೆಸ್ ಕೂಡ ಚುನಾವಣ ಆಯೋಗದ ಗಮನ ಸೆಳೆದಿತ್ತು. ಹೀಗಾಗಿ ಸರಕಾರ, ಖಾಸಗಿ ವ್ಯಕ್ತಿಗಳು ಹಾಗೂ ಸಾರ್ವಜನಿ ಕರಿಂದ ಪ್ರದರ್ಶಿತ ವಾಗುತ್ತಿರುವ ರಾಜಕೀಯ ಜಾಹೀರಾತುಗಳನ್ನು ತೆರವು ಮಾಡಬೇಕು ಎಂದು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿ ರುವ ಪತ್ರದಲ್ಲಿ ಚುನಾವಣ ಆಯೋಗ ತಿಳಿಸಿದೆ.
